ಕ್ಲಸ್ಟರ್ ಮಟ್ಟದ ಟಿ.ಎಲ್.ಎಂ. ಮೇಳ

7

ಕ್ಲಸ್ಟರ್ ಮಟ್ಟದ ಟಿ.ಎಲ್.ಎಂ. ಮೇಳ

Published:
Updated:

ಆನೇಕಲ್: ಗುಣಮಟ್ಟದ ಶಿಕ್ಷಣ ಸರ್ಕಾರದ ಗುರಿಯಾಗಿದ್ದು, ಎಲ್ಲ ಮಕ್ಕಳಿಗೂ ಗುಣಮಟ್ಟದ ಹಾಗೂ ಪರಿಣಾಮಕಾರಿ ಶಿಕ್ಷಣ ನೀಡಲು ಬೋದನೋಪಕರಣಗಳ ಅವಶ್ಯಕತೆಯಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಜಿ.ಆರ್.ಬಸವರಾಜ ನುಡಿದರು.ಅವರು ಪಟ್ಟಣದ ಹೊಸ ಮಾಧ್ಯಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಟಿಎಲ್‌ಎಂ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದರು.ತಯಾರು ಮಾಡಿಕೊಳ್ಳಲು ಪ್ರತಿವರ್ಷ ಶಿಕ್ಷಕರಿಗೆ ತಲಾ 500 ರೂ. ಶಿಕ್ಷಕರ ಅನುದಾನ ನೀಡಲಾಗುತ್ತದೆ. ಈ ಅನುದಾನವನ್ನು ಸದುಪಯೋಗ ಮಾಡಿಕೊಂಡು ಮಕ್ಕಳಿಗೆ ಪರಿಕಲ್ಪನೆಗಳನ್ನು ಸರಳವಾಗಿ ಮೂಡಿಸಲು ಅವಶ್ಯಕ ಟಿಎಲ್‌ಎಂಗಳನ್ನು ತಯಾರಿಸಿಕೊಳ್ಳಬೇಕು ಎಂದರು.ಟಿಎಲ್‌ಎಂ ಮೇಳದಿಂದ ಶಿಕ್ಷಕರಲ್ಲಿ ಅನುಭವಗಳ ಹಂಚಿಕೆಗೆ ಅನುಕೂಲವಾಗುತ್ತದೆ ಹಾಗೂ ನವನವೀನ ಟಿಎಲ್‌ಎಂಗಳ ಪರಿಚಯವಾಗುತ್ತದೆ ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ರಾಮಮೂರ್ತಿ, ಸಂಘದ ಪದಾಧಿಕಾರಿಗಳಾದ ಉಮೇಶ್, ಟಿ.ಪಿ.ನಾಗರತ್ನಮ್ಮ, ಸುಗುಣಮ್ಮ, ನಾರಾಯಣಸ್ವಾಮಿ, ಸಿಆರ್‌ಪಿ ಮಂಜುನಾಥ್ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry