ಕ್ರಿಯಾಯೋಜನೆ:ಅಪಸ್ವರ

7

ಕ್ರಿಯಾಯೋಜನೆ:ಅಪಸ್ವರ

Published:
Updated:

ಗುಲ್ಬರ್ಗ:  ಸ್ಥಾಯಿ ಸಮಿತಿಯಲ್ಲಿ 2012-13ನೇ ಸಾಲಿನ ಬಜೆಟ್ ಕ್ರಿಯಾ ಯೋಜನೆ ಅನುಮೋದಿಸಿದ್ದನ್ನು ಸಾಮಾನ್ಯ ಸಭೆಯ ಮುಂದಿಡದೆ ರಾಜ್ಯ ಸರ್ಕಾರಕ್ಕೆ ನೇರವಾಗಿ ಕಳುಹಿಸಿದ್ದಕ್ಕೆ, ಜಿಲ್ಲಾ ಪಂಚಾಯಿತಿ ಹಳೆ ಸಭಾಂಗಣದಲ್ಲಿ ಶುಕ್ರವಾರ ಕರೆಯಲಾಗಿದ್ದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನೇಕ ಸದಸ್ಯರು ವಿರೋಧ ವ್ಯಕ್ತಪಡಿಸಿದರು.`ಸ್ಥಾಯಿ ಸಮಿತಿಯಲ್ಲಿರುವ ಸದಸ್ಯರು ಸಂಪೂರ್ಣ ನಗರದ ಅಭಿವೃದ್ಧಿಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಅವರು ಆಯ್ಕೆಗೊಂಡ ವಾರ್ಡ್‌ಗೆ ಸೀಮಿತವಾಗಿ ಕ್ರಿಯಾಯೋಜನೆ ಸಿದ್ಧಪಡಿಸಿದ್ದಾರೆ. 55 ವಾರ್ಡ್‌ಗೂ ಅನುದಾನ ಹಂಚದೆ, ಕೇವಲ 13  ವಾರ್ಡ್‌ಗೆ ಕ್ರಿಯಾಯೋಜನೆಯಲ್ಲಿ ಅನುದಾನ ನೀಡಿದ್ದಾರೆ. ಪಾಲಿಕೆಗೆ ಪ್ರತಿ ವಾರ್ಡ್ ಜನರು ಕಂದಾಯ ಕಟ್ಟುತ್ತಾರೆ ಎಂಬುದನ್ನು ಸ್ಥಾಯಿ ಸಮಿತಿ ನೆನಪಿಸಿಕೊಂಡಿಲ್ಲ~ ಎಂದು ಸಾಹೇಬಗೌಡ ಪಾಟೀಲ, ಅನಿಲ ಜಾಧವ, ವಿಜಯಕುಮಾರ ವಾಗ್ದಾಳಿ ನಡೆಸಿದರು.`ಸ್ಥಾಯಿ ಸಮಿತಿಯಲ್ಲಿ ಕೈಗೊಂಡ ನಿರ್ಣಯಗಳು ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದಿಲ್ಲ. 2012-13ನೇ ಸಾಲಿನ ಕ್ರಿಯಾ ಯೋಜನೆ ನಿರ್ಣಯಗಳು ಎನ್ನುವ ಶೀರ್ಷಿಕೆ ಅಡಿಯಲ್ಲಿ 2011-12ನೇ ಸಾಲಿನ ಕ್ರಿಯಾ ಯೋಜನೆಗಳನ್ನು  ಸೇರ್ಪಡೆಗೊಳಿಸಿದ್ದೇಕೆ. ನೀರು ಪೂರೈಕೆಯನ್ನು ಜಲಮಂಡಳಿಗೆ ವಹಿಸಿದ್ದರೂ ಕ್ರಿಯಾಯೋಜನೆಯಲ್ಲಿ ರೂ. 75 ಲಕ್ಷ ಮೀಸಲು ಇಟ್ಟಿದ್ದೇಕೆ.

 

ವಿದ್ಯಾನಗರದಲ್ಲಿ ಓವರ್‌ಹೆಡ್ ಟ್ಯಾಂಕ್ ಶಿಥಿಲಗೊಂಡಿದ್ದು, ಅನೇಕ ಕುಟುಂಬಗಳು ಭೀತಿಗೊಳಗಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಯಾವ ಉದ್ದೇಶಕ್ಕೆ ಹಣ ಮೀಸಲಾಗಿಡಲಾಗಿದೆ ಎನ್ನುವುದನ್ನು ಬಗ್ಗೆ ಆಯುಕ್ತರು ಉತ್ತರ ನೀಡಬೇಕು~ ಎಂದು ಪಾಲಿಕೆ ಸದಸ್ಯೆ ಆರತಿ ತಿವಾರಿ ಪಟ್ಟು ಹಿಡಿದರು.ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರೆಡ್ಡಿ ಪಾಟೀಲ ಸೇರಿದಂತೆ ಸದಸ್ಯರು ಈ ಬಗ್ಗೆ ವಿವರ ನೀಡಲಾರಂಭಿಸಿದ್ದರಿಂದ ಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಮಧ್ಯೆಪ್ರವೇಶಿಸಿದ ಆಯುಕ್ತ ಡಾ. ಸಿ. ನಾಗಯ್ಯ, `2011-12ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಒಂದು ವಿಷಯ ಚರ್ಚೆಯಾಗಿಲ್ಲ ಎಂದು ವಾಪಸ್ ಕಳುಹಿಸಿದ್ದನ್ನು ಈ ಸಲದ ಕ್ರಿಯಾಯೋಜನೆಯಲ್ಲಿ ಸೇರ್ಪಡೆಗೊಳಿಸಲಾಗಿತ್ತು. ಹೊಸದಾಗಿ ರವಾನಿಸಿದ್ದ ಕ್ರಿಯಾಯೋಜನೆಯು ಈಗ ವಾಪಸ್ ಬಂದಿದೆ.ನೀರು ಪೂರೈಕೆ ಸೇವೆಯನ್ನು ಮಾತ್ರ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ವಹಿಸಲಾಗಿದೆ. ಅದರ ನಿರ್ವಹಣೆ ಹಾಗೂ ಮೇಲ್ವಿಚಾರಣೆಯು ಪಾಲಿಕೆಯಲ್ಲಿದೆ. ಹೀಗಾಗಿ ನೀರು ಪೂರೈಕೆ ಹೊರತಾದ ಕಾಮಗಾರಿಗೆ ಕ್ರಿಯಾಯೋಜನೆಯಲ್ಲಿ ಅನುದಾನ ತೆಗೆದಿಡಲಾಗಿದೆ. ಈ ಬಗ್ಗೆ ಸದಸ್ಯರಲ್ಲಿ ಗೊಂದಲ ಬೇಡ~ ಎಂದರು.`ವಿದ್ಯಾನಗರದ ಓವರ್‌ಹೆಡ್ ಟ್ಯಾಂಕ್ ದುರಸ್ತಿ ಬೇರೆ ಯೋಜನೆಗೆ ಒಳಪಡುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ~ ಎಂದು ಪಾಲಿಕೆ ಆಯುಕ್ತರು ವಿವರಿಸಿದರು.ಅಭಿವೃದ್ಧಿಗೆ ಸ್ಪಂದಿಸದ ಸದಸ್ಯರು ಸಭೆಯಲ್ಲಿ ಮಾತನಾಡುವ ನೈತಿಕತೆ ಇಲ್ಲ. ಬ್ಲ್ಯಾಕ್‌ಮೇಲ್ ಮಾಡುವ ತಂತ್ರವನ್ನು ಕೈಬಿಡಬೇಕು ಎಂದು ಭೀಮರೆಡ್ಡಿ ಪಾಟೀಲ ಸಭೆಯಲ್ಲಿ ಕಟುವಾಗಿ ನುಡಿದರು.

ಸಭೆಯು ಗೊಂದಲದಲ್ಲಿ ಮುಳುಗಿದ್ದರಿಂದ ಸಭೆಯನ್ನು  ಮೇಯರ್ ಸೋಮಶೇಖರ್ ಮೇಲಿನಮನಿ ಅವರು ಮಧ್ಯಾಹ್ನ 3ರ ವರೆಗೆ ಮುಂದೂಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry