ಶುಕ್ರವಾರ, ಆಗಸ್ಟ್ 23, 2019
22 °C

`ಕ್ರೀಡೆ ಮಾನಸಿಕ ಬೆಳವಣಿಗೆಗೆ ಸಹಕಾರಿ'

Published:
Updated:

ಮದ್ದೂರು: ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ ಎಂದು ಸೋಮನಹಳ್ಳಿ ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಚಿಕ್ಕಪುರುಷಯ್ಯ ತಿಳಿಸಿದರು.ಸಮೀಪದ ಸೋಮನಹಳ್ಳಿ ಎಸ್‌ಸಿಎಂಎಂ ಕ್ರೀಡಾಂಗಣದಲ್ಲಿ  ಕೆ. ಹೊನ್ನಲಗೆರೆ ವೃತ್ತ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಸಂಘಟನೆಯೊಂದಿಗೆ ಪರಸ್ಪರ ವಿಶ್ವಾಸವನ್ನು ಬೆಳಸುವಲ್ಲಿ ಪೂರಕ ಎಂದರು.ಎಸ್‌ಸಿಎಂಎಂ ಪ್ರೌಢಶಾಲೆಯ ಮುಖ್ಯಶಿಕ್ಷಕ ಡಿ. ಈರಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಕಾಳಮುತ್ತಯ್ಯ, ಎಸ್‌ಡಿಎಂಸಿ ಸದಸ್ಯರಾದ ಅಂಬರೀಷ್, ಮಹೇಶ್, ಶಂಕರ್, ರಾಜೇಂದ್ರ, ರಾಮಕೃಷ್ಣ, ಗೌರಮ್ಮ, ಪುರುಷೋತ್ತಮ್, ದೈಹಿಕ ಶಿಕ್ಷಣ ಪರಿವೀಕ್ಷಕ ಬಿ. ರಾಜು  ಸೇರಿದಂತೆ ಇತರರು ಇದ್ದರು.

Post Comments (+)