ಕ್ರೈಂ ಲೋಕದ ಕರಾಳತೆ

7

ಕ್ರೈಂ ಲೋಕದ ಕರಾಳತೆ

Published:
Updated:

ಹಗಲು-ರಾತ್ರಿ ಎಂಬುದೇ ಇಲ್ಲ

ಮಹಾನಗರಗಳ ಈ ಕ್ರೈಂ ಲೋಕಕ್ಕೆ

ಸಂಬಂಧ-ಸ್ನೇಹಗಳೂ ಬೇಕಿಲ್ಲ

ಈ ಅಮಾನವೀಯ ಕೃತ್ಯಗಳಿಗೆ

ಹಣಕ್ಕಾಗಿ, ಹೆಣ್ಣಿಗಾಗಿ, ಮಣ್ಣಿಗಾಗಿ

ಬೀಳುತ್ತವೆ ಹೆಣಗಳ ಸಾಲು

ಹಾಡ ಹಗಲೇ ದರೋಡೆ ನಡೆದರೂ

ನಡು ದಾರಿಯಲ್ಲೇ ಕತ್ತು ಕೊಯ್ದರೂ

ಮನೆಯಂಗಳದಲ್ಲೇ ಮಾನ ಕಳೆದರೂ

ಕಾಪಾಡೋರಿಲ್ಲ, ಕೇಳೋರಿಲ್ಲ

ಕಳೆದುಕೊಳ್ಳೋರಿಗಿಲ್ಲಿ ಹನಿ ಕಣ್ಣೀರಿಲ್ಲ

ಪೊಲೀಸರಂತೆ, ವಕೀಲರಂತೆ, 

ಕಾನೂನಂತೆ, ನ್ಯಾಯಾಲಯವಂತೆ

ಭುವಿಯ ಮೇಲೆ ನೆತ್ತರು ಬಿದ್ದು

ಪ್ರಾಣ ಪಕ್ಷಿ ಹಾರಿದ ಮೇಲೆ

ಏನಿದ್ದರೇನು, ಯಾರಿದ್ದರೇನು...

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry