ಶುಕ್ರವಾರ, ಮೇ 14, 2021
25 °C

ಕ್ವಾರಿಯಲ್ಲಿ ಸ್ಫೋಟ: ನಾಲ್ವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುರುಗೋಡು: ಕಲ್ಲಿನ ಕ್ವಾರಿಯೊಂದರಲ್ಲಿ ಅಕ್ರಮವಾಗಿ ಇರಿಸಿದ್ದ ಜಿಲೆಟಿನ್ ಕಡ್ಡಿಗಳು ಆಕಸ್ಮಿಕವಾಗಿ ಸ್ಫೋಟಗೊಂಡು ನಾಲ್ವರು ಕಾರ್ಮಿಕರು ಮೃತಪಟ್ಟ ಘಟನೆ ಸಮೀಪದ ಮುಷ್ಟಘಟ್ಟ ಗ್ರಾಮದ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಗಾದಿಗನೂರು ಗ್ರಾಮದ ಮಹಾದೇವ (25), ಬಾದನಹಟ್ಟಿ ಗ್ರಾಮದ ದೊಡ್ಡಬಸವ (30), ಕರಿಬಸವ (30) ಸ್ಥಳದಲ್ಲೇ ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡಿದ್ದ ಕುರುಗೋಡು ಗ್ರಾಮದ ನಾಗರಾಜ (25) ಬಳ್ಳಾರಿಯ ವಿಮ್ಸ ಆಸ್ಪತ್ರೆಯಲ್ಲಿ ಸಂಜೆ ಮೃತಪಟ್ಟ.

ಆಂಧ್ರಪ್ರದೇಶ ಮೂಲದ ಜಗನ್ಮೋಹನ ರೆಡ್ಡಿ ಹಾಗೂ ಜಗದೀಶ ಎಂಬುವವರ ಪಾಲುದಾರಿಕೆಯ, `ಭಾಗ್ಯೋದಯ~ ಸ್ಟೋನ್ ಕ್ರಷರ್‌ನಲ್ಲೇ ಈ ದುರ್ಘಟನೆ ಸಂಭವಿಸಿದೆ. ಭಾರಿ ಪ್ರಮಾಣದಲ್ಲಿ ಜಿಲೆಟಿನ್ ಕಡ್ಡಿಗಳನ್ನು ಗುಡಿಸಲೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು.

60ರಿಂದ 70 ಜನ ಕಾರ್ಮಿಕರು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದು, ಇವರಲ್ಲಿ ಹೆಚ್ಚಿನವರು ಮಧ್ಯಾಹ್ನ ಊಟಕ್ಕೆ ತೆರಳಿದ್ದ ವೇಳೆ  ಸ್ಫೋಟ ಸಂಭವಿಸಿದ್ದರಿಂದ ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕುರುಗೋಡು ಸುತ್ತಮುತ್ತ ಒಟ್ಟು 11 ಸ್ಟೋನ್ ಕ್ರಷರ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಲ್ಲಿ ಕೇವಲ ಎರಡು ಸ್ಟೋನ್ ಕ್ರಷರ್‌ಗಳಿಗೆ ಮಾತ್ರ ಸ್ಫೋಟಕ ಬಳಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿದೆ. ಉಳಿದ ಘಟಕಗಳನ್ನು ಪರಿಶೀಲಿಸಿ, ಅನುಮತಿ ಇಲ್ಲದಿದ್ದರೆ ಸ್ಫೋಟ ನಡೆಸದಂತೆ ನಿರ್ಬಂಧ ವಿಧಿಸಲಾಗುವುದು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ವಿಶೇಷ ತಹಶೀಲ್ದಾರ್ ದಾಸಪ್ಪ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.