ಕ್ರೀಡಾಕೂಟಗಳು ಪ್ರೀತಿ- ವಿಶ್ವಾಸ ಬೆಳೆಸುತ್ತವೆ

ಸೋಮವಾರ, ಜೂಲೈ 22, 2019
27 °C

ಕ್ರೀಡಾಕೂಟಗಳು ಪ್ರೀತಿ- ವಿಶ್ವಾಸ ಬೆಳೆಸುತ್ತವೆ

Published:
Updated:

ಮಹದೇವಪುರ: `ಸ್ಥಳೀಯ ಮಟ್ಟದಲ್ಲಿ ಆಗಾಗ್ಗೆ ಕ್ರೀಡಾಕೂಟಗಳನ್ನು ಸಂಘಟಿಸುವುದರಿಂದ ಪರಸ್ಪರ ಪ್ರೀತಿ- ವಿಶ್ವಾಸ ಬೆಳೆಯುತ್ತದೆ. ದ್ವೇಷ ದೂರವಾಗುತ್ತದೆ~ ಎಂದು ಮಹದೇವಪುರ ಕ್ಷೇತ್ರ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಬಿಳಿಶಿವಾಲೆ ಆನಂದ ಅಭಿಪ್ರಾಯಪಟ್ಟರು.ಭೈರತಿ ಸಮೀಪದ ಬಿಳಿಶಿವಾಲೆ ಗ್ರಾಮದಲ್ಲಿ ನಡೆದ ಆಹ್ವಾನಿತ ಬೆಂಗಳೂರು ನಗರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಬಿಳಿಶಿವಾಲೆ ಯುವಕ ತಂಡ ಹಾಗೂ ದ್ವಿತೀಯ ಸ್ಥಾನ ಗಳಿಸಿದ ದೊಡ್ಡಗುಬ್ಬಿ ತಂಡಕ್ಕೆ ಸುಧಾ ಬರಗೂರು ಬಹುಮಾನ ವಿತರಿಸಿದರು.ಈ ಸಂದರ್ಭದಲ್ಲಿ ರಂಗ ಕಲಾವಿದ ಜಯಪ್ರಕಾಶ ಬರಗೂರು, ನಗರ ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಜಿ.ರಮೇಶ, ಹಿರಿಯ ಬಿಜೆಪಿ ಮುಖಂಡ ಪ್ರಭಾಕರ, ಯುವ ಮೋರ್ಚಾ ಉಪಾಧ್ಯಕ್ಷ ಅನಿಲಕುಮಾರ್, ಕನಕರಾಜ, ಪದ್ಮನಾಭ, ಪ್ರಸಾದ, ಎಂ.ಸಿ.ಬಿ. ರಾಮಾಂಜಿನಪ್ಪ, ಲಕ್ಷ್ಮಣ, ಬಿ.ಕೆ.ರಾಘವೇಂದ್ರ, ಆರ್.ರವಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry