ಬುಧವಾರ, ನವೆಂಬರ್ 20, 2019
20 °C

ಕ್ರಿಸ್‌ಗೇಲ್‌ಗೆ ಡಬಲ್ ಪ್ರಶಸ್ತಿ

Published:
Updated:

ಪೋರ್ಟ್ ಆಫ್ ಸ್ಪೇನ್, ಟ್ರಿನಿಡ್ಯಾಡ್ (ಪಿಟಿಐ): ವೆಸ್ಟ್ ಇಂಡೀಸ್‌ನ ಕ್ರಿಕೆಟಿಗ ಕ್ರಿಸ್ ಗೇಲ್ ಅವರು `ವೆಸ್ಟ್ ಇಂಡೀಸ್ ಆಟಗಾರರ ಸಂಸ್ಥೆ~ (ಡಬ್ಲ್ಯುಐಪಿಎ) ನೀಡುವ `ವರ್ಷದ ಆಟಗಾರ~ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಭಾನುವಾರ ರಾತ್ರಿ ನಡೆದ ವೆಸ್ಟ್ ಇಂಡೀಸ್ ಆಟಗಾರರ ಸಂಸ್ಥೆಯ ಎಂಟನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ `ವರ್ಷದ ಆಟಗಾರ~ ಪ್ರಶಸ್ತಿ ನೀಡಲಾಯಿತು.ಗೇಲ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ನಾಲ್ಕನೇ ಆವೃತ್ತಿಯಲ್ಲಿ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಗೇಲ್ 12 ಪಂದ್ಯಗಳನ್ನಾಡಿ 608 ರನ್ ಕಲೆ ಹಾಕಿದ್ದರು.ಗೇಲ್ ಅವರ `ವರ್ಷದ ಆಟಗಾರ~ ಸಾಧನೆಯ ಶ್ರೇಯಕ್ಕೆ ಇನ್ನೊಂದು ಗರಿ ಸೇರ್ಪಡೆಯಾಗಿದೆ ಆಟಗಾರರ ಸಂಸ್ಥೆ ನೀಡುವ `ವರ್ಷದ ಟೆಸ್ಟ್ ಆಟಗಾರ~  ಪ್ರಶಸ್ತಿ ಸಹ ಅವರಿಗೆ ಲಭಿಸಿದೆ. ಗೇಲ್, ಶಿವನಾರಾಯಣ ಚಂದ್ರಪಾಲ್, ಸುಲೇಮಾನ್ ಬಿನ್ ಹಾಗೂ ಕೆಮೆರ್ ರೋಚ್ ಅವರ ನಡುವೆ ವಾರ್ಷಿಕ ಪ್ರಶಸ್ತಿಗಾಗಿ ಪೈಪೋಟಿ ನಡೆದಿತ್ತು. ಕೊನೆಯಲ್ಲಿ ಗೇಲ್ ಅವರನ್ನೇ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

 

ಪ್ರತಿಕ್ರಿಯಿಸಿ (+)