ಕ್ರೀಡಾಪಟು ಗಿರೀಶ್‌ಗೆ ಕಾರು ಉಡುಗೊರೆ

7

ಕ್ರೀಡಾಪಟು ಗಿರೀಶ್‌ಗೆ ಕಾರು ಉಡುಗೊರೆ

Published:
Updated:

ಬೆಂಗಳೂರು: ಪ್ಯಾರಾ ಒಲಂಪಿಕ್‌ನ ಪದಕ ವಿಜೇತ ಎಚ್. ಎನ್.ಗಿರೀಶ್ ಅವರಿಗೆ ಶುಕ್ರವಾರ ಮಲ್ಲೇಶ್ವರ ಸ್ಪೋಟ್ಸ್ ಫೌಂಡೇಷನ್‌ನ ಉದ್ಘಾಟನಾ ಸಮಾರಂಭದಲ್ಲಿ ಕಾರನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಎಂದು ಶಾಸಕ ಡಾ.ಸಿ.ಎಸ್.ಅಶ್ವತ್ಥನಾರಾಯಣ್ ತಿಳಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಮಲ್ಲೇಶ್ವರದ ಅಸೋಸಿಯೇಷನ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಉಪಮುಖ್ಯಮಂತ್ರಿ ಆರ್. ಅಶೋಕ, ಮಾಜಿ ಕ್ರಿಕೆಟ್ ಆಟಗಾರ ಬ್ರಿಜೇಶ್ ಪಟೇಲ್ ಸೇರಿದಂತೆ ಮತ್ತಿತರ ಗಣ್ಯರು ಆಗಮಿಸುವರು. ಈ ಸಂದರ್ಭದಲ್ಲಿ ಫೌಂಡೇಷನ್‌ನ ಲಾಂಛನ ಹಾಗೂ ಗಿರೀಶ್ ಅವರಿಗೆ 7.50 ಲಕ್ಷ ರೂಪಾಯಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಹ ನಿರ್ದೇಶಕರಾದ ಮಂಜುನಾಥರಾಜು, ವಿಜಯಕುಮಾರ್, ಸತ್ಯನಾರಾಯಣ, ಶ್ರೀಧರ್ ಸುಬ್ರಹ್ಮಣ್ಯ, ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ ಪವಿತ್ರ, ಟೆನ್ನಿಸ್ ತರಬೇತುದಾರ ಸುನೀಲ್ ಯಜಮಾನ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry