ಕ್ರಿಯಾಶೀಲ ಕ್ರೀಡಾ ಪ್ರತಿಭೆಗೆ ಉಜ್ವಲ ಭವಿಷ್ಯ

7

ಕ್ರಿಯಾಶೀಲ ಕ್ರೀಡಾ ಪ್ರತಿಭೆಗೆ ಉಜ್ವಲ ಭವಿಷ್ಯ

Published:
Updated:
ಕ್ರಿಯಾಶೀಲ ಕ್ರೀಡಾ ಪ್ರತಿಭೆಗೆ ಉಜ್ವಲ ಭವಿಷ್ಯ

ದೇವನಹಳ್ಳಿ:  `ಆಟದಲ್ಲಿ ಹೆಚ್ಚು ಕ್ರಿಯಾಶೀಲರಾಗಿ ತೊಡಗಿಸಿಕೊಂಡಾಗ ಕ್ರೀಡಾಪಟುಗಳ ಭವಿಷ್ಯ ಉಜ್ವಲವಾಗುತ್ತದೆ~ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ತಿಳಿಸಿದರು.ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯತಿ ವತಿಯಿಂದ ಏರ್ಪಡಿಸಿದ್ದ ಬೆಂಗಳೂರು ವಿಭಾಗೀಯ ಮಟ್ಟದ ಬಾಲಕ ಬಾಲಕಿಯರ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.ಸಾಧಕ ಪ್ರತಿಭೆಗಳಿಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಕೀರ್ತಿ ಮತ್ತು ಸ್ಪೂರ್ತಿಗೆ ಹಾಗೂ ಉತ್ತಮ ಆರೋಗ್ಯ ಅಗತ್ಯ. ಆ ದೃಷ್ಟಿಯಿಂದ ತನ್ನ ಇಚ್ಚೆಗನುಗುಣವಾಗಿ ವೈವಿಧ್ಯಮಯ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಹೆಚ್ಚಿನ ಅಭ್ಯಾಸ, ತರಬೇತಿ, ಮಾರ್ಗದರ್ಶನ ಪಡೆದು ಯಶಸ್ಸುಗಳಿಸಬೇಕೆಂದು ಕಿವಿ ಮಾತು ಹೇಳಿದರು.ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ವಿ.ವೆಂಕಟೇಶಯ್ಯ ಮಾತನಾಡಿ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪಠ್ಯದ ಜೊತೆಗೆ ಕ್ರೀಡಾಚಟುವಿಕಗಳಲ್ಲಿ ಭಾಗವಹಿಸಬೇಕು. ಕಠಿಣ ಪರಿಶ್ರಮವಿದ್ದಲ್ಲಿ ಯಾವುದೇ ಚಟುವಟಿಕೆ ಸುಲಭವಾಗುತ್ತದೆ ಎಂದರು.ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ನಾಗರಾಜು ಮಾತನಾಡಿ,  ಉತ್ತಮ ಕ್ರೆಡಾಂಗಣವಿದ್ದ ಕಡೆ  ಆಸ್ಪತ್ರೆಗಳ ಅವಶ್ಯಕತೆ ಇರುವುದಿಲ್ಲ. ಎಲ್ಲಿ ವ್ಯವಸ್ಥಿತ ಕ್ರೀಡಾಂಗಣವಿರುವುದಿಲ್ಲವೋ ಅಲ್ಲಿ ಆಸ್ಪತ್ರೆ ಸಂಖ್ಯೆ ಹೆಚ್ಚು ಇರುತ್ತದೆ. ಅಂದರೆ ಕ್ರೀಡೆ ಆರೋಗ್ಯ ವಿಚಾರದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿಸಿದರು.ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಲ್ಲಪ್ಪ, ತಾಲ್ಲೂಕು ಪ್ರಾಥಮಿಕ ಶಾಲಾಶಿಕ್ಷಕರ ಸಂಘ ಅಧ್ಯಕ್ಷ ನಾಗೇಶ್, ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಎಸ್.ಗೋಪಾಲ್, ದೈಹಿಕ ಶಿಕ್ಷಣ ಶಿಕ್ಷಕ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥನಾರಾಯಣ, ತಾಲ್ಲೂಕು ಅಧ್ಯಕ್ಷ ಮುನಿಯಪ್ಪ, ಶಿಕ್ಷಕ ಪಿಳ್ಳಪ್ಪ, ಜನಾರ್ಧನ್ ಇದ್ದರು.ವಿಭಾಗಮಟ್ಟದಲ್ಲಿ ವಿಜೇತ ಜಿಲ್ಲಾ ತಂಡಗಳು : 14ವರ್ಷ ವಯೋಮಿತಿ ಬಾಲಕರ ವಿಭಾಗ : ಬೆಂಗಳೂರು ಗ್ರಾಮಾಂತರ (ವಿನ್ನರ್ಸ್‌), ಬೆಂಗಳೂರು ಉತ್ತರ (ರನ್ನರ್ಸ್‌)14ವರ್ಷ ವಯೋಮಿತಿ ಬಾಲಕಿಯರ ವಿಭಾಗ: ಬೆಂಗಳೂರು ಉತ್ತರ (ವಿನ್ನರ್ಸ್‌), ಬೆಂಳೂರು ಗ್ರಾಮಾಂತರ(ರನ್ನರ್ಸ್‌)17ವರ್ಷ ವಯೋಮಿತಿ ಬಾಲಕರ ವಿಭಾಗ : ಚಿಕ್ಕಬಳ್ಳಾಪುರ ಜಿಲ್ಲೆ (ವಿನ್ನರ್ಸ್‌), ಬೆಂಗಳೂರು ಗ್ರಾಮಾಂತರ (ರನ್ನರ್ಸ್‌)17ವರ್ಷ ವಯೋಮಿತಿ ಬಾಲಕಿಯರ ವಿಭಾಗ: ಬೆಂಗಳೂರು ಉತ್ತರ (ವಿನ್ನರ್ಸ್‌), ಬೆಂಗಳೂರು ಗ್ರಾಮಾಂತರ (ರನ್ನರ್ಸ್‌)ತಾಲ್ಲೂಕು ಮಟ್ಟದ ಕ್ರೆಡಾಕೂಟ

ದೇವನಹಳ್ಳಿ: ತಾಲ್ಲೂಕಿನ ವಿಜಯಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ಗುರವಾರದಂದು ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಏರ್ಪಡಿಸಲಾಗಿದೆ ಎಂದು ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ನಾಗರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಶಾಸಕ ಕೆ.ವೆಂಕಟಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತಾಲ್ಲೂಕು  ಪಂಚಾಯಿತಿ ಅಧ್ಯಕ್ಷ ಬಿ.ಕೆ.ಶಿವಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ, ಜಿ.ಪಂ.ಸದಸ್ಯ ಬಿ.ರಾಜಣ್ಣ, ಬಿ.ಎಂ.ಬೀರಪ್ಪ ಸವಿತಾ ವೆಂಕಟಸ್ವಾಮಿ, ನಳಿನಾ ಮುನಿರಾಜು, ದೇವನಹಳ್ಳಿ ಪುರಸಭೆ ಅಧ್ಯಕ್ಷೆ ರತ್ನಮ್ಮ, ವಿಜಯಪುರ ಪುರಸಭೆ ಅಧ್ಯಕ್ಷೆ ಮಂಜುಳ ನಾರಾಯಣಸ್ವಾಮಿ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಆರ್.ರವಿಕುಮಾರ್, ತಾಲ್ಲೂಕು ಕೃಷಿಕ ಸಮಾಜ ಅಧ್ಯಕ್ಷ ಕೆ.ಶ್ರಿನಿವಾಸಗೌಡ, ತಾಲ್ಲೂಕು ಖಾದಿಬೋರ್ಡ್ ಅಧ್ಯಕ್ಷ ಕೆ.ಪಟಾಲಪ್ಪ, ಜಿಲ್ಲಾ ಉಪನಿರ್ದೇಶಕ ಎಚ್.ವಿ.ವೆಂಕಟೇಶಯ್ಯ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಲ್ಲಪ್ಪ ಭಾಗವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry