ಶನಿವಾರ, ಜನವರಿ 18, 2020
23 °C

ಕ್ರೈಸ್ತ ದಲಿತರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿರುವ ದಲಿತರನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಬೇಕು ಎಂದು ಕರ್ನಾಟಕ ಕ್ರೈಸ್ತರ ಅಭ್ಯುದಯ ಸಂಘ ಒತ್ತಾಯಿಸಿದೆ.‘ಮತಾಂತರ ಹೊಂದಿರುವ ಕ್ರೈಸ್ತ ರನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸ ಬೇಕೆಂದು ನಿವೃತ್ತ ನ್ಯಾಯಮೂರ್ತಿ ರಂಗ ನಾಥ ಮಿಶ್ರಾ ಆಯೋಗ ವರದಿ ನೀಡಿದೆ. 2007ರಲ್ಲೇ ಆಯೋಗ ವರದಿ ನೀಡಿ ದ್ದರೂ ಸರ್ಕಾರ ವರದಿ ಅನುಷ್ಠಾನಕ್ಕೆ ಮುಂದಾಗಿಲ್ಲ’ ಎಂದು ಸಂಘದ ಸಂಚಾಲಕ ದಾಸ್‌ ಚಿನ್ನಸವರಿ ಒತ್ತಾಯಿಸಿದ್ದಾರೆ.‘ಬೇಡಿಕೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದು­ಕೊಳ್ಳಬೇಕು. ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ನಡೆಸಿ, ರಂಗ ನಾಥ ಮಿಶ್ರಾ ವರದಿಯನ್ನು ಅನು ಷ್ಠಾನಕ್ಕೆ ತರಬೇಕು’ ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)