ಕ್ರೀಡಾ ಪ್ರಾಧಿಕಾರಕ್ಕೆ ಜಯ

7

ಕ್ರೀಡಾ ಪ್ರಾಧಿಕಾರಕ್ಕೆ ಜಯ

Published:
Updated:

ಬೆಂಗಳೂರು: ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಕರ್ನಾಟಕ ವಾಲಿಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಬುಧವಾರದ ಪಂದ್ಯದಲ್ಲಿ 3-0       ಸೆಟ್‌ಗಳಲ್ಲಿ ಬಿಇಎಲ್ ತಂಡವನ್ನು ಮಣಿಸಿತು.ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕ್ರೀಡಾ ಪ್ರಾಧಿಕಾರ ಮೊದಲ ಸೆಟ್‌ನಲ್ಲಿ ಭಾರೀ ಪೈಪೋಟಿ ನಡೆಸಿ 31-29 ಕೇವಲ ಎರಡು ಪಾಯಿಂಟ್‌ಗಳ ಅಂತರದಿಂದ ಗೆಲುವು ಸಾಧಿಸಿತು. ಮುಂದಿನ ಎರಡು ಸೆಟ್‌ಗಳಲ್ಲಿ 25-12, 25-22ರಲ್ಲಿ ಬಿಇಎಲ್ ಎದುರು ಸುಲಭ ಗೆಲುವು ಸಾಧಿಸಿತು. ಒಂದು ಗಂಟೆ ಕಾಲ ನಡೆದ ಹಣಾಹಣಿಯಲ್ಲಿ ಪ್ರಜ್ವಲ್ ಹಾಗೂ ಜಗದೀಶ್ ಅವರ ಚುರುಕಾದ ಆಟ ಕ್ರೀಡಾ ಪ್ರಾಧಿಕಾರಕ್ಕೆ ಗೆಲುವು ತಂದುಕೊಟ್ಟಿತು.ದಿನದ ಇನ್ನೊಂದು ಪಂದ್ಯದಲ್ಲಿ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್) 3-1 (20-25, 25-15, 25-21, 25-23) ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಎದುರು ಜಯ ಪಡೆಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry