ಬುಧವಾರ, ಜೂನ್ 23, 2021
23 °C

ಕ್ರೆಡಾಯ್-ಬಿಆರ್‌ಎ ಸಹಕಾರ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಿಯಲ್‌ಟರ್ಸ್‌ ಅಸೋಸಿಯೇಶನ್ ಇಂಡಿಯಾ-ಬೆಂಗಳೂರು (ಬಿಆರ್‌ಎ-ಐ) ಮತ್ತು ಭಾರತೀಯ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಸಂಘದ (ಕ್ರೆಡಾಯ್) ಬೆಂಗಳೂರು ಘಟಕ ಪರಸ್ಪರ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿವೆ.ಎರಡೂ ಸಂಸ್ಥೆಗಳ ಕಾರ್ಯನಿರ್ವಹಣಾ ಸಾಮರ್ಥ್ಯ ಹೆಚ್ಚಿಸುವುದು ಮತ್ತು ಮಾಹಿತಿ ವಿನಿಮಯವು ಈ ದ್ವಿಪಕ್ಷೀಯ ಸಹಕಾರದ ಒಪ್ಪಂದದ ಪ್ರಮುಖ ಉದ್ದೇಶವಾಗಿದೆ ಎಂದು ಜಂಟಿ ಪ್ರಕಟಣೆ ತಿಳಿಸಿದೆ.ಒಪ್ಪಂದದ ಮೂಲಕ ಕ್ರೆಡಾಯ್ ಬೆಂಗಳೂರು ಘಟಕದ 165  ಸದಸ್ಯರು ಹಾಗೂ `ಬಿಆರ್‌ಎ-ಐ~ ಘಟಕದ 150 ಸದಸ್ಯರು ಒಂದೇ ಸೂರಿನಡಿ ಬರಲಿದ್ದಾರೆ. ಟ್ರೇಡ್‌ಮಾರ್ಕ್ಸ್, ಕಾಪಿರೈಟ್ಸ್ ಮತ್ತು ಇತರ ಇತರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ರಕ್ಷಿಸಲು ಈ  ಒಪ್ಪಂದವು ನೆರವಾಗಲಿದೆ ಎಂದು  `ಕ್ರೆಡಾಯ್~ ಕರ್ನಾಟಕ ಘಟಕದ ಅಧ್ಯಕ್ಷ  ಸುಶೀಲ್ ಮಂತ್ರಿ ತಿಳಿಸಿದ್ದಾರೆ.ಬೆಂಗಳೂರಿನ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಇದೊಂದು ಮೈಲಿಗಲ್ಲು ಎಂದು `ಬಿಆರ್‌ಎಐ~ ಮುಖ್ಯಸ್ಥ ಫಾರೂಖ್ ಮಹಮ್ಮೂದ್  ಹೇಳಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.