ಕ್ರಿಯಾ ಯೋಜನೆಗೆ ತೀರ್ಮಾನ

7

ಕ್ರಿಯಾ ಯೋಜನೆಗೆ ತೀರ್ಮಾನ

Published:
Updated:
ಕ್ರಿಯಾ ಯೋಜನೆಗೆ ತೀರ್ಮಾನ

ಚಿಂತಾಮಣಿ: ನಿರ್ಮಲ ಗಂಗಾ ಯೋಜನೆಯಡಿ  ಕುಡಿಯುವ ನೀರಿನ ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಇನ್ನು ಮೊದಲಾದ ಮೂಲ ಸೌಲಭ್ಯ ಒದಗಿಸಲು ಕ್ರಿಯಾ ಯೋಜನೆಗೆ ತಯಾರಿಸಲು ತೀರ್ಮಾನಿಸಲಾಯಿತು.

ಬುಧವಾರ ಅಧ್ಯಕ್ಷೆ ನಾಗರತ್ನಮ್ಮ ಅಧ್ಯಕ್ಷತೆಯಲ್ಲಿ  ನಡೆದ ನಗರಸಭೆ ಸಾಮಾನ್ಯ ಅಧಿವೇಶನದಲ್ಲಿ ಹಲವು ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.  ನೀರು ಸರಬರಾಜು ಸಂಪರ್ಕ ಮತ್ತು ಒಳಚರಂಡಿ ಸಂಪರ್ಕ ಪಡೆಯಲು ನಗರಸಭೆ ಖಾತೆ ಇದ್ದವರಿಗೆ ಮಾತ್ರವಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. 13 ನೇ ಹಣಕಾಸು ಯೋಜನೆಯಡಿ ನಿಗದಿಪಡಿಸಿರುವ ಅನುದಾನಕ್ಕೆ ಕ್ರಿಯಾ ಯೋಜನೆ ಹಾಗೂ ಎಸ್‌ಎಫ್‌ಸಿ ಯೋಜನೆಯಡಿ ನಿಗದಿಪಡಿಸಿರುವ ಅನುದಾನಕ್ಕೆ ತಯಾರಿಸಿರುವ ಕ್ರಿಯಾ ಯೋಜನೆ ಅನುಮೋದಿಸಲಾಯಿತು.

 ಕಾಮಗಾರಿಗಳ ಗುಣಮಟ್ಟ ಕಾಪಾಡಬೇಕಾದ ಅಗತ್ಯವಿದೆ. ಶೀಘ್ರವಾಗಿ ನಿಗದಿತ ಸಮಯಕ್ಕೆ ಸರಿಯಾಗಿ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಒತ್ತಾಯಿಸಲು ಪೌರಾಯುಕ್ತರಿಗೆ ಆದೇಶಿಸಲಾಯಿತು. ಶಾಸಕ ಡಾ.ಎಂ.ಸಿಸುಧಾಕರ್ ಮಾತನಾಡಿ, ಬೆಸ್ಕಾಂ ಇಲಾಖೆಯು ನಗರದ ವಿವಿಧ ರಸ್ತೆಗಳ ವಿದ್ಯುತ್ ಕಂಬಗಳನ್ನು ಶೀಘ್ರವಾಗಿ ಸ್ಥಳಾಂತರಿಸಿಕೊಡಬೇಕು ಎಂದರು.ಶ್ರಿನಿವಾಸರೆಡ್ಡಿ, ಪ್ರಕಾಶ್, ಆರ್.ಆರ್.ನಾರಾಯಣಪ್ಪ ಮತ್ತಿತರ ಸದಸ್ಯರು ಚರ್ಚೆಯಲ್ಲಿದ್ದರು.

ಉಪಾಧ್ಯಕ್ಷ ಚೌಡರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಯ್ಯ, ಪೌರಾಯುಕ್ತ ರಾಮೇಗೌಡ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry