ಶುಕ್ರವಾರ, ಜೂನ್ 18, 2021
23 °C

ಕ್ರೀಡಾಂಗಣ ಕಾಮಗಾರಿ ಬೇಗನೆ ಮುಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ಚಿತ್ತಾಪುರ ನಗರ ಮತ್ತು ಗ್ರಾಮೀಣ ಕ್ರೀಡಾಪಟುಗಳ ಕ್ರೀಡಾಕೂಟಕ್ಕೆ ನೆರವಾಗಲೆಂದು ನಿರ್ಮಾಣ ಮಾಡುತ್ತಿರುವ ಕ್ರೀಡಾಂಗಣ ಕಾಮಗಾರಿಯನ್ನು ಮಳೆಗಾಲ ಬರುವಷ್ಟರಲ್ಲಿ ಮುಗಿಸಬೇಕು ಎಂದು ಶಾಸಕ ವಾಲ್ಮೀಕ ನಾಯಕ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಪಟ್ಟಣದ ಹೊರವಲಯದಲ್ಲಿ ನಿರ್ಮಾಣ ಮಾಡುತ್ತಿರುವ ಕ್ರೀಡಾಂಗಣ ಕಾಮಗಾರಿ ಸ್ಥಳಕೆ ಈಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು, ಕಾಮಗಾರಿ ಬಹಳ ನಿಧಾನವಾಗಿ ನಡೆಯುತ್ತಿದೆ. ಕೆಲಸ ಮಾಡಿಸುತ್ತಿರುವ ನಿರ್ಮಿತಿ ಕೇಂದ್ರದವರಿಗೆ ಸಂಪರ್ಕಿಸಿ ಕಾಮಗಾರಿ ತ್ವರಿತವಾಗಿ ಮುಗಿಸುವಂತೆ ತಾಕೀತು ಮಾಡಬೇಕು ಎಂದು ಜೊತೆಯಲ್ಲಿದ್ದ ತಹಸೀಲ್ದಾರ್ ಬಾಲರಾಜ್ ಅವರಿಗೆ ಹೇಳಿದರು.ಕ್ರೀಡಾಂಗಣ ನಿರ್ಮಾಣದಿಂದ ಪಟ್ಟಣ ಹಾಗೂ ಗ್ರಾಮೀಣ ಕ್ರೀಡಾಪಟುಗಳಿಗೆ ತುಂಬಾ ಅನುಕೂಲ ಆಗಲಿದೆ. ತಾಲ್ಲೂಕು ಮಟ್ಟದ ಪ್ರಾಥಮಿಕ, ಪ್ರೌಢ ಶಾಲೆ, ಕಾಲೇಜು ಮತ್ತು ದಸರಾ ಕ್ರೀಡಾಕೂಟ ನಡೆಸಲು ನೆರವಾಗುತ್ತದೆ. ಎಲ್ಲಾ ಆಟಗಳನ್ನು ಒಂದೇ ಕ್ರೀಡಾಂಗಣದಲ್ಲಿ ನಡೆಸಲು ಸಾಧ್ಯವಾಗುತ್ತದೆ ಎಂದು ಶಾಸಕ ವಾಲ್ಮೀಕ ಹೇಳಿದರು.ತಾಲ್ಲೂಕು ಮಟ್ಟದಲ್ಲಿ ಕ್ರೀಡಾಂಗಣ ಇಲ್ಲದ ಪರಿಣಾಮ ಇಂದು ಕ್ರೀಡಾ ಚಟುವಟಿಕೆಗೆ ಬಹಳ ಕಷ್ಟ ಮತ್ತು ತೊಂದರೆಯಾಗುತ್ತಿದೆ. ಬೇಗನೆ ಕಾಮಗಾರಿ ಮುಗಿಸುವುದರಿಂದ ಇಲ್ಲಿ ನಿರಂತರ ಕ್ರೀಡಾ ಚಟುವಟಿಕೆಗಳು ನಡೆಯುತ್ತವೆ. ಕ್ರೀಡಾಪಟುಗಳಿಗೆ ತುಂಬಾ ಪ್ರೋತ್ಸಾಹ ದೊರೆಯುತ್ತದೆ ಎಂದು ಅವರು ತಿಳಿಸಿದರು.ಕ್ರೀಡಾಂಗಣಕ್ಕೆ ಹೋಗಲು ರಸ್ತೆಯ ಸಮಸ್ಯೆಯಿದೆ. ಆದಷ್ಟು ಬೇಗ ಪುರಸಭೆ ಅಧಿಕಾರಿ ಮತ್ತು ಸಂಬಂಧಿತ ಇಲಾಖೆಯ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಬೇಗನೆ ರಸ್ತೆ ಸಮಸ್ಯೆ ನಿವಾರಣೆ ಮತ್ತು ರಸ್ತೆ ನಿರ್ಮಾಣ ಕಾಮಗಾರಿ ಮಾಡಿಸಲಾಗುವುದು ಎಂದು ವಾಲ್ಮೀಕ ಹೇಳಿದರು.ಕ್ರೀಡಾಂಗಣದ ನಡುವೆ ಹಾದು ಹೋಗಿರುವ ವಿದ್ಯುತ್ ತಂತಿ ಮತ್ತು ಕಂಬ ಬದಲಾವಣೆ ಮಾಡಲು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವರು ಶೀಘ್ರದಲ್ಲಿಯೆ ಕಂಬ ಬದಲಾವಣೆ ಮಾಡಿ ಇನ್ನುಳಿದ ಕಾಮಗಾರಿ ತ್ವರಿತವಾಗಿ ನಡೆಯಲು ಸಹಕರಿಸಲಿದ್ದಾರೆ ಎಂದು ಅವರು ತಿಳಿಸಿದರು.ತಹಸೀಲ್ದಾರ್ ಬಾಲರಾಜ್, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಎಮ್ಮೆನೋರ್, ಮುಖಂಡರಾದ ನಿಂಗಣ್ಣ ಅಲ್ಲೂರ್, ಸಿದ್ದಣ್ಣ ಕಲ್ಲಶೆಟ್ಟಿ, ತಮ್ಮಣ್ಣ ಡಿಗ್ಗಿ, ರವಿ ಪವಾರ್ ಚಂದ್ರು ಕಾಳಗಿ ಮುಂತಾದವರು ಶಾಸಕರ ಜೊತೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.