ಕ್ರಿಸ್ ಮಸ್ ಸಡಗರದಲ್ಲಿ ಪೂರ್ವ ರೋಮ್

7

ಕ್ರಿಸ್ ಮಸ್ ಸಡಗರದಲ್ಲಿ ಪೂರ್ವ ರೋಮ್

Published:
Updated:

ಕರ್ನಾಟಕಕ್ಕೆ ಕ್ರೈಸ್ತ ಧರ್ಮವನ್ನು ಸ್ವಾಗತಿಸಿದ ಊರು ಮಂಗಳೂರು. ಪೋರ್ಚುಗೀಸರು, ಬ್ರಿಟಿಷರು ಧರ್ಮ ಪ್ರಸಾರಕ್ಕಾಗಿ ಆರಂಭಿಸಿದ ಆಧುನಿಕ ಶಿಕ್ಷಣ ರಾಜ್ಯದ ಇತರೆಡೆಗಿಂತ ಕರಾವಳಿ ಕರ್ನಾಟಕದಲ್ಲಿ ಬೀರಿದ ಪ್ರಭಾವ ಅಧಿಕ.

ಕನ್ನಡದ ಮೊದಲ ಪತ್ರಿಕೆ ಹುಟ್ಟಿದ್ದೂ ಇಲ್ಲೇ. ರಾಜ್ಯಕ್ಕೆಲ್ಲ ಕ್ರೈಸ್ತ ಧರ್ಮದ ಬೆಳಕನ್ನು ಚೆಲ್ಲುವುದಕ್ಕೆ ಮೊದಲಾಗಿ ಮುಂಗೋಳಿಯಾದ ಮಂಗಳೂರಿನಲ್ಲಿ ನಡೆಯುವ ಕ್ರಿಸ್‌ಮಸ್ ಆಚರಣೆಯನ್ನು ನೆನೆಸಿಕೊಳ್ಳದೆ ಹೋದರೆ ಕ್ರಿಸ್‌ಮಸ್ ಆಚರಣೆಯೇ ಅಪೂರ್ಣ.ಲೋಕಕ್ಕೆ ಬೆಳಕು ನೀಡಲು ಬರುವ ಕ್ರಿಸ್ತ ಜಗದಗಲಕ್ಕೆ ಸಂತೋಷ ತಂದ. ತಾನು ಹುಟ್ಟಿದ್ದು ಕತ್ತಲೆಯ ದನದ ಕೊಟ್ಟಿಗೆಯಲ್ಲಾದರೂ ಆತ ನೀಡಿದ ಬೆಳಕು ಜಗದ ದೀವಿಗೆಯಾಗಿದೆ ಎಂಬ ಸಂದೇಶ ಮಂಗಳೂರಿನಲ್ಲಿ ಕ್ರಿಸ್‌ಮಸ್ ಸಂದರ್ಭದಲ್ಲಿ ಅಲ್ಲಲ್ಲಿ ಕಾಣಿಸುತ್ತದೆ. ಡಿಸೆಂಬರ್ ಮೊದಲ ವಾರದಿಂದ ಆರಂಭವಾಗುವ ಸಂಭ್ರಮ ಜನವರಿ ಮೊದಲ ವಾರದವರೆಗೂ ವಿಸ್ತರಿಸುವುದು ಸಾಮಾನ್ಯ.

ಮಂಗಳೂರಿನವರು ಸಾಹಸ ಮನೋಭಾವದವರು, ಜಗತ್ತಿನ ಮೂಲೆ ಮೂಲೆಯಲ್ಲಿ ಹರಡಿಕೊಂಡುಬಿಟ್ಟಿದ್ದಾರೆ. ಸಾಂತಾಕ್ಲಾಸ್ ಬಂದು ಉಡುಗೊರೆ ನೀಡುವಂತೆ ನಾನಾ ಭಾಗದಲ್ಲಿ ನೆಲೆಸಿದ ಮಂಗಳೂರಿನವರು ಕ್ರಿಸ್‌ಮಸ್‌ಗೆ ಊರಿಗೆ ಬಂದು ಮನೆ ಮಂದಿಗೆ ಉಡುಗೊರೆ ನೀಡುವುದನ್ನು ನೋಡುವುದೇ ಒಂದು ಚೆಂದ.ಕ್ರೈಸ್ತರು ಜ್ಞಾನವರ್ಧನೆಯ ಮೂಲಕ ಧರ್ಮಪ್ರಸಾರಕ್ಕೆ ಆದ್ಯತೆ ಕೊಟ್ಟವರು. ಅದಕ್ಕಾಗಿ ಅವರು ಆಯ್ದುಕೊಂಡ ಕ್ಷೇತ್ರ ಶಿಕ್ಷಣ. ಕರಾವಳಿ ಭಾಗದಲ್ಲಿ ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಮಾಡಿದ ಪವಾಡ ಅದ್ಭುತ. ಅದು ಮುಂದೆ ರಾಜ್ಯದ ಇತರ ಕಡೆಗಳಿಗೂ ವಿಸ್ತರಣೆಗೊಂಡಿತು. ಕರಾವಳಿ ಭಾಗದಲ್ಲಿ ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಇಂದು 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಇದಕ್ಕಾಗಿಯೇ ತಲೆತಲಾಂತರದಿಂದಲೂ ಈ ಭಾಗ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿಯೇ ಇದೆ. ಇದೇ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಕ್ರಿಸ್ಮಸ್ ಆಚರಣೆಯನ್ನು ನೋಡಬೇಕಾಗುತ್ತದೆ. ಧರ್ಮವೊಂದು ಧರ್ಮ ಪ್ರಸಾರದ ಜತೆಗೆ ಜ್ಞಾನ ಪ್ರಸಾರವನ್ನು ಹೇಗೆ ಮಾಡಬಹುದು ಎಂಬುದಕ್ಕೆ ಇಲ್ಲಿ ನಿದರ್ಶನವೊಂದು ಸಿಗುತ್ತದೆ.ಅಪಾರ ಚರ್ಚ್‌ಗಳು

ಮಂಗಳೂರು ಧರ್ಮಪ್ರಾಂತ್ಯ ಇತ್ತೀಚಿನವರೆಗೆ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಹಾಗೂ ಕಾಸರಗೋಡಿನ ಸ್ವಲ್ಪ ಭಾಗವನ್ನು ಒಳಗೊಂಡಿತ್ತು. ಈ ಪ್ರಾಂತ್ಯಕ್ಕೆ ಒಳಪಟ್ಟು 161 ಚರ್ಚ್‌ಗಳಿದ್ದವು. ಉಡುಪಿ ಪ್ರತ್ಯೇಕ ಧರ್ಮಪ್ರಾಂತ್ಯ ಆದ ಮೇಲೂ ಮಂಗಳೂರು ಧರ್ಮಪ್ರಾಂತ್ಯದಲ್ಲಿ ಈಗಲೂ 115ಕ್ಕಿಂತ ಹೆಚ್ಚು ಚರ್ಚುಗಳಿವೆ.

ಒಂದು ಧರ್ಮಪ್ರಾಂತ್ಯಕ್ಕೆ ಇಷ್ಟು ದೊಡ್ಡ ಸಂಖ್ಯೆಯ ಚರ್ಚ್‌ಗಳು ಇರುವುದು ಅಪರೂಪ. ಅದಕ್ಕಾಗಿಯೇ ಮಂಗಳೂರಿಗೆ `ಪೂರ್ವದ ರೋಮ್' ಎಂಬ ಹೆಸರು ಬಂದಿದೆ. ಗೋವಾದಂತೆ ಮಂಗಳೂರಿನಲ್ಲಿ ಸಹ ಕೊಂಕಣಿಯಲ್ಲೇ ಪ್ರಾರ್ಥನೆಗಳು ನಡೆಯುತ್ತವೆ.

ಕ್ರಿಸ್‌ಮಸ್ ಆಚರಣೆ, ವೇಷ, ಭೂಷಣ, ಆಹಾರ ಕ್ರಮದಲ್ಲೂ ಗೋವಾದ ಪ್ರಭಾವ ಸಾಕಷ್ಟು ಕಾಣಿಸುತ್ತದೆ. ಕ್ರಿಸ್ಮಸ್ ಗಿಡ, ಗೋದಲಿ, ನಕ್ಷತ್ರಗಳಂತಹ ಆಕರ್ಷಣೆಗಳನ್ನು ಸಿದ್ಧಪಡಿಸುವಲ್ಲಿ ರೋಮ್ ಸಹ ನಾಚುವಂತಹ ದೃಶ್ಯಗಳು ಇಲ್ಲಿ ಸಾಮಾನ್ಯ ಎನಿಸಿಬಿಟ್ಟಿವೆ.ಜಗತ್ತನ್ನು ಉಳಿಸಲು ತನ್ನ ಪುತ್ರನನ್ನು ಕಳುಹಿಸಿಕೊಟ್ಟ ದೇವನಿಗೆ ಕೃತಜ್ಞತೆ ಹೇಳುವುದು ಮತ್ತು ಸಂತೋಷವನ್ನು ಹಂಚಿಕೊಳ್ಳುವ ರೂಪದ್ಲ್ಲಲಿ ಎಲ್ಲೆಡೆ ಕ್ರಿಸ್‌ಮಸ್ ಆಚರಣೆ ನಡೆಯುತ್ತದೆ. ನವಜಾತ ದೇವಪುತ್ರ ಶಿಶುವನ್ನು ಹುಡುಕಿಕೊಂಡು ಬರುವ ಮೂವರು ರಾಜರಿಗೆ ದಾರಿ ತೋರಿಸುವುದು ನಕ್ಷತ್ರ ಎಂಬ ನಂಬಿಕೆಯೊಂದಿಗೆ ಡಿಸೆಂಬರ್ ಮೊದಲ ವಾರದಿಂದಲೇ ಮನೆ ಮನೆಗಳ್ಲ್ಲಲಿ ಸ್ಟಾರ್‌ಗಳನ್ನು ಇಡಲಾಗುತ್ತದೆ.

ಕ್ರಿಸ್ಮಸ್‌ಗಾಗಿ ಕೇಕ್, ಸಿಹಿತಿಂಡಿಗಳನ್ನು, ವೈನ್ ತಯಾರಿಸುವುದಕ್ಕೆ `ಕುಸ್ವರ್' ಎಂದು ಕರೆಯಲಾಗುತ್ತದೆ. ಹಂಚಿ ತಿನ್ನುವುದೇ ಈ ಕುಸ್ವರ್‌ನ ವಿಶೇಷ. ಡಿಸೆಂಬರ್ ತಿಂಗಳಿಡೀ ಮಂಗಳೂರಿನ ಬೇಕರಿಗಳಿಗೆ ಕೆಲಸದ ತರಾತುರಿ. ಬೀದಿ ಬೀದಿಗಳಲ್ಲಿ ಕುಸ್ವರ್‌ನ ಘಮ ಘಮ ಮೂಗಿಗೆ ಬಡಿಯದೆ ಇಲ್ಲ. ಕುಸ್ವರ್‌ನ ಘಮಲಿನಲ್ಲಿರುವ ವಿಶೇಷತೆಯನ್ನು ಅನುಭವಿಸಿಯೇ ತಿಳಿಯಬೇಕು.ಗೋದಲಿಗಳನ್ನು (ಕ್ರಿಸ್‌ಮಸ್ ಕ್ರಿಬ್) ನಿರ್ಮಿಸುವಲ್ಲಿ ಅದೆಷ್ಟು ಬಗೆ ಎಂಬುದನ್ನು ಹೇಳುವುದು ಕಷ್ಟ, ಅಷ್ಟರ ಮಟ್ಟಿಗೆ ಮಂಗಳೂರು ತನ್ನ ವೈವಿಧ್ಯತೆ ಮೆರೆಯುತ್ತದೆ. ಯೂರೋಪ್‌ನ ಪ್ರಭಾವಕ್ಕೆ ಒಳಗಾಗಿ ಸಿದ್ಧವಾದಂತಹ ಗೋದಲಿಗಳ ಸಹಿತ ಹತ್ತಾರು ಬಗೆಯಲ್ಲಿ ನಿರ್ಮಿಸಿದ ಗೋದಲಿಗಳನ್ನು ಮಂಗಳೂರಿನ ಚರ್ಚ್‌ಗಳು, ಶಿಕ್ಷಣ ಸಂಸ್ಥೆಗಳು, ಮನೆಗಳಲ್ಲಿ ನೋಡಲು ಸಾಧ್ಯ. ಗ್ರಾಹಕರನ್ನು ಸೆಳೆಯಲು ಕೆಲವು ಹೋಟೆಲ್‌ಗಳು, ಶಾಪಿಂಗ್ ಮಾಲ್‌ಗಳಲ್ಲೂ ಇಂತಹ ಅತ್ಯಾಕರ್ಷಕ ಗೋದಲಿ  ನಿರ್ಮಿಸಲಾಗುತ್ತದೆ.ಸಂಭ್ರಮದ ಹಬ್ಬ

ಕ್ರಿಸ್‌ಮಸ್ ಮುನ್ನಾದಿನ (ಕ್ರಿಸ್‌ಮಸ್ ಈವ್) ಮಧ್ಯರಾತ್ರಿವರೆಗೆ ಮನೆಮಂದಿಯೊಂದಿಗೆ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದು, ಕೊಂಕಣಿ ಮತ್ತು ಇಂಗ್ಲಿಷ್‌ನಲ್ಲಿ ಹಾಡುಗಳನ್ನು ಹಾಡುವುದು ಸಾಮಾನ್ಯ ದೃಶ್ಯಗಳು.

ಕ್ರಿಸ್‌ಮಸ್ ದಿನವಂತೂ ಮನೆಮಂದಿ ಒಟ್ಟಿಗೆ ಸೇರಿ ಸಂತೋಷಪಡುವುದನ್ನು ನೋಡುತ್ತಲೇ ಇರಬೇಕು ಎನಿಸುತ್ತದೆ. ಹೊಸ ಬಟ್ಟೆ ಧರಿಸಿ ನೆಂಟರಿಷ್ಟರ ಮನೆಗಳಿಗೆ ಹೋಗುವುದು, ಎಲ್ಲರ ಜತೆಯಲ್ಲಿ ಊಟಮಾಡುವ ಸಂಭ್ರಮಕ್ಕೆ ಮಿತಿಯೇ ಇಲ್ಲ. ಎಲ್ಲರೂ ಒಟ್ಟು ಸೇರಿದಾಗ ಅಲ್ಲಿ ಹಾಡು, ಕುಣಿತವೆಲ್ಲ ಸಹಜ. ಹಬ್ಬದ ಸಂಭ್ರಮ ಹೆಚ್ಚುವುದು ಆಗಲೇ.ಜಗತ್ತಿನ ಎಲ್ಲೆಡೆಯಂತೆ ಮಂಗಳೂರಿನಲ್ಲಿ ಸಹ ಕ್ರಿಸ್‌ಮಸ್ ಆಚರಣೆ ನಡೆಯುತ್ತದೆ, ಅದರಲ್ಲಿ ವಿಶೇಷವೇನಿಲ್ಲ ಎಂದು ಕಾಣಿಸಬಹುದು. ಆದರೆ ರಾಜ್ಯದಲ್ಲಿ ಮೊದಲಾಗಿ ಕ್ರೈಸ್ತರ ಪ್ರಭಾವಕ್ಕೆ ಒಳಗಾದ ಮಂಗಳೂರಿನಲ್ಲಿರುವ ಚರ್ಚ್‌ಗಳಿಂದಾಗಿ ಕ್ರಿಸ್‌ಮಸ್ ಆಚರಣೆಗೆ ಒಂದು ವಿಶಿಷ್ಟ ಕಳೆ ಮೂಡುತ್ತದೆ.

ಬೋಳಾರದಲ್ಲಿರುವ ಕೆಥೆಡ್ರಲ್ ನಿರ್ಮಾಣವಾದುದು 1568ರಲ್ಲಿ. ಮಂಗಳೂರು ಧರ್ಮಪ್ರಾಂತ್ಯ ಸ್ಥಾಪನೆಯಾದುದು 1674ರಲ್ಲಿ. ಮಿಲಾಗ್ರಿಸ್, ಬಿಜೈ, ಬೆಂದೂರು, ಕುಲಶೇಖರ, ವೆಲೆನ್ಸಿಯಾ, ಉರ್ವ, ದೇರೆಬೈಲ್, ನಾಗುರಿಗಳಂತಹ ಚರ್ಚ್‌ಗಳು ನೂರಾರು ವರ್ಷದ ಇತಿಹಾಸವನ್ನು ತಮ್ಮಡಲಿಲ್ಲಿ ಇಟ್ಟುಕೊಂಡಿವೆ.ಕ್ರೈಸ್ತರೆಲ್ಲರಿಗೂ ಒಬ್ಬನೇ ದೇವ, ಒಂದೇ ಧರ್ಮಗ್ರಂಥ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೂ ಅದರ್ಲ್ಲಲೂ ಪಂಗಡಗಳಿವೆ. ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ್ಲ್ಲಲೇ ಇಂತಹ 5 ಪಂಗಡಗಳು ಕಾಣಿಸುತ್ತವೆ. ಈ ಪಂಗಡಗಳು ಯಾವ ಹಂತದ್ಲ್ಲಲೂ ತಾವು ಪ್ರತ್ಯೇಕ ಎಂಬುದನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳುವುದಿಲ್ಲ. ಇದುವೇ ಕ್ರೈಸ್ತ ಧರ್ಮದ ವಿಶೇಷ.ರಾತ್ರಿಯವರೆಗೂ ಪ್ರಾರ್ಥನೆ

ರೋಮನ್ ಕೆಥಲಿಕ್‌ನವರು ಕ್ರಿಸ್‌ಮಸ್ ಈವ್ ದಿನ ಮಧ್ಯರಾತ್ರಿವರೆಗೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರೆ, ಪ್ರೊಟೆಸ್ಟಂಟ್‌ನವರು ಸಂಜೆ 6.30ರಿಂದ 8.30ರ ವರೆಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಕ್ರಿಸ್ತನ ಆಗಮನಕ್ಕೆ ಮೊದಲಿನ ಮೂರು ಅಥವಾ ನಾಲ್ಕು ಭಾನುವಾರಗಳನ್ನು ಅವರು ವಿಶೇಷ ಹಾಡು, ಸಂದೇಶಗಳ ಮೂಲಕ ಸ್ವಾಗತಿಸುತ್ತಾರೆ. ಕ್ರಿಸ್‌ಮಸ್ ಹಿಂದಿನ ದಿನ ಮತ್ತು ಕ್ರಿಸ್‌ಮಸ್ ದಿನ ಹಿರಿಯರಿಗಿಂತ ಹೆಚ್ಚಾಗಿ ಮಕ್ಕಳೇ ಹಾಡು ಹೇಳುವುದು ಈ ಪಂಗಡದವರ ವಿಶೇಷ.ಸಿರಿಯನ್ ಆರ್ಥಡಾಕ್ಸ್ ಪಂಗಡದವರು ಕೇರಳದ ನಂಬೂದಿರಿ ಸಮುದಾಯದಿಂದ ತೀವ್ರ ಪ್ರಭಾವಕ್ಕೆ ಒಳಗಾದವರು. ಹೀಗಾಗಿ ಇವರ ಕ್ರಿಸ್ಮಸ್ ಆಚರಣೆಯಲ್ಲಿ ದೀಪ, ಆರತಿಯಂತಹ ಹಿಂದೂ ಸಂಪ್ರದಾಯಗಳನ್ನು ನೋಡಬಹುದು. ಸಿರಿಯನ್ ಕೆಥಲಿಕ್ಸ್ ಮತ್ತು ಮಲಂಕರ ಕೆಥಲಿಕ್ಸ್ ಪಂಗಡದವರಲ್ಲಿ ಸಹ ಕೇರಳದ ಪ್ರಭಾವ ಕಾಣಿಸುತ್ತದೆ.ಕ್ರಿಸ್‌ಮಸ್ ಈವ್ ಮತ್ತು ಕ್ರಿಸ್‌ಮಸ್ ಆಚರಣೆಯನ್ನು ನೀವು ಮಂಗಳೂರಿನಲ್ಲಿ ನೋಡಿದ್ದೇ ಆದರೆ ಅದೊಂದು ಜೀವನದ ಸ್ಮರಣೀಯ ಅನುಭವ ಎನ್ನಬಹುದು. ಪಾಶ್ಚಿಮಾತ್ಯ ದೇಶಗಳು, ಗೋವಾದ ತುಣುಕುಗಳೇ ಕರಾವಳಿಯಲ್ಲಿ ಬಂದು ಸೇರಿಕೊಂಡವೋ ಎಂಬಂತಹ ಭ್ರಮೆ ಮೂಡಿದರೂ ಅಚ್ಚರಿ ಇಲ್ಲ.ವಿವಿಧ ಪಂಗಡ

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕ್ರೈಸ್ತರಲ್ಲಿ ಹಲವು ಪಂಗಡಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಕ್ರೈಸ್ತರಲ್ಲಿ  ಐದು ಪಂಗಡಗಳನ್ನು ನೋಡಬಹುದು. ರೋಮನ್ ಕೆಥಲಿಕ್ ಪಂಗಡದವರು ಇಲ್ಲಿ ಬಹುಸಂಖ್ಯೆಯಲ್ಲಿದ್ದಾರೆ.

ಬಾಸೆಲ್ ಮಿಷನ್ ಖ್ಯಾತಿಯ ಪ್ರೊಟೆಸ್ಟಂಟ್ (ಚರ್ಚಸ್ ಆಫ್ ಸೌತ್ ಇಂಡಿಯಾಗೆ ಒಳಪಟ್ಟದ್ದು) ಪಂಗಡದವರ ಪ್ರಭಾವ ಕೂಡ ಸಾಕಷ್ಟು ಪ್ರಮಾಣದಲ್ಲಿ ಇದೆ. ಸಿರಿಯನ್ ಆರ್ಥಡಾಕ್ಸ್, ಸಿರಿಯನ್ ಕೆಥಲಿಕ್ಸ್ ಮತ್ತು ಮಲಂಕರ ಕೆಥಲಿಕ್ಸ್ ಎಂಬ ಪಂಗಡಗಳೂ ಜಿಲ್ಲೆಯಲ್ಲಿವೆ. ಕೊನೆಯ ಮೂರು ಸಮುದಾಯದವರಿಗೆ ಪ್ರತ್ಯೇಕ ಚರ್ಚ್‌ಗಳಿವೆ.

ಧರ್ಮ, ದೇವರು ವಿಚಾರದಲ್ಲಿ ಯಾವ ಪಂಗಡದಲ್ಲೂ ವ್ಯತ್ಯಾಸ ಇಲ್ಲ, ಕೇವಲ ಆಚರಣೆಯ ಕ್ರಮದಲ್ಲಿ, ಪ್ರಾರ್ಥನಾ ಭಾಷೆಯಲ್ಲಿ ಮಾತ್ರ ವ್ಯತ್ಯಾಸ ಕಾಣಿಸಬಹುದಷ್ಟೇ. ಕೊಂಕಣಿ, ಕನ್ನಡ, ಇಂಗ್ಲಿಷ್, ಮಲಯಾಳಂ ಭಾಷೆಗಳಲ್ಲಿ ನಡೆಯುವ ಪ್ರಾರ್ಥನೆಗಳ ಮೂಲ ವ್ಯಾಟಿಕನ್, ಜಿನೇವಾ, ಡೆಮಾಸ್ಕಸ್‌ಗಳಲ್ಲಿವೆ. ಪಂಗಡಗಳ ನಡುವೆ ಸಾಮರಸ್ಯ ಹೇಗಿರಬೇಕು ಎಂಬುದಕ್ಕೆ ಇವರು ಮಾದರಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry