ಕ್ರೀಡೆ:ಚುಟುಕು ಗುಟುಕು

7

ಕ್ರೀಡೆ:ಚುಟುಕು ಗುಟುಕು

Published:
Updated:

ಮೂರನೇ ಸ್ಥಾನಕ್ಕೆ ಕುಸಿದ ಭಾರತ

ಕೊಲಂಬೊ (ಪಿಟಿಐ):
ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ `ಸೂಪರ್ 8~ ಹಂತದಲ್ಲಿಯೇ ಹೊರಬಿದ್ದ ಭಾರತ ತಂಡದವರು ಐಸಿಸಿ ರ‌್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಚಾಂಪಿಯನ್ ವೆಸ್ಟ್‌ಇಂಡೀಸ್ ಐದು ಸ್ಥಾನ ಮೇಲೇರಿದೆ.ಡರೆನ್ ಸಮಿ ಬಳಿಗ 121 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೇರಿದೆ. ಲಂಕಾ ತಂಡ ಫೈನಲ್‌ನಲ್ಲಿ ಸೋತರೂ ಅಗ್ರಸ್ಥಾನ ಉಳಿಸಿಕೊಂಡಿದೆ. ಈ ತಂಡ 127 ಪಾಯಿಂಟ್ ಹೊಂದಿದೆ. ಪಾಕಿಸ್ತಾನ ತಂಡ ಆರನೇ ಸ್ಥಾನಕ್ಕೆ ಕುಸಿದಿದೆ. ಬ್ಯಾಟ್ಸ್‌ಮನ್‌ಗಳ ರ‌್ಯಾಂಕಿಂಗ್‌ನಲ್ಲಿ ಸುರೇಶ್ ರೈನಾ ಐದನೇ ಹಾಗೂ ವಿರಾಟ್ ಕೊಹಿ 10ನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಭಾರತದ ಯಾರೂ 10ರೊಳಗಿನ ರ‌್ಯಾಂಕ್‌ನಲ್ಲಿಲ್ಲ.ರ‌್ಯಾಂಕಿಂಗ್ ಪಟ್ಟಿ ಇಂತಿದೆ: 1 ಶ್ರೀಲಂಕಾ (127 ಪಾಯಿಂಟ್ಸ್), 2 ವೆಸ್ಟ್‌ಇಂಡೀಸ್ (121), 3 ಭಾರತ (120), 4 ಇಂಗ್ಲೆಂಡ್ (118), 5 ದಕ್ಷಿಣ ಆಫ್ರಿಕಾ (117), 6 ಪಾಕಿಸ್ತಾನ (116), 7 ಆಸ್ಟ್ರೇಲಿಯಾ (108), 8 ನ್ಯೂಜಿಲೆಂಡ್ (97), 9 ಬಾಂಗ್ಲಾದೇಶ (85), 10 ಐರ್ಲೆಂಡ್ (82).ಟೆನಿಸ್: ನಿಕ್ಷೇಪ್ ಶುಭಾರಂಭ

ಬೆಂಗಳೂರು:
ಕರ್ನಾಟಕದ ಬಿ.ಆರ್. ನಿಕ್ಷೇಪ್ ನವದೆಹಲಿಯಲ್ಲಿ ನಡೆಯುತ್ತಿರುವ ಎಐಟಿಎ ರಾಷ್ಟ್ರೀಯ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಶುಭಾರಂಭ ಮಾಡಿದ್ದಾರೆ.ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ನಿಕ್ಷೇಪ್ 6-1, 6-0ರಲ್ಲಿ ಆತಿಥೇಯ ದೆಹಲಿಯ ಸುಜೀವ್ ಚೋಪ್ರಾ ಎದುರು ಗೆಲುವು ಸಾಧಿಸಿದರು ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.ಕರ್ನಾಟಕ ತಂಡಕ್ಕೆ ದಿವ್ಯಾ ನಾಯಕಿ

ಬೆಂಗಳೂರು: ಜಿ.ದಿವ್ಯಾ ಅಕ್ಟೋಬರ್ 9ರಿಂದ 15ರವರೆಗೆ ವಿಜಯವಾಡದಲ್ಲಿ ನಡೆಯಲಿರುವ 19 ವರ್ಷ ವಯಸ್ಸಿನೊಳಗಿನವರ ಯುವತಿಯರ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡ ಮುನ್ನಡೆಸಲಿದ್ದಾರೆ.

ತಂಡ ಇಂತಿದೆ: ಜಿ.ದಿವ್ಯಾ (ನಾಯಕಿ), ರಾಮೇಶ್ವರಿ (ಉಪನಾಯಕಿ), ಬಿ.ಎಸ್.ರಮ್ಯಾ, ಶುಭಾ, ಪೂಜಾ ಪಾಂಚಾಲ್, ಎ.ಸುನೇತ್ರಾ ಕುಮಾರ್, ದೇಬಾಸ್ಮಿತಾ ದತ್ತಾ, ಸಿಮ್ರೆನ್ ಹೆನ್ರಿ, ಪುಷ್ಪಾ, ಸಹನಾ ಎಸ್.ಪವಾರ್, ಪ್ರಿಯಾಂಕಾ, ಎಸ್.ವಿದ್ಯಾಶ್ರೀ, ಶರಣ್ಯಾ, ಸಿ. ಪ್ರತ್ಯುಷಾ, ಪದ್ಮಶ್ರೀ. ಕೋಚ್: ಜಿ.ಬಾಲಾಜಿ, ಮ್ಯಾನೇಜರ್: ಕೆ.ಆರ್.ಗಾಯತ್ರಿ.ಹಾಕಿ: ಭಾರತಕ್ಕೆ ಏಳನೇ ಸ್ಥಾನ

ಡುಬ್ಲಿನ್, ಐರ್ಲೆಂಡ್ (ಪಿಟಿಐ):
ಭಾರತ ಮಹಿಳಾ ತಂಡದವರು ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಚಾಲೆಂಜ್-1 ಹಾಕಿ ಟೂರ್ನಿಯಲ್ಲಿ ಏಳನೇ ಸ್ಥಾನ ಪಡೆದಿದ್ದಾರೆ.ಸೋಮವಾರ ನಡೆದ ಪಂದ್ಯದಲ್ಲಿ ಭಾರತ 4-0 ಗೋಲುಗಳಿಂದ ವೇಲ್ಸ್ ತಂಡವನ್ನು ಪರಾಭವಗೊಳಿಸಿತು. ವಿಜಯಿ ತಂಡದ ಪೂನಮ್ ರಾಣಿ, ಅನುಪಾ ಬಾರ್ಲಾ, ರಿತು ರಾಣಿ, ಲಿಲಿ ಚಾನು ಗೋಲು ಗಳಿಸಿದರು.ಈ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ 1-3 ಗೋಲುಗಳಿಂದ ಸ್ಕಾಟ್ಲೆಂಡ್ ಎದುರು ಸೋಲು ಕಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry