ಕ್ರಿಸ್ಟಿಯನ್‌ಗೆ ಜೀವ ಬೆದರಿಕೆ ಕರೆ

7

ಕ್ರಿಸ್ಟಿಯನ್‌ಗೆ ಜೀವ ಬೆದರಿಕೆ ಕರೆ

Published:
Updated:

ಮೆಲ್ಬರ್ನ್ (ಪಿಟಿಐ): `ನಿನ್ನ ಹೆಸರಲ್ಲಿ ಬುಲೆಟ್ ಸಿದ್ಧವಾಗಿದೆ...' ಇದು ಆಸ್ಟ್ರೇಲಿಯಾದ ರೇಡಿಯೊ ನಿಲಯದ ನಿರೂಪಕ ಮೈಕೆಲ್ ಕ್ರಿಸ್ಟಿಯನ್‌ಗೆ ಬಂದ ಜೀವ ಬೆದರಿಕೆ ಕರೆ.`ಕಿಂಗ್ ಎಡ್ವರ್ಡ್ -7' ಆಸ್ಪತ್ರೆಗೆ ಕೀಟಲೆ ಕರೆ ಮಾಡಿದ ಹಿನ್ನೆಲೆಯಲ್ಲಿ ರೇಡಿಯೊ ನಿರೂಪಕ ಕ್ರಿಸ್ಟಿಯನ್‌ಗೆ `ನಿನ್ನ ಹೆಸರಿನಲ್ಲಿ ಒಂದಷ್ಟು ಬುಲೆಟ್‌ಗಳನ್ನು ಸಿದ್ಧಮಾಡಿದ್ದೇವೆ' ಎಂಬ ಬೆದರಿಕೆ ಕರೆಯೊಂದು ಬಂದಿದೆ. ಕ್ರಿಸ್ಟಿಯಾನ್‌ಗೆ ಬಂದ ಈ ಬೆದರಿಕೆ ಕರೆಯ ಮೂಲ ದಕ್ಷಿಣ ಆಸ್ಟ್ರೇಲಿಯಾಕ್ಕೆ ಸೇರಿದ್ದಾಗಿದೆ. ಆದರೆ, ಈ ಕರೆ ರೇಡಿಯೊ ನಿಲಯಕ್ಕೆ ಬರದೇ ಬೇರೆಡೆ  ರವಾನೆಯಾಗಿದೆ. ರೇಡಿಯೊ ನಿಲಯಕ್ಕೆ ಬಂದ ಬೆದರಿಕೆ ಕರೆಗಳಲ್ಲಿ ಒಂದು ಕರೆ ಮಾತ್ರ ಕ್ರಿಸ್ಟಿಯಾನ್ ಅವರನ್ನೇ ಗುರಿಯಾಗಿಸಿದೆ.ಈ ನಡುವೆ, ಸದರ್ನ್ ಕ್ರಾಸ್ ಆಸ್ಟೀರಿಯೊದಲ್ಲಿರುವ ವ್ಯವಸ್ಥಾಪಕರು, 2 ಡೇ ಎಫ್‌ಎಂ ರೇಡಿಯೊ ನಿಲಯದ ರಕ್ಷಣೆಗಾಗಿ  ರಕ್ಷಣಾ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಾರೆ. ರೇಡಿಯೊ ನಿಲಯದ ಹತ್ತು ಹಿರಿಯ ಸಿಬ್ಬಂದಿ ಒಂದು ವಾರಕ್ಕೆ 75 ಸಾವಿರ ಆಸ್ಟ್ರೇಲಿಯಾ ಡಾಲರ್ ಹಣ ತೆತ್ತು ಅಂಗರಕ್ಷಕರನ್ನು  ನೇಮಿಸಿಕೊಂಡಿದ್ದಾರೆ. ಹನ್ನೆರಡು ಸಿಬ್ಬಂದಿ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry