ಕ್ರೈಸ್ತರು ಹೇಗೆ ಕೋಮುವಾದಿಗಳು?

7

ಕ್ರೈಸ್ತರು ಹೇಗೆ ಕೋಮುವಾದಿಗಳು?

Published:
Updated:

‘ಕ್ರೈಸ್ತರೇ ನಿಜವಾದ ಕೋಮುವಾದಿಗಳು’ ಎಂದು ಹಿರಿಯ ಸಂಶೋಧಕ ಡಾ. ಎಂ.ಚಿದಾನಂದ ಮೂರ್ತಿಯವರು ಮಾಡಿರುವ ನೇರ ಆರೋಪ ಆಧಾರರಹಿತವಾದುದು. ಎಲ್ಲಾ ಕ್ರೈಸ್ತರು, ಪಾದ್ರಿಗಳು ಕೋಮುವಾದಿಗಳೇ ಆಗಿದ್ದರೆ, ಸಮಗ್ರ ಭಾರತವೇ ಬದಲಾಗಿ ಈ ವೇಳೆಗೆ  ಎಲ್ಲೆಲ್ಲೂ ಕ್ರೈಸ್ತರೇ ತುಂಬಿಬಿಡುತ್ತಿದ್ದರು.ಹಿಂದು ಧರ್ಮದ ಅಡಿಯಲ್ಲಿ  ನಿರ್ಮಿತಗೊಂಡಿರುವ ಈ ಭವ್ಯ ಭಾರತ, ಹಿಂದು ಸಂಪ್ರದಾಯದ ಬುನಾದಿ ಮೇಲೆ ಸದೃಢವಾಗಿ ನಿಂತಿದೆ.ಸರ್ವಧರ್ಮಗಳ ನೆಲೆನಾಡೂ ಆಗಿದೆ. ಮತಾಂತರದಿಂದ, 300 ವರ್ಷಗಳಲ್ಲಿ ಹಿಂದೂ ಧರ್ಮ ನಾಶವಾಗಿ ಅಲ್ಪಸಂಖ್ಯಾತರಾಗಿರುವ ಕ್ರೈಸ್ತರು ಬಹು ಸಂಖ್ಯಾತರಾಗಿ ಹೊರಹೊಮ್ಮವರು ಎಂಬ ಅರ್ಥದಲ್ಲಿ ಉಲ್ಲೇಖಿಸಿರುವ   ಚಿದಾನಂದ ಮೂರ್ತಿಯವರ ಮಾತು ಕಲ್ಪನೆಗೂ ನಿಲುಕದ ವಿಚಾರವಾಗಿದೆ.ಅನ್ಯಾಯವನ್ನು ಖಂಡಿಸುವ, ಪ್ರತಿಭಟಿಸುವ ಹಕ್ಕು ಸಂವಿಧಾನಬದ್ದವಾದ ಹಕ್ಕು. ಈ ಹಕ್ಕಿನನ್ವಯ ತಮಗಾದ ಅನ್ಯಾಯವನ್ನು ಸರಿಪಡಿಸುವಂತೆ ಕ್ರೈಸ್ತ ಸಮುದಾಯದವರು ಪ್ರತಿಭಟಿಸಿರುವುದು ನ್ಯಾಯ ಸಮ್ಮತವೆ.ಚಿದಾನಂದ ಮೂರ್ತಿಗಳು, ಕರ್ನಾಟಕದಲ್ಲಿ ಕ್ರೈಸ್ತಧರ್ಮಕ್ಕೆ ಅಧಿಕೃತವಾಗಿ ಮತಾಂತರ ಹೊಂದಿದವರ ನಿಖರ ಸಂಖ್ಯೆ ಮತ್ತು ಪೂರ್ಣವಿವರಗಳನ್ನು ರುಜುವಾತು ಪಡಿಸಲಿ, ಅವುಗಳ ಬಗೆಗೆ ತನಿಖೆಯಾಗಲಿ, ಸತ್ಯಾಂಶ ಹೊರಬರಲಿ, ಆಗ ಯಾರು ಕೋಮುವಾದಿಗಳೆಂದು ತಿಳಿಯುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry