ಸೋಮವಾರ, ಅಕ್ಟೋಬರ್ 21, 2019
24 °C

ಕ್ರಿಯೇಟಿವ್ ಇಮೇಜಿಂಗ್ ಸ್ಪರ್ಧೆ

Published:
Updated:

ಎಪ್ಸಾನ್ ಪ್ರತಿವರ್ಷ ನಡೆಸುವ ಕ್ರಿಯೇಟಿವ್ ಇಮೇಜಿಂಗ್ ಸ್ಪರ್ಧೆ ಆರಂಭಗೊಂಡಿದೆ. 8 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ನಡೆಸುವ ಸ್ಪರ್ಧೆ ಇದು. ಮಕ್ಕಳು ತಮ್ಮ ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳಲು ಮತ್ತು ಕಲ್ಪನೆಯನ್ನು ಕಲೆಯಾಗಿ ಪರಿವರ್ತಿಸಿಕೊಳ್ಳಲು ಈ ಸ್ಪರ್ಧೆ ಉತ್ತಮ ಅವಕಾಶ ಕಲ್ಪಿಸುತ್ತದೆ.ಈ ಸ್ಪರ್ಧೆಯಲ್ಲಿ ಮಕ್ಕಳು ಫೋಟೋಗ್ರಫಿ, ಚಿತ್ರಕಲೆ, ಸ್ಕೆಚಿಂಗ್, ಡಿಜಿಟಲ್ ಗ್ರಾಫಿಕ್ಸ್, ಮಿನಿಯೇಚರ್ ಮಾದರಿ ಹಾಗೂ ಇನ್ನಿತರ ಕಲಾ ಪ್ರಕಾರಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಬಹುದು. ಎಲ್ಲಾ ಕಲೆಯನ್ನೂ ಇಂಕ್‌ಜೆಟ್ ಅಥವಾ ಲೇಸರ್ ಪ್ರಿಂಟ್‌ನ ಮೂಲಕವೇ ಮಾಡಬೇಕು. ಫೋಟೊಗ್ರಾಫ್ ಮತ್ತು ಡಿಜಿಟಲ್ ಆರ್ಟ್‌ಗಳು ಡಿಜಿಟಲ್ ಎಫೋರ್ ಇಂಕ್‌ಜೆಟ್ ಹಾಗೂ ಲೇಸರ್ ಪ್ರಿಂಟ್‌ಗಳ ಜೊತೆ ಅದೇ ಪ್ರತಿಯನ್ನು ಸಿಡಿಯಲ್ಲೂ ಕೂಡಾ ಸಲ್ಲಿಸಬೇಕು.ಈ ಸ್ಪರ್ಧೆಯಲ್ಲಿ ದೇಶದ 10 ನಗರಗಳ 700 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.  ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ಎಪ್ಸಾನ್ ವೈಫೈ ಆಲ್ ಇನ್ ಒನ್ ಪ್ರಿಂಟರ್ ಅನ್ನು ಬಹುಮಾನವಾಗಿ ನೀಡಲಿದೆ.

 

ಈ ಸಂದರ್ಭದಲ್ಲಿ ಎಪ್ಸಾನ್ ತನ್ನ ಎಲ್ ಸರಣಿಯ ದಕ್ಷ ಪ್ರಿಂಟರ್‌ಗಳನ್ನು ಸಹ ಪರಿಚಯಿಸಲಿದೆ. ಸ್ಪರ್ಧೆಗೆ ಪ್ರವೇಶ ಪಡೆಯಲು ಜನವರಿ 15 ಕೊನೆ.  ಮಾಹಿತಿಗೆ: 080 30105000.

Post Comments (+)