`ಕ್ರಿಸ್ಮಸ್ ಕಾರ್ನಿವಲ್' ಖುಷಿ

7

`ಕ್ರಿಸ್ಮಸ್ ಕಾರ್ನಿವಲ್' ಖುಷಿ

Published:
Updated:

ಡಿಕೋಸ್ಟಾ ಲೇಔಟ್‌ನಲ್ಲಿರುವ ಮಣಿನಿಕೇತನ್ ಸ್ಕೂಲ್‌ನಲ್ಲಿ ಈಚೆಗೆ ಇಂಡಿಯನ್ ಚರ್ಚ್ ಆಫ್ ಕ್ರೈಸ್ಟ್ ಆಯೋಜಿಸಿದ್ದ `ಕ್ರಿಸ್ಮಸ್ ಕಾರ್ನಿವಲ್'ನಲ್ಲಿ ಮಕ್ಕಳ ಖುಷಿ ಮೇರೆ ಮೀರಿತ್ತು.



ಹಬ್ಬಕ್ಕೂ ಮುನ್ನ ನಡೆಸುವ ಈ ಕ್ರಿಸ್ಮಸ್ ಜಾತ್ರೆಯಲ್ಲಿ ಸುಮಾರು 1500ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು. ಜಾತ್ರೆಯ ಗುಂಗನ್ನು ಹೆಚ್ಚಿಸುವ ಸಲುವಾಗಿ ಮೈದಾನದ ತುಂಬೆಲ್ಲಾ ಬಗೆಬಗೆ ಆಟಿಕೆ, ತಿನಿಸು, ತಂಪು ಪಾನೀಯಗಳನ್ನು ಮಾರುವ ಮಳಿಗೆಗಳು ತಲೆಎತ್ತಿದ್ದವು. ಕೆಲ ಮಕ್ಕಳು ಕುದುರೆ ಮೇಲೆ ಹತ್ತಿ ಮೈದಾನದ ಸುತ್ತ ಮೋಜಿನ ಸವಾರಿ ಮಾಡಿದರೆ, ಇನ್ನು ಕೆಲವರು ಪಿಸ್ತೂಲು ಕೈಯಲ್ಲಿ ಹಿಡಿದು ಗೋಡೆಗೆ ಕಟ್ಟಿದ್ದ ಪುಗ್ಗೆಗಳಿಗೆ ಗುರಿ ಇಟ್ಟು ಹೊಡೆದು ಅವುಗಳ ಉಸಿರು ನಿಲ್ಲಿಸಿ ಖುಷಿಪಟ್ಟರು. ಮತ್ತೆ ಕೆಲ ಮಕ್ಕಳು ಜಾದೂಗಾರನ ಕೈಚಳಕವನ್ನು ತೋರುತ್ತಿದ್ದರು.



ವರ್ಷ ವರ್ಷ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆಗಳನ್ನು ಕಂಡು ಸಂತಸವಾಗಿದೆ. ಮಕ್ಕಳು ಕ್ರಿಸ್ಮಸ್ ಕಾರ್ನಿವಲ್ ಯಾವಾಗ ಬರುತ್ತದೆಯೋ ಎಂದು ತುದಿಗಾಲಲ್ಲಿ ನಿಂತು ಕಾಯುತ್ತಾರೆ. ಈ ಉತ್ಸವ ಹಾಡು, ಕುಣಿತ, ನೃತ್ಯ, ಮೋಜಿನ ಆಟ ಇವೆಲ್ಲವನ್ನೂ ಒಳಗೊಂಡಿದೆ. ಭರಪೂರ ಮನರಂಜನೆ ನೀಡುವ ಈ ಜಾತ್ರೆ ಎಲ್ಲ ಮಕ್ಕಳಿಗೂ ಅಚ್ಚುಮೆಚ್ಚು ಎನ್ನುತ್ತಾರೆ ಆಯೋಜಕರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry