ಕ್ರೀಡಾ ಪ್ರತಿಭೆ ಆಯ್ಕೆ: 13ರಿಂದ ಚಾಲನೆ

7

ಕ್ರೀಡಾ ಪ್ರತಿಭೆ ಆಯ್ಕೆ: 13ರಿಂದ ಚಾಲನೆ

Published:
Updated:

ರಾಮನಗರ: 2012-13ನೇ ಸಾಲಿಗೆ ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಅಥ್ಲೆಟಿಕ್ಸ್ ಮತ್ತು ಫುಟ್‌ಬಾಲ್ ಕ್ರೀಡೆಗಳಿಗೆ ರಾಮನಗರ ಟೌನ್‌ನಲ್ಲಿರುವ ಕ್ರೀಡಾ ಶಾಲೆಗೆ ಉತ್ತಮ ಕ್ರೀಡಾ ಪ್ರತಿಭೆಯುಳ್ಳ ಬಾಲಕ-ಬಾಲಕಿಯರನ್ನು ಆಯ್ಕೆ ಮಾಡಲಾಗುವುದು. ಇದೇ 13ರಿಂದ ಆಯ್ಕೆ ಆರಂಭವಾಗಲಿದೆ. ಮೊದಲನೇ ಹಂತವಾಗಿ ಆಯಾ ದಿನಗಳಂದು ಬೆಳಿಗ್ಗೆ 10 ಗಂಟೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.ಫೆ.13 ರಂದು ರಾಮನಗರದ ಜಿಲ್ಲಾ ಕ್ರೀಡಾಂಗಣ, ಫೆ.14 ರಂದು ಬಿಡದಿಯ ಮಿನಿ ಕ್ರೀಡಾಂಗಣ, ಫೆ.15 ರಂದು ಕನಕಪುರದ ತಾಲ್ಲೂಕು ಕ್ರೀಡಾಂಗಣ, ಫೆ.16 ರಂದು ಕನಕಪುರ ತಾಲ್ಲೂಕಿನ ಸಾತನೂರು ಸರ್ಕಾರಿ ಪ್ರೌಢಶಾಲೆ, ಫೆ.17 ರಂದು ಚನ್ನಪಟ್ಟಣದ ಜೂನಿಯರ್ ಕಾಲೇಜು, ಫೆ.18 ರಂದು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಸರ್ಕಾರಿ ಪ್ರೌಢಶಾಲೆ, 22 ರಂದು ಮಾಗಡಿಯ ಜೂನಿಯರ್ ಕಾಲೇಜು ಹಾಗೂ 23 ರಂದು ಮಾಗಡಿ ತಾಲ್ಲೂಕಿನ ಮಿನಿ ಕ್ರೀಡಾಂಗಣದಲ್ಲಿ ಆಯ್ಕೆ ನಡೆಯಲಿದೆ.ಪ್ರವೇಶ ಬಯಸುವ ವಿದ್ಯಾರ್ಥಿಗಳು 2011-12ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 4ನೇ ತರಗತಿಯಲ್ಲಿ ಓದುತ್ತಿರಬೇಕು. 5ನೇ ತರಗತಿಗೆ  2012-13ನೇ ಸಾಲಿಗೆ ಸೇರ್ಪಡೆಗೊಳ್ಳಲು ಅರ್ಹರಾಗಿರಬೇಕು. ದಿನಾಂಕ 01-06-2012ಕ್ಕೆ 11 ರಿಂದ 13 ವರ್ಷದೊಳಗಿರಬೇಕು ಎಂದು ಪ್ರಕಟಣೆ ತಿಳಿಸಿದೆ.ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ರಾಮನಗರ ಪಟ್ಟಣದಲ್ಲಿನ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ಈ ವಿದ್ಯಾಭ್ಯಾಸದ ಖರ್ಚುಗಳನ್ನು ಪೋಷಕರೇ ಭರಿಸತಕ್ಕದ್ದು. ಆಯ್ಕೆಯಾದ ಕ್ರೀಡಾಪಟುಗಳಿಗೆ ಉಚಿತವಾಗಿ ಉತ್ತಮ ವಸತಿ ಮತ್ತು ಆರೋಗ್ಯಕರ ಊಟದ ವ್ಯವಸ್ಥೆ, ಜತೆಗೆ ಅನುಭವಿ ಉಪಾಧ್ಯಾಯರಿಂದ ಹೆಚ್ಚುವರಿ ವ್ಯಾಸಂಗಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು.ಆಯ್ಕೆಯಾದ ಕ್ರೀಡಾಪಟುಗಳಿಗೆ ಪ್ರತಿ ತಿಂಗಳು 2 ಅಥವಾ 3ರಂದು ಪ್ರತ್ಯೇಕ ವೈದ್ಯಕೀಯ ತಪಾಸಣೆ ನಡೆಸಲಾಗುವುದು. ಕ್ರೀಡಾ ಸಮವಸ್ತ್ರ ಹಾಗೂ ಕ್ರೀಡಾ ಸಾಮಗ್ರಿಗಳನ್ನು ನೀಡಲಾಗುವುದು.ಕ್ರೀಡಾಪಟುಗಳಿಗೆ ಹೊಸದಾಗಿ ಕ್ರೀಡಾ ಸಂಜೀವಿನಿ ವಿಮಾ ಪಾಲಿಸಿ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದು ಪ್ರಕಟಣೆ ವಿವರಿಸಿದೆ.ಆಟೋಟಗಳು (ಅಥ್ಲೆಟಿಕ್ಸ್): ಬಾಲಕ/ಬಾಲಕಿಯರಿಗೆ 11 ವರ್ಷದಿಂದ 13 ವರ್ಷದ ಒಳಪಟ್ಟಿರಬೇಕು. 130 ಸೆಂ.ಮೀ ಮೇಲ್ಪಟ್ಟು ಎತ್ತರ, 25 ಕೆ.ಜಿ.ಗಿಂತ ಮೇಲ್ಪಟ್ಟು ತೂಕ ಹೊಂದಿರಬೇಕು.ಕಾಲ್ಚೆಂಡು (ಬಾಲಕರಿಗಾಗಿ): 11 ವರ್ಷದಿಂದ 13 ವರ್ಷದ ಒಳಪಟ್ಟಿರಬೇಕು. 140 ಸೆಂ.ಮೀ ಮೇಲ್ಪಟ್ಟು ಎತ್ತರ, 30 ಕೆ.ಜಿ.ಗಿಂತ ಮೇಲ್ಪಟ್ಟು ತೂಕವಿರಬೇಕು. ವರ್ಟಿಕಲ್ ಜಂಪ್, 30 ಮೀ ಪ್ಲೇಯಿಂಗ್ ಸ್ಪಾಟ್  10*6 ಸೆಟಲ್‌ರನ್, 600 ಮೀ ಓಟ, 1 ಕೆ.ಜಿ. ಮೆಡಿಷನ್ ಬಾಲ್ ಥ್ರೊ.ಈ ಮೇಲ್ಕಂಡ ಎಲ್ಲಾ ಸ್ಪರ್ಧೆಗಳಲ್ಲಿ ಬಾಲಕ/ಬಾಲಕಿಯರನ್ನು ಪರೀಕ್ಷೆ ಮಾಡಲಾಗುವುದು. ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು ತಪ್ಪದೇ ತಮ್ಮ ಜನ್ಮ ದಿನಾಂಕ ಪತ್ರಗಳನ್ನು ಆಯ್ಕೆ ಸಮಯದಲ್ಲಿ ಕಡ್ಡಾಯವಾಗಿ ಹಾಜರುಪಡಿಸಬೇಕು. ಮತ್ತು ಆಯ್ಕೆಯಲ್ಲಿ ಭಾಗವಹಿಸಲು ಕ್ರೀಡಾಪಟುಗಳು ತಮ್ಮ ಪೋಷಕರ ಅನುಮತಿ ಪತ್ರವನ್ನೂ ಕಡ್ಡಾಯವಾಗಿ ತರತಕ್ಕದ್ದು.ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರ ಕಚೇರಿ, ಯುವಜನ ಸೇವಾ, ಕ್ರೀಡಾ ಇಲಾಖೆ, ರಾಮನಗರ ಜಿಲ್ಲೆ, ನಗರಸಭೆ ಆವರಣ, ರೈಲ್ವೆ ಸ್ಟೇಷನ್ ರಸ್ತೆ, ರಾಮನಗರ, ದೂ.ಸಂ: 7273704 ಮತ್ತು 7274655 ಇಲ್ಲಿ ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry