ಕ್ರೀಡೆ: ಚುಟುಕು ಗುಟುಕು

7

ಕ್ರೀಡೆ: ಚುಟುಕು ಗುಟುಕು

Published:
Updated:

ರಘುನಾಥ್‌ಗೆ ಟೀ ಶರ್ಟ್‌ ಕಾಣಿಕೆ

ಬೆಂಗಳೂರು:
ಒಲಿಂಪಿಯನ್‌ ಹಾಕಿ ಆಟಗಾರ ವಿ.ಆರ್‌. ರಘುನಾಥ್ ಅವರಿಗೆ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ನ ಮುಖ್ಯ ಕೋಚ್‌ ಆ್ಯಷ್ಲೆ ವೆಸ್ಟ್‌ವುಡ್‌ ಶನಿವಾರ ತಮ್ಮ ತಂಡದ ಟೀ ಶರ್ಟ್‌ ನೀಡಿದರು.ಮಲೇಷ್ಯಾದಲ್ಲಿ ನಡೆದ ಏಷ್ಯಾ ಕಪ್‌ ಹಾಕಿ ಟೂರ್ನಿಯಲ್ಲಿ ಕನ್ನಡಿಗ ರಘುನಾಥ್‌ ಗಮನಾರ್ಹ ಪ್ರದರ್ಶನ ತೋರಿದ್ದರು.

‘ಬೇರೆ ಕ್ರೀಡೆಗಳಿಗೆ ಯಾವಾಗಲೂ ಬೆಂಬಲ ನೀಡುತ್ತೇನೆ. ಫುಟ್‌ಬಾಲ್‌ ಅನ್ನು ತುಂಬಾ ಇಷ್ಟಪಡುತ್ತೇನೆ’ ಎಂದು ರಘುನಾಥ್‌ ಹೇಳಿದರು.ಹ್ಯಾಮಿಲ್ಟನ್‌ಗೆ ‘ಪೋಲ್‌ ಪೋಷಿಷನ್‌’

ಮೊನ್ಜಾ (ಎಎಫ್‌ಪಿ):
ಇಟಲಿ ಗ್ರ್ಯಾಂಡ್‌ ಪ್ರಿ ಫಾರ್ಮುಲಾ ಒನ್‌ ರೇಸ್‌ನಲ್ಲಿ ಲೂಯಿಸ್‌ ಹ್ಯಾಮಿಲ್ಟನ್‌ ‘ಪೋಲ್‌ ಪೋಷಿಷನ್‌’ ಪಡೆದುಕೊಂಡಿದ್ದಾರೆ.ಈ ಮೂಲಕ ರೆಡ್‌ ಬುಲ್‌ ತಂಡದ ಹ್ಯಾಮಿಲ್ಟನ್‌ ಸತತ ನಾಲ್ಕನೇ ಸಲ ‘ಪೋಲ್‌ ಪೋಷಿಷನ್‌’ ಪಡೆದ ಸಾಧನೆ ಮಾಡಿದರು. ಆದರೆ, ಸಹಾರ ಫೋರ್ಸ್‌ ಇಂಡಿಯಾ ಚಾಲಕರು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು.ಬ್ಯಾಸ್ಕೆಟ್‌ಬಾಲ್‌: ಹೊರಬಿದ್ದ ಕರ್ನಾಟಕ

ಕಟಕ್‌:
ಕರ್ನಾಟಕದ ಬಾಲಕ ಮತ್ತು ಬಾಲಕಿಯರ ತಂಡಗಳು ಇಲ್ಲಿ ನಡೆಯತ್ತಿರುವ 62ನೇ ರಾಷ್ಟ್ರೀಯ ಜೂನಿಯರ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಕಂಡು ಟೂರ್ನಿಯಿಂದ ಹೊರ ಬಿದ್ದವು.ಶುಕ್ರವಾರ ನಡೆದ ಎಂಟರ ಘಟ್ಟದ ಹೋರಾಟದಲ್ಲಿ ಕರ್ನಾಟಕದ ಬಾಲಕರ ತಂಡ 72–77 ಪಾಯಿಂಟ್‌ಗಳಿಂದ ಕೇರಳ ಎದುರು ನಿರಾಸೆ ಅನುಭವಿಸಿತು. ಬಾಲಕಿಯರ ತಂಡದವರೂ 29–74ರಲ್ಲಿ ಕೇರಳದ ವಿರುದ್ಧವೇ ಸೋಲು ಕಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry