ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲು ಸಲಹೆ

7

ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲು ಸಲಹೆ

Published:
Updated:

ಹೊಸಕೋಟೆ: ಸಾರ್ವಜನಿಕ ಶಿಕ್ಷಣ ಇಲಾಖೆ  ಪಟ್ಟಣದ ಮಾಂಟ್ರಿಯಲ್‌ ಶಾಲೆ ಆಶ್ರಯದಲ್ಲಿ ಇಲ್ಲಿನ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾವಳಿಯನ್ನು ಶಾಸಕ ಎನ್‌.ನಾಗರಾಜು ಉದ್ಘಾಟಿಸಿದರು. ನಂತರ ಮಾತನಾಡಿದ ನಾಗರಾಜು ಅವರು, ‘ಕ್ರೀಡಾಪಟುಗಳು ಸೋಲು ಗೆಲವುಗಳನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳ­ಬೇಕು’ ಎಂದರು.ಈ ಸಂದರ್ಭದಲ್ಲಿ ಅಂತರ­ರಾಷ್ಟ್ರೀಯ ಕಬಡ್ಡಿ ಅಧಿಕಾರಿ ಶಾಮಣ್ಣ ಅವರನ್ನು ಸನ್ಮಾನಿಸಲಾಯಿತು. ಫಲಿತಾಂಶ: ಪ್ರಾಥಮಿಕ ಶಾಲಾ ವಿಭಾಗ ಬಾಲಕರು: ಹೊಸಕೋಟೆ ಸ್ವಾಮಿ ವಿವೇಕಾನಂದ ಶಾಲೆ ಪ್ರಥಮ, ದೇವನಹಳ್ಳಿ ದ್ವಿತೀಯ, ಬಾಲಕಿಯರು: ಹೊಸಕೋಟೆ ಮಾಂಟ್ರಿಯಲ್‌ ಶಾಲೆ ಪ್ರಥಮ, ದೇವನಹಳ್ಳಿ–ದ್ವಿತೀಯ.ಪ್ರೌಢಶಾಲಾ ವಿಭಾಗ ಬಾಲಕರು: ದೇವನಹಳ್ಳಿ–ಪ್ರಥಮ, ದೊಡ್ಡಬಳ್ಳಾಪುರ– ದ್ವಿತೀಯ, ಬಾಲಕಿಯರು: ದೊಡ್ಡಬಳ್ಳಾಪುರ–ಪ್ರಥಮ, ದೇವನಹಳ್ಳಿ–ದ್ವಿತೀಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry