ಕ್ವಟ್ರೋಚಿ ಪ್ರಕರಣ: ತೀರ್ಪು ಮಾ. 4ಕ್ಕೆ

7

ಕ್ವಟ್ರೋಚಿ ಪ್ರಕರಣ: ತೀರ್ಪು ಮಾ. 4ಕ್ಕೆ

Published:
Updated:

ನವದೆಹಲಿ (ಪಿಟಿಐ): ಬೊಫೋರ್ಸ್ ಫಿರಂಗಿ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಇಟಲಿಯ ಉದ್ಯಮಿ ಒಟ್ಟಾವಿಯೊ ಕ್ವಟ್ರೋಚಿ ಮೇಲಿನ ಆರೋಪದ ಬಗ್ಗೆ ವಿಚಾರಣೆ ನಡೆಸಿದ ದೆಹಲಿ ಮೆಟ್ರೊಪಾಲಿಟನ್ ನ್ಯಾಯಾಲಯ ತೀರ್ಪು ಪ್ರಕಟಣೆಯನ್ನು ಮಾರ್ಚ್ 4 ಕ್ಕೆ ಮುಂದೂಡಿದೆ.ಕ್ವಟ್ರೋಚಿ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯಲು ತೀರ್ಮಾನಿಸಿದ್ದ ಸಿಬಿಐ ಅಧಿಕಾರಿಗಳು, ಪ್ರಕರಣದ  ವಿಚಾರಣೆ ಕೈಬಿಡುವಂತೆ ನ್ಯಾಯಾಯಲಕ್ಕೆ ಅರ್ಜಿ ಸಲ್ಲಿಸಿದ್ದರು.ಈ ಹಿನ್ನೆಲೆಯಲ್ಲಿ  ಚೀಫ್ ಮೆಟ್ರೊಪಾಲಿಟನ್ ನ್ಯಾಯಾಧೀಶ  ವಿನೋದ್ ಯಾದವ್ ತೀರ್ಪನ್ನು ಕಾಯ್ದಿರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry