ಭಾನುವಾರ, ನವೆಂಬರ್ 17, 2019
24 °C

ಕ್ವಾರ್ಟರ್‌ಫೈನಲ್‌ಗೆ ಅಲೋಕ್

Published:
Updated:

ಇಂದೋರ್ (ಪಿಟಿಐ): ಭಾರತದ ಅಲೋಕ್ ಕುಮಾರ್ 12ನೇ ಏಷ್ಯನ್ ಇಂಗ್ಲಿಷ್ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್  ಹಂತ ಪ್ರವೇಶಿಸಿದರು.ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಅವರು 4-1 (62-102, 101-37, 101-41, 102-09, 100-54)ರಿಂದ ಭಾರತದ ಧ್ವಜ್ ಹರಿಯಾ ಅವರನ್ನು ಸೋಲಿಸಿದರು.ಮತ್ತೊಂದು ಪಂದ್ಯದಲ್ಲಿ ಭಾರತದ ಕೆ.ವೆಂಕಟೇಶಂ 2-4ರಿಂದ ಮ್ಯಾನ್ಮಾರ್‌ನ ಆಂಗ್ ಹೇ ವಿರುದ್ಧ ಸೋಲು ಅನುಭವಿಸಿದರು. 

21 ವರ್ಷದೊಳಗಿನವರ ಏಷ್ಯನ್ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ, ಭಾರತದ ನಿತೇಶ್ ಮದನ್ ಚೀನಾದ ಝವ್ ವಿರುದ್ಧ ಸೋಲುಂಡರು.

ಪ್ರತಿಕ್ರಿಯಿಸಿ (+)