ಕ್ರೀಡಾಕೂಟ: ಸೈದಾಪುರ ವಿದ್ಯಾರ್ಥಿಗಳ ಸಾಧನೆ

ಭಾನುವಾರ, ಮೇ 26, 2019
26 °C

ಕ್ರೀಡಾಕೂಟ: ಸೈದಾಪುರ ವಿದ್ಯಾರ್ಥಿಗಳ ಸಾಧನೆ

Published:
Updated:

ಯಾದಗಿರಿ: ಇಲ್ಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದ ಕೊಕ್ಕೋದಲ್ಲಿ ತಾಲ್ಲೂಕಿನ ಸೈದಾಪುರದ ಪ್ರೌಢಶಾಲಾ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ಬಾಲಕರ ತಂಡ ಸತತ ಮೂರನೇ ಬಾರಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಬಾಲಕಿಯರ ತಂಡವು ಐದನೇ ಬಾರಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

 

100 ಮೀ. ಓಟದಲ್ಲಿ ಮಹಾದೇವಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಮುಖ್ಯಾಧ್ಯಾಪಕಿ ಪದ್ಮಾಬಾಯಿ, ದೈಹಿಕ ಶಿಕ್ಷಣ ಶಿಕ್ಷಕಿ ರೇಣುಕಾ, ವ್ಯವಸ್ಥಾಪಕ ಶೆಟ್ಟೆಪ್ಪ, ಶಿಕ್ಷಕರಾದ ಮಾರುತಿ, ಹೊನ್ನಪ್ಪ, ರಾಧಿಕಾ, ಶ್ರೀದೇವಿ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry