ಮಂಗಳವಾರ, ಜನವರಿ 21, 2020
28 °C

ಕ್ರೀಡೆ: ಚುಟುಕು ಗುಟುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುರವಂಕರ ತಂಡದಲ್ಲಿ ಮೂವರು

ಬೆಂಗಳೂರು:
ವೃತ್ತಿಪರ ಗಾಲ್ಫರ್‌ಗಳಾದ ಅಭಿಷೇಕ್ ಜಾ, ಮಾನವ್ ಜೈನ್, ಹಾಗೂ ಅನಿರ್ಬನ್ ಲಹಿರಿ, ಅವರು ಮಾರ್ಚ್ 5ರಿಂದ ಉದ್ಯಾನನನಗರಿಯಲ್ಲಿ ನಡೆಯಲಿರುವ ಲೂಯಿ ಫಿಲಿಪ್ ಕಪ್ ಗಾಲ್ಫ್  ಟೂರ್ನಿಯಲ್ಲಿ `ಪುರವಂಕರ ಬೆಂಗಳೂರು~ ತಂಡವನ್ನು ಪ್ರತಿನಿಧಿಸಲಿದ್ದಾರೆ.`ಈ ಟೂರ್ನಿಯಲ್ಲಿ ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ, ಚಂಡೀಗಡ, ಲಖನೌ ಹಾಗೂ ಗುಡಗಾಂವ್‌ನ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಇದು ಒಟ್ಟು 1 ಕೋಟಿ 20 ಲಕ್ಷ ರೂಪಾಯಿ ಬಹುಮಾನ ಒಳಗೊಂಡಿದೆ~ ಎಂದು ಪುರವಂತಕ ಪಾಜಿಕ್ಟ್ಸ್ ಲಿಮಿಟೆಡ್‌ನ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಜ್ಯಾಕ್ ಬಸ್ಟಿಯನ್ ನಜರೆತ್ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.ಚೆಸ್: ಮುನ್ನಡೆಯಲ್ಲಿ ಹರಿಕೃಷ್ಣನ್

ವಿಕ್ ಆ್ಯನ್ ಜಿ (ಹಾಲೆಂಡ್):
ಗ್ರ್ಯಾಂಡ್ ಮಾಸ್ಟರ್ ಭಾರತದ ಪಿ. ಹರಿಕೃಷ್ಣನ್ ಇಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ ಮುನ್ನಡೆಯಲ್ಲಿದ್ದಾರೆ.`ಬಿ~ ಗುಂಪಿನ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಆಟಗಾರ ಉಕ್ರೇನ್‌ನ ಕ್ಯಾಟ್ರೆಯನ್ ಲಾಹ್ನೊ ಎದುರು ಗೆಲುವು ಪಡೆದರು. ಹರಿಕೃಷ್ಣನ್ ಒಟ್ಟು ಎರಡು ಪಾಯಿಂಟ್ ಹೊಂದಿದ್ದಾರೆ.ಭಾರತದ ಇನ್ನೊಬ್ಬ ಸ್ಪರ್ಧಿ ಡಿ. ಹರಿಕಾ ಆತಿಥೇಯ ದೇಶದ ಸಿಪ್ಕೆ  ಎನ್ರಸ್ಟ್ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಂಡರು.ಬಿ. ಅಧಿಬನ್ ಹಾಲೆಂಡ್‌ನ ಲಾರ್ಸ್‌ ಒಟ್ಟಿಸ್ ಎದುರಿನ ಪಂದ್ಯದಲ್ಲಿ ಡ್ರಾ ಪಡೆದರು. ಭಾರತದ ಸಹಜ್ ಗ್ರೋವರ್ ಅವರು ಜರ್ಮನಿಯ ಎಲೆಜಬಿತ್ ಪೆಹಟ್ಜ್ ಎದುರು ವಿಜಯ ಸಾಧಿಸಿದರು. ಸಹಜ್ ಒಟ್ಟು 1.5 ಪಾಯಿಂಟ್ ಹೊಂದಿದ್ದಾರೆ.ಗಾಲ್ಫ್: ಎರಡನೇ ಸ್ಥಾನದಲ್ಲಿ ಶರ್ಮಿಳಾ

ಲಾ ಮಾಂಗಾ, ಸ್ಪೇನ್ (ಐಎಎನ್‌ಎಸ್):
ಬೆಂಗಳೂರಿನ ಶರ್ಮಿಳಾ ನಿಕೋಲೆಟ್ ಇಲ್ಲಿ ನಡೆಯುತ್ತಿರುವ ಲೇಡೀಸ್ ಯೂರೋಪಿಯನ್ ಟೂರ್ ಗಾಲ್ಫ್‌ನ ಅರ್ಹತಾ ಸ್ಪರ್ಧೆಯ ಅಂತಿಮ ಹಂತದಲ್ಲಿ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.

ಲಾ ಮಾಂಗಾ ಗಾಲ್ಫ್ ರೆಸಾರ್ಟ್‌ನಲ್ಲಿ ಸೋಮವಾರ ಎರಡನೇ ಸುತ್ತಿನ ಸ್ಪರ್ಧೆಯನ್ನು ಕೊನೆಗೊಳಿಸಲು ಅವರು 70 ಅವಕಾಶಗಳನ್ನು ಬಳಸಿಕೊಂಡರು. ಮೊದಲ ಸುತ್ತಿನ ಬಳಿಕ ಶರ್ಮಿಳಾ ಜಂಟಿ ಅಗ್ರಸ್ಥಾನದಲ್ಲಿದ್ದರು. ಇದೀಗ ಇಂಗ್ಲೆಂಡ್‌ನ ಜೋಡಿ ಎವರ್ಟ್ ಅಗ್ರಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ಇಂದಿನಿಂದ ಪಾಕ್- ಇಂಗ್ಲೆಂಡ್ ಟೆಸ್ಟ್

ದುಬೈ (ಎಎಫ್‌ಪಿ):  ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪ್ರಥಮ ಕ್ರಿಕೆಟ್ ಟೆಸ್ಟ್ ಪಂದ್ಯ ಮಂಗಳವಾರ ಇಲ್ಲಿ ಆರಂಭವಾಗಲಿದೆ.

ಒಟ್ಟು ಮೂರು ಪಂದ್ಯಗಳ ಸರಣಿ ಇದಾಗಿದೆ. ನಂತರ ಉಭಯ ತಂಡಗಳು ನಾಲ್ಕು ಏಕದಿನ ಹಾಗೂ ಮೂರು ಟ್ವೆಂಟಿ-20 ಪಂದ್ಯಗಳನ್ನು ಆಡಲಿವೆ.

 

ಪ್ರತಿಕ್ರಿಯಿಸಿ (+)