ಕ್ರೀಡಾ ಪರಿಕರದ ಆನ್‌ಲೈನ್ ಅಂಗಡಿ

7

ಕ್ರೀಡಾ ಪರಿಕರದ ಆನ್‌ಲೈನ್ ಅಂಗಡಿ

Published:
Updated:
ಕ್ರೀಡಾ ಪರಿಕರದ ಆನ್‌ಲೈನ್ ಅಂಗಡಿ

ಲೈವ್ ಸ್ಪೋರ್ಟ್ಸ್ 365 ಇ-ರೀಟೇಲ್ ಪ್ರೈವೇಟ್ ಲಿಮಿಟೆಡ್ http://www.sports365.in/  ಎಂಬ ಅಂತರ್ಜಾಲ ತಾಣವನ್ನು ಆರಂಭಿಸುವ ಮೂಲಕ ಉತ್ತಮ ಆಟದ ಸಾಮಗ್ರಿಗಳು ಮತ್ತು ಬಟ್ಟೆಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.



ಮಹೇಶ್ ಭೂಪತಿ, ವಿಶಾಲ್ ಗುಪ್ತಾ ಮತ್ತು ಚಂದ್ರಶೇಖರ್ ರೆಡ್ಡಿ ಸೇರಿ ಇಂಥದೊಂದು ಜಾಲತಾಣ ರೂಪಿಸಿದ್ದಾರೆ. ನಗರದಲ್ಲಿ ಇದರ ಮುಖ್ಯ ಕಚೇರಿ ಇದೆ. ಆಟಗಾರರ ಮತ್ತು ಕ್ರೀಡಾ ಉತ್ಸಾಹಿಗಳ ಅಗತ್ಯಕ್ಕೆ ಸ್ಪಂದಿಸುವ ಉದ್ದೇಶ ಈ ಜಾಲತಾಣದ್ದು.

 

ಕ್ರೀಡೆ ಮತ್ತು ಫಿಟ್‌ನೆಸ್‌ಗೆ ಅಗತ್ಯವಿರುವ ಸುಮಾರು 8000 ಬಗೆಯ ಉಪಕರಣ, ಉತ್ಪನ್ನಗಳನ್ನು ಈ ವೆಬ್‌ಸೈಟ್ ಮೂಲಕ ಖರೀದಿಸಬಹುದು. ಯೋನೆಕ್ಸ್, ಹೆಡ್, ವಿಲ್ಸನ್, ಬ್ಯಾಬೊಲಾಟ್, ಪೂಮಾ, ಅಡಿದಾಸ್, ಪ್ರಿನ್ಸ್, ಜಿಎಮ್, ಅರೆನಾ, ಡಾನಿಕ್, ತುಂತುರಿ, ಬಾಡಿ ಸ್ಕಲ್ಪ್ಚರ್ ಮತ್ತು ಇತರ ಬ್ರಾಂಡ್‌ಗಳು ಕೂಡ ಮಾರಾಟಕ್ಕೆ ಲಭ್ಯ.



ಜಾಲತಾಣವನ್ನು ಬಿಡುಗಡೆ ಮಾಡಿ ಮಾತನಾಡಿದ ನಿರ್ದೇಶಕ ಮಹೇಶ್ ಭೂಪತಿ, `ಈ ರೀತಿ ವ್ಯವಸ್ಥೆಯ ಅಗತ್ಯವಿತ್ತು. ಬಹಳಷ್ಟು ಬಾರಿ ಸರಿಯಾದ ಮಾರ್ಗದರ್ಶನವಿಲ್ಲದೆ ಜನ ಕ್ರೀಡಾ ಪರಿಕರಗಳನ್ನು ಖರೀದಿಸುತ್ತಾರೆ. ಕೆಲವು ಬಾರಿ ಇವು ಬಳಸುವವರ ಅಗತ್ಯಕ್ಕೆ ಸೂಕ್ತವಾಗಿರುವುದಿಲ್ಲ ಅಥವಾ ಕಳಪೆ ದರ್ಜೆಯದ್ದಾಗಿರುತ್ತದೆ.



ಉತ್ತಮ ಪರಿಕರಗಳನ್ನು ಸರಿಯಾಗಿ ತಲುಪಿಸಲು ನಾವು ಕಾತುರರಾಗಿದ್ದೇವೆ. ಗ್ರಾಹಕರ ಜೊತೆ ನಿರಂತರ ಸಂಪರ್ಕದಲ್ಲಿ ಇರುವ ಉದ್ದೇಶದಿಂದ ನಾವು ಎಲ್ಲಾ ಸಾಮಾಜಿಕ ವೆಬ್‌ಸೈಟ್‌ಗಳ್ಲ್ಲಲೂ ಇದ್ದೇವೆ. ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಗ್ರಾಹಕರು ತಮ್ಮ ಅಭಿಪ್ರಾಯಗಳನ್ನು ದಾಖಲಿಸಬಹುದು~ ಎಂದರು.



`ಸ್ಪೋರ್ಟ್ಸ್ 365~ರ ನಿರ್ದೇಶಕ ಮತ್ತು ಸಹ ಸಂಸ್ಥಾಪಕರಾಗಿರುವ ವಿಶಾಲ್ ಗುಪ್ತಾ ಮತ್ತು ಚಂದ್ರಶೇಖರ್, `ನಾವು ಕೇವಲ ಉತ್ತಮವಾದ ಪರಿಕರಗಳನ್ನು ಮಾತ್ರ ಮಾರುತ್ತಿಲ್ಲ. ಬದಲಾಗಿ ತಜ್ಞರ ಜೊತೆಗೆ ಸಂಪರ್ಕ ಬೆಳೆಸಿ, ನಮ್ಮ ಗ್ರಾಹಕರು ಉತ್ತಮ ಆಯ್ಕೆ ಮಾಡಲು ಸಹಾಯ ಮಾಡುತ್ತೇವೆ~ ಎಂದು ಭರವಸೆ ಕೊಟ್ಟಿದ್ದಾರೆ.



ಸ್ಪೋರ್ಟ್ ಅಕಾಡೆಮಿಗಳಿಗೆ, ಸಂಸ್ಥೆಗಳಿಗೆ, ಶಾಲೆಗಳಿಗೆ, ಹೋಟೆಲ್‌ಗಳಿಗೆ, ಫಿಟ್‌ನೆಸ್ ಸೆಂಟರ್‌ಗಳಿಗೆ ಸ್ಪೋರ್ಟ್ ಮತ್ತು ಫಿಟ್‌ನೆಸ್ ಸಾಧನಗಳನ್ನು ಈ ಆನ್‌ಲೈನ್ ಸಂಸ್ಥೆ ಒದಗಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry