ಕ್ರೀಡಾ ಗ್ರಾಮಕ್ಕೆ ಮೇಯರ್ ನೇಮಕ

7

ಕ್ರೀಡಾ ಗ್ರಾಮಕ್ಕೆ ಮೇಯರ್ ನೇಮಕ

Published:
Updated:

ಲಂಡನ್ (ಪಿಟಿಐ): ಲಂಡನ್ ಒಲಿಂಪಿಕ್ಸ್‌ನ ಕ್ರೀಡಾ ಗ್ರಾಮದ ಮೇಯರ್ ಆಗಿ ಚಾನೆಲ್‌ವೊಂದರ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಚಾರ್ಲೆಸ್ ಅಲೆನ್ ಅವರನ್ನು ನೇಮಕ ಮಾಡಲಾಗಿದೆ.

ಒಲಿಂಪಿಕ್ಸ್‌ಗೆ ಆಗಮಿಸುವ ಅಥ್ಲೀಟ್‌ಗಳು, ಅಧಿಕಾರಿಗಳು ಹಾಗೂ ಗಣ್ಯವ್ಯಕ್ತಿಗಳಿಗೆ ಸೌಕರ್ಯಗಳನ್ನು ಕಲ್ಪಿಸುವ ಹೊಣೆಗಾರಿಕೆ ನೂತನ ಮೇಯರ್ ಅಲೆನ್ ಅವರದ್ದು.

2002ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಸಂಘಟನಾ ಸಮಿತಿಯ ಮುಖ್ಯಸ್ಥರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. `ಕ್ರೀಡಾ ಗ್ರಾಮದ ಮೇಯರ್ ಆಗಿ ನೇಮಕ ಮಾಡಿದ್ದಕ್ಕೆ ಖುಷಿಯಾಗಿದೆ. ಇಲ್ಲಿ ಕೆಲಸ ಮಾಡುವುದು ಸದಾ ನೆನಪಿನಲ್ಲಿ ಉಳಿಯುತ್ತದೆ. ಸಾಕಷ್ಟು ಅನುಭವ ಪಡೆಯಲು ನೆರವಾಗುತ್ತದೆ~ ಎಂದು ಅವರು ಹೇಳಿದ್ದಾರೆ.

`ಕ್ರೀಡಾ ಗ್ರಾಮದ ವಾತಾವರಣದ ಬಗ್ಗೆ ಅಲೆನ್ ಅವರಿಗೆ ಚೆನ್ನಾಗಿ ತಿಳಿದಿದೆ. ವಹಿಸಿದ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿಭಾಯಿಸಲಿದ್ದಾರೆ~ ಎಂದು ಲಂಡನ್ ಒಲಿಂಪಿಕ್ಸ್ ಸಂಘಟನಾ ಸಮಿತಿಯ ಮುಖ್ಯಸ್ಥ  ಸೆಬಾಸ್ಟಿಯನ್ ಕೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry