ಕ್ರೀಡಾಶಾಲೆಗೆ ಅರ್ಜಿ ಆಹ್ವಾನ

7

ಕ್ರೀಡಾಶಾಲೆಗೆ ಅರ್ಜಿ ಆಹ್ವಾನ

Published:
Updated:

ಬೆಂಗಳೂರು: ನಗರ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ನಡೆಸುವ ಕ್ರೀಡಾಶಾಲೆ ಮತ್ತು ಕ್ರೀಡಾ ನಿಲಯ ಪ್ರವೇಶಕ್ಕೆ ಅರ್ಹ ಬಾಲಕ- ಬಾಲಕಿಯರನ್ನು ಫೆ. 7 ರಂದು ಆಯ್ಕೆ ಮಾಡಲಾಗುವುದು.ಆಯ್ಕೆ ನಡೆಯುವ ಸ್ಥಳ- ಬೆಂಗಳೂರು ಉತ್ತರ ತಾಲ್ಲೂಕು: ಪೂರ್ಣಪ್ರಜ್ಞ ಪ್ರೌಢಶಾಲೆ, ಎನ್.ಇ.ಎಸ್. ಬಸ್ ನಿಲ್ದಾಣ ಹತ್ತಿರ, ಯಲಹಂಕ ಉಪನಗರ; ಬೆಂಗಳೂರು ಪೂರ್ವ: ಐಟಿಐ ಕ್ರೀಡಾಂಗಣ, ಕೃಷ್ಣರಾಜಪುರ. ಬೆಂಗಳೂರು ದಕ್ಷಿಣ: ಜೆ.ಪಿ. ನಗರ ಕ್ರೀಡಾಂಗಣ, ಜೆ.ಪಿ.ನಗರ 3ನೇ ಬ್ಲಾಕ್; ಆನೇಕಲ್: ಎ.ಎಸ್.ಬಿ. ಜೂನಿಯರ್ ಕಾಲೇಜು ಕ್ರೀಡಾಂಗಣ, ಆನೇಕಲ್. ಅಥ್ಲೆಟಿಕ್ಸ್, ಹಾಕಿ, ಬ್ಯಾಸ್ಕೆಟ್ ಬಾಲ್, ವಾಲಿಬಾಲ್, ಫುಟ್ಬಾಲ್, ಜುಡೋ, ಕುಸ್ತಿ,

 

ಜಿಮ್ನೋಸ್ಟಿಕ್ ಮುಂತಾದ ಕ್ರೀಡೆಗಳಿಗೆ ಆಯ್ಕೆ ನಡೆಯಲಿದ್ದು, ಫೆ. 7 ರಂದು ಕ್ರೀಡಾಪಟುಗಳು ಆಯ್ಕೆ ಮಾಡುವ ಸ್ಥಳಗಳಲ್ಲಿ ಜನ್ಮ ದಿನಾಂಕ ಪ್ರಮಾಣ ಪತ್ರದೊಂದಿಗೆ ಬೆಳಿಗ್ಗೆ 9 ಗಂಟೆಗೆ ಹಾಜರಾಗಲು ಸೂಚಿಸಲಾಗಿದೆ.

ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆ ಫೆ. 13ರಂದು ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಕಂಠೀರವ ಕ್ರೀಡಾಂಗಣ- ಇಲ್ಲಿ ಖುದ್ದಾಗಿ ಅಥವಾ ದೂರವಾಣಿ: 080-2223 9771 ಮೂಲಕ ಸಂಪರ್ಕಿಸಲು ಕೋರಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry