ಭಾನುವಾರ, ಡಿಸೆಂಬರ್ 15, 2019
23 °C

ಕ್ರೀಡಾಕ್ಷೇತ್ರ ಸಾಧಕರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರೀಡಾಕ್ಷೇತ್ರ ಸಾಧಕರಿಗೆ ಸನ್ಮಾನ

ಕೋಲಾರ: ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ಏರ್ಪಡಿಸಿದ್ದ ವಾರ್ಷಿಕೋತ್ಸವ ಹಾಗೂ ಶಾರದಾಪೂಜೆ ಸಮಾರಂಭದಲ್ಲಿ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕ್ರೀಡಾಕೂಟದ ಸಾಧಕರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.ವೇಮಗಲ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವರದರಾಜ್, ಇಂಗ್ಲಿಷ್ ಉಪನ್ಯಾಸಕ ಸುಬ್ರಹ್ಮಣ್ಯಂ ಗಣಪತಿ ಹೆಗಡೆ ಮಾತನಾಡಿದರು. ಉಪನ್ಯಾಸಕ ವೆಂಕಟರಮಣಪ್ಪ ಸ್ವಾಗತಿಸಿದರು.ಕಳೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ನಗದು ಪುರಸ್ಕಾರ ಮತ್ತು ನೆನಪಿನ ಕಾಣಿಕೆ ನೀಡಲಾಯಿತು.ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ವೈಯುಕ್ತಿಕ ಚಾಂಪಿಯನ್‌ಷಿಫ್ ಪಡೆದು ರಾಜ್ಯಮಟ್ಟದಲ್ಲಿ ಜಿಲ್ಲೆ ಪ್ರತಿನಿಧಿಸಿದ್ದ ವಿದ್ಯಾರ್ಥಿ ಮುನಿರಾಜುಗೆ ಬಹುಮಾನ ನೀಡಲಾಯಿತು.ಉಪನ್ಯಾಸಕರಾದ ಅಪ್ಸರ್ ಪಾಷ, ಮಂಜುನಾಥಸ್ವಾಮಿ, ನಾಗೇಶ್, ಅನುರಾಧಾ, ಶೃತಿ, ಎಂ.ಆರ್.ಹೇಮಾವತಿ, ಸರವಣಕುಮಾರ್, ರಾಮಾಂಜಿ, ಲೋಕೇಶ್, ಗೋವಿಂದ್, ಅಸಮತ್‌ಉನ್ನೀಸಾ, ವೆಂಕಟಪತಿ, ಪ್ರಕಾಶ್, ವಿಕ್ಟರ್, ಪಾಷ ಉಪಸ್ಥಿತರಿದ್ದರು.ಉಪನ್ಯಾಸಕರಾದ ತ್ಯಾಗರಾಜ್ ವರದಿ ವಾಚಿಸಿ, ಹಿರಿಯ ಉಪನ್ಯಾಸಕಿ ಮಂಜುಳಾ ನಿರೂಪಿಸಿ, ಸತೀಶ್ ವಂದಿಸಿದರು.

ಪ್ರತಿಕ್ರಿಯಿಸಿ (+)