ಕ್ರೀಡಾಪಟುವಿಗೆ ಕ್ರಿಯಾಶೀಲತೆ ಇರಲಿ

7

ಕ್ರೀಡಾಪಟುವಿಗೆ ಕ್ರಿಯಾಶೀಲತೆ ಇರಲಿ

Published:
Updated:
ಕ್ರೀಡಾಪಟುವಿಗೆ ಕ್ರಿಯಾಶೀಲತೆ ಇರಲಿ

ಚಿಕ್ಕಮಗಳೂರು: ಕ್ರೀಡೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ. ಕ್ರೀಡೆಯಲ್ಲಿ ವಾದ, ಜಗಳ ಬಿಟ್ಟು ಕ್ರೀಡಾಸ್ಫೂರ್ತಿಯಿಂದ ಭಾಗವ ಹಿಸಿದಾಗ ಮಾತ್ರ ಕ್ರಿಯಾಶೀಲರಾಗಬಹುದು ಎಂದು ಜಿಲ್ಲಾಧಿಕಾರಿ ಎಸ್.ಟಿ.ಅಂಜನ್ ಕುಮಾರ್ ಅಭಿಪ್ರಾಯಪಟ್ಟರು.ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಶನಿವಾರ ವಿನ್ನರ್ ಗ್ರೂಪ್ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು.ಜೀವನದಲ್ಲಿ ಸಾಧಿಸುವ ಛಲವಿದ್ದರೆ ಎಂತಹ ಕಠಿಣ ಸಂದರ್ಭದಲ್ಲೂ ಸಾಧನೆ ಮಾಡಬಹುದು. ಯುವಕರೇ ದೇಶದ ಆಸ್ತಿ. ಯುವ ಸಮುದಾಯ ನಮ್ಮ ರಾಷ್ಟ್ರದ ಭಾಷೆ, ಸಂಸ್ಕೃತಿ ಉಳಿಸುವ ಜವಾಬ್ದಾರಿ ಹೊರಬೇಕು. ಗ್ರಾಮೀಣ ಕ್ರೀಡೆಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.ವಿನ್ನರ್ ಗ್ರೂಫ್ ಸಂಸ್ಥೆ ರಾಜ್ಯದಾದ್ಯಂತ ಯುವಕ ಯುವತಿಯರಿಗೆ ಉದ್ಯೋಗಾವಕಾಶ ನೀಡುವ ಮೂಲಕ ನಿರುದ್ಯೋಗ ನಿಮೂರ್ಲನೆಯಲ್ಲಿ ತೊಡ ಗಿದೆ. ಸರ್ಕಾರದಿಂದ ಮಾನ್ಯತೆ ಪಡೆದ ಇಂತಹ ಸಂಸ್ಥೆ ಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್ ಮಾತನಾಡಿ, ದಿನನಿತ್ಯದ ಕೆಲಸಗಳ ಜತೆಗೆ ಯಾವುದಾದರೂ ಒಂದು ಕ್ರೀಡೆಯಲ್ಲಿ ಭಾಗವಹಿಸಿದಾಗ ಉತ್ತಮ ಆರೋಗ್ಯದ ಜತೆಗೆ ಕ್ರಿಯಾಶೀಲತೆ ರೂಢಿಸಿಕೊಳ್ಳಬಹುದು. ಯಾವುದೇ ಕೆಲಸಗಳನ್ನು ಶ್ರದ್ಧೆಯಿಂದ ಶಕ್ತಿಮೀರಿ ನಿರ್ವಹಿಸಿದಾಗ ಯಶಸ್ಸು ನಮ್ಮದಾಗುತ್ತದೆ ಎಂದರು.ಭದ್ರಾವತಿಯ ಅಂತರರಾಷ್ಟ್ರೀಯ ತೀರ್ಪುಗಾರ ಸಿದ್ದಯ್ಯ, ರಾಜ್ಯಮಟ್ಟದ ಕಬಡ್ಡಿ ಪಟು ವಿಶ್ವನಾಥ್, ಬ್ಯಾಂಕ್ ನೌಕರರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ರಮೇಶ್ ಕುಮಾರ್, ಬಿಸಿಎಂ ಇಲಾಖೆಯ ವಿಜಯಕುಮಾರ್, ವಿನ್ನರ್ ಗ್ರೂಪ್ ವ್ಯವಸ್ಥಾಪಕ ಅವಿನಾಶ್ ಕುಮಾರ್, ಜನಜಾಗೃತಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ, ಶಬರೀಸ್ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ರಾಜಣ್ಣ ಇದ್ದರು.ಕಬಡ್ಡಿ, ಕೊಕ್ಕೊ, ವಾಲಿಬಾಲ್ ಕ್ರೀಡೆಗಳು ನಡೆದವು. ಕ್ರೀಡಾಪಟುಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry