ಕ್ರೀಡೆಯಿಂದ ಉಲ್ಲಾಸ, ಮನಸ್ಥೈರ್ಯ

7

ಕ್ರೀಡೆಯಿಂದ ಉಲ್ಲಾಸ, ಮನಸ್ಥೈರ್ಯ

Published:
Updated:

ಬ್ರಹ್ಮಾವರ: `ಕ್ರೀಡೆಯಿಂದ ಮನಸ್ಸಿಗೆ ಉಲ್ಲಾಸ, ಉತ್ಸಾಹ ಸಿಗುತ್ತದೆ. ಮನಸ್ಥೈರ್ಯ ಹೆಚ್ಚುತ್ತದೆ. ಶಾಲಾ ಹಂತದಲ್ಲೇ ಮಕ್ಕಳಿಗೆ ಕ್ರೀಡೆಯ ಮಹತ್ವ ತಿಳಿಸಿ ಅವರನ್ನು ಉತ್ತಮ ಕ್ರೀಡಾಪಟುಗಳನ್ನಾಗಿ ರೂಪಿಸುವ ಕೆಲಸವಾ ದಲ್ಲಿ ಭಾರತದಲ್ಲಿ ಕ್ರೀಡಾಪಟುಗಳ ಕೊರತೆ ಇರದು~ ಎಂದು ಕೋಟ ಮಣೂರಿನ ಗೀತಾನಂದ ಫೌಂಡೇಶನ್‌ನ ಆನಂದ್ ಸಿ.ಕುಂದರ್ ಹೇಳಿದರು.ಹಂಗಾರಕಟ್ಟೆ ಚೇತನಾ ಪ್ರೌಢಶಾಲೆಯಲ್ಲಿ ಶನಿವಾರ ಬ್ರಹ್ಮಾವರ ವಲಯ ಪ್ರಾಥಮಿಕ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಮ್ಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಶಿಕ್ಷಣದೊಂದಿಗೆ ದೈಹಿಕ ಶಿಕ್ಷಣಕ್ಕೆ ಮಹತ್ವ ನೀಡಿ ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ದೈಹಿಕ ಶಿಕ್ಷಕರ ಕೆಲಸ ನಿಜವಾಗಿಯೂ ಶ್ಲಾಘನೀಯ ಎಂದು ಅವರು ಹೇಳಿದರು.ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಬ್ರಹ್ಮಾವರ ವಲಯದ ಕ್ರೀಡಾಪಟುಗಳಾದ ಕೂರಾಡಿ ಬಿ.ಎಂ.ಎಂ.ಪ್ರೌಢಶಾಲೆಯ ಶಿಲ್ಪಾ, ಪ್ರಿಯಾಂಕ, ಸ್ವಾತಿ, ಕಲ್ಯಾಣಪುರ ಮಿಲಾಗ್ರಿಸ್ ಶಾಲೆಯ ವಿನುತಾ ಪಾಲನ್, ಪ್ರಜ್ವಲ್ ಬೈಂದೂರು ಮತ್ತು ಲೀಸ್ ಒಡೆಲಾ ಅವರನ್ನು ಸನ್ಮಾನಿಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ಶಾನುಭಾಗ್ ಅಧ್ಯಕ್ಷತೆ ವಹಿಸಿದ್ದರು.

ಟೆಬ್ಮಾ ಶಿಪ್ ಯಾರ್ಡ್‌ನ ಉಪಾಧ್ಯಕ್ಷ ಪಿ.ಅಬೂಬಕ್ಕರ್, ಉದ್ಯಮಿ ಶಶಿಧರ್ ಶೆಟ್ಟಿ, ದೈಹಿಕಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಭುಜಂಗ ಶೆಟ್ಟಿ, ಕಾರ್ಯದರ್ಶಿ ಶ್ರೀಕಾಂತ್ ಸಾಮಂತ್, ದೈಹಿಕ ಶಿಕ್ಷಕ ಸತೀಶ್ಚಂದ್ರ ಚಿತ್ರಪಾಡಿ, ಹಂಗಾರಕಟ್ಟೆ ಚೇತನಾ ಪ್ರೌಢಶಾಲೆಯ ಕಾರ್ಯದರ್ಶಿ ಇಬ್ರಾಹಿಂ ಸಾಹೇಬ್, ಮುಖ್ಯ ಶಿಕ್ಷಕ ಗಣೇಶ್ ಜಿ, ಬ್ರಹ್ಮಾವರ ವಲಯ ದೈಹಿಕ ಶಿಕ್ಷಣ ಪರಿ ವೀಕ್ಷ ಣಾಧಿಕಾರಿ ಮಧುಕರ್ ಎಸ್, ಜಿಲ್ಲಾ ಸಂಘದ ಗೌರವಾಧ್ಯಕ್ಷ ಸತೀಶ್‌ಕುಮಾರ್ ಶೆಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry