ಕ್ರೀಡಾ ಪ್ರಾಧಿಕಾರಕ್ಕೆ ಸೋಲು

7

ಕ್ರೀಡಾ ಪ್ರಾಧಿಕಾರಕ್ಕೆ ಸೋಲು

Published:
Updated:

ಬೆಂಗಳೂರು: ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) `ಎ~ ತಂಡ ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ ಓಜೋನ್ ಗ್ರೂಪ್ ರಾಷ್ಟ್ರೀಯ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಶುಕ್ರವಾರದ ಪಂದ್ಯದಲ್ಲಿ 1-3ಗೋಲುಗಳಿಂದ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) `ಎ~ ಎದುರು ಸೋಲು ಕಂಡಿತು.ಅಕ್ಕಿ ತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುತ್ತಣ್ಣ 16ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರ ಬೋಪಣ್ಣ (22ನೇ ನಿ.) ಹಾಗೂ ಪೃಥ್ವಿಶೆಟ್ಟಿ (55ನೇ ನಿ.) ಗೋಲು ತಂದಿಟ್ಟು ಎಸ್‌ಎಐ ತಂಡದ ಗೆಲುವಿಗೆ ಕಾರಣರಾದರು.ಇನ್ನೊಂದು ಪಂದ್ಯದಲ್ಲಿ ಬಿಪಿಸಿಎಲ್ 2-1ಗೋಲುಗಳಿಂದ ಒಎನ್‌ಜಿಸಿ ಎದುರು ಜಯಿಸಿತು. ವಿಜಯಿ ತಂಡದ ಜರ್ನೈಲ್ ಸಿಂಗ್ ಹಾಗೂ ಅಮಿರ್ ಖಾನ್ ಕ್ರಮವಾಗಿ 47, 68ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry