ಕ್ರೀಡಾ ಸ್ಫೂರ್ತಿ ಮರೆತ ಆತಿಥೇಯರು

7

ಕ್ರೀಡಾ ಸ್ಫೂರ್ತಿ ಮರೆತ ಆತಿಥೇಯರು

Published:
Updated:

ನಾಗಪುರ: ಟೆಸ್ಟ್ ಪಂದ್ಯ ಮುಗಿದ ತಕ್ಷಣ ನಡೆದ ಟ್ರೋಫಿ ಪ್ರಧಾನ ಕಾರ್ಯಕ್ರಮಕ್ಕೆ ಭಾರತದ ಆಟಗಾರರು ಆಗಮಿಸಲೇ ಇಲ್ಲ. ನಾಯಕ ದೋನಿ ಮಾತ್ರ ಆಗಮಿಸಿ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.ಸೋಲು ಕಂಡ ನಿರಾಶೆಯಲ್ಲಿದ್ದ ಆತಿಥೇಯ ಆಟಗಾರರು ಡ್ರೆಸ್ಸಿಂಗ್ ಕೊಠಡಿಯಲ್ಲಿಯೇ ಕುಳಿತಿದ್ದರು. ಈ ಮೂಲಕ ಕ್ರೀಡಾ ಸ್ಫೂರ್ತಿ ಮರೆತರು. ಪುಟ್ಟ ಕಾರ್ಯಕ್ರಮದಲ್ಲಿ ಇಂಗ್ಲೆಂಡ್ ತಂಡದ ಎಲ್ಲಾ ಆಟಗಾರರು ಉಪಸ್ಥಿತರಿದ್ದರು.ಸೋಲಲಿ, ಗೆಲ್ಲಲಿ ಉಭಯ ತಂಡಗಳ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಈ ಪುಟ್ಟ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ವಾಡಿಕೆ. ಆದರೆ ಭಾರತ ತಂಡದವರು ಹಾಗೆ ಮಾಡಲಿಲ್ಲ.ವಿಕೆಟ್ ಹಿಡಿದುಕೊಂಡು ಬಂದ ಕೊಹ್ಲಿ

ಗೆದ್ದ ಸಂದರ್ಭದಲ್ಲಿ ವಿಕೆಟ್ ಕಿತ್ತುಕೊಂಡು ಸಂಭ್ರಮಿಸುವುದು ಸಹಜ. ಆದರೆ ಪಂದ್ಯ ಡ್ರಾ ಆಗಿ ಸರಣಿ ಸೋಲು ಕಂಡರೂ ವಿರಾಟ್ ಕೊಹ್ಲಿ ವಿಕೆಟ್ ಕಿತ್ತುಕೊಂಡು ಪೆವಿಲಿಯನ್‌ಗೆ ಬಂದಿದ್ದು ಗಮನ ಸೆಳೆಯಿತು.ಇಂಗ್ಲೆಂಡ್‌ಗೆ ಅಂಥೋಣಿ ಡಿ ಮೆಲ್ಲೊ ಟ್ರೋಫಿ

2-1ರಲ್ಲಿ ಸರಣಿ ಗೆದ್ದ ಇಂಗ್ಲೆಂಡ್ ತಂಡಕ್ಕೆ ಅಂಥೋಣಿ ಡಿ ಮೆಲ್ಲೊ ಟ್ರೋಫಿ ನೀಡಲಾಯಿತು. ನಾಯಕ ಕುಕ್ ಅದನ್ನು ಎತ್ತಿ ಹಿಡಿದು ಅಂಗಳದಲ್ಲಿ ಸಂಭ್ರಮಿಸಿದರು. ಅಂಥೋಣಿ ಬಿಸಿಸಿಐನ ಮೊದಲ ಕಾರ್ಯದರ್ಶಿ. ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುಲಿರುವ ಸರಣಿಗೆ ಅವರ ಹೆಸರು ಇಡಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry