ಭಾನುವಾರ, ಏಪ್ರಿಲ್ 18, 2021
32 °C

ಕ್ರೀಡೆಗೆ ಉತ್ಸಾಹ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕ್ರೀಡೆಗೆ ವಯಸ್ಸಿನ ಹಂಗಿಲ್ಲ. ಉತ್ಸಾಹ ಮುಖ್ಯ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ತಿಳಿಸಿದರು.ಗುಲ್ಬರ್ಗದಲ್ಲಿ ಗುರುವಾರ ಗೃಹ ರಕ್ಷಕ ದಳದ ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ, ಯಾವುದೇ ವೃತ್ತಿಯಲ್ಲಿ ಇದ್ದರೂ ದೈಹಿಕ ಕ್ಷಮತೆ ಕಾಯ್ದುಕೊಳ್ಳುವುದು ಅತಿ ಮುಖ್ಯ. ಈ ಪೈಕಿ ಪೊಲೀಸ್ ವೃತ್ತಿಯು ಹೆಚ್ಚಿನ ಆರೋಗ್ಯವನ್ನು ಬಯಸುತ್ತದೆ ಎಂದು ಅಭಿಪ್ರಾಯಪಟ್ಟರು.ಅಗತ್ಯ ಸಂದರ್ಭದಲ್ಲಿ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸುವ ಗೃಹ ರಕ್ಷಕ ದಳದ ಸಿಬ್ಬಂದಿಯೂ ದೇಹದ ಕ್ಷಮತೆಗೆ ಆದ್ಯತೆ ನೀಡಬೇಕು. ಗೃಹರಕ್ಷಕ ದಳ ಸಿಬ್ಬಂದಿ ಸ್ವಯಂ ಆಸಕ್ತಿಯಿಂದ ಬಂದು ಸೇವೆ ಸಲ್ಲಿಸುತ್ತಾರೆ.

ಇದೊಂದು ಅಮೂಲ್ಯ ಕಾಯಕ. ಯಾವುದೇ ಸಂದರ್ಭದಲ್ಲಿ ಕರೆ ಬಂದರೂ ಕರ್ತವ್ಯ ನಿರ್ವಹಿಸುವ ತುರ್ತು ಇದೆ. ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ದೈಹಿಕ ಕ್ಷಮತೆ ಕಾಪಾಡಲು ಒಂದು ಕ್ರೀಡೆಯಲ್ಲಿ ಸಕ್ರಿಯವಾಗಿರಬೇಕು ಎಂದು ಹೇಳಿದರು.  ಆಟವು ಕೇವಲ ದೈಹಿಕ ಕ್ಷಮತೆಗೆ ಮಾತ್ರ ಸೀಮಿತವಲ್ಲ.ಮಾನಸಿಕ ಉಲ್ಲಾಸಕ್ಕೆ ಪ್ರೇರಣೆ ನೀಡುತ್ತದೆ. ಅದು ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ.  ಕ್ರೀಡಾಕೂಟದಲ್ಲಿ ಹೆಚ್ಚಿನ ಜನ ಪಾಲಗೊಳ್ಳಬೇಕು ಎಂದು ಕರೆ ನೀಡಿದರು. ವಿವಿಧ ವೃತ್ತಿಗಳನ್ನು ನಿರ್ವಹಿಸುತ್ತಿರುವ ಮಧ್ಯೆಯೇ ಗೃಹರಕ್ಷಕ ದಳಕ್ಕೆ ಸೇವೆ ನೀಡುತ್ತಿರುವ ಸಿಬ್ಬಂದಿಯನ್ನು ಅತಿಥಿಗಳಿಗೆ ಪರಿಚಯ ಮಾಡಿಕೊಡಲಾಯಿತು.ಶಾಸಕಿ ಅರುಣಾ ಚಂದ್ರಶೇಖರ ಪಾಟೀಲ ರೇವೂರ ಮಾತನಾಡಿ, ಗೃಹರಕ್ಷಕ ದಳದ ಸಿಬ್ಬಂದಿ ಸೇವೆಯನ್ನು ಶ್ಲಾಘಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಲತಾಕುಮಾರಿ, ಗೃಹ ರಕ್ಷಕ ದಳ ಜಿಲ್ಲಾ ವರಿಷ್ಠ ಮಹಾಂತೇಶ ದೇಸಾಯಿ, ಪದಾಧಿಕಾರಿಗಳಾದ ರವೀಂದ್ರ ಶಾಬಾದಿ, ಬಸವರಾಜ, ಸತ್ಯನಾರಾಯಣ, ವಾಯೀದ್ ಮತ್ತಿತರರು ಇದ್ದರು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.