ಕ್ವಾರ್ಟರ್‌ ಫೈನಲ್‌ಗೆ ಆದಿತ್ಯ

7
ಎಐಬಿಎ ಜೂನಿಯರ್‌ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌

ಕ್ವಾರ್ಟರ್‌ ಫೈನಲ್‌ಗೆ ಆದಿತ್ಯ

Published:
Updated:

ನವದೆಹಲಿ (ಪಿಟಿಐ): ಭಾರತದ ಆದಿತ್ಯ ಮಾನ್‌ (66 ಕೆ.ಜಿ. ವಿಭಾಗ) ಮತ್ತು ಆಶೀಶ್‌ (63 ಕೆ.ಜಿ) ಉಕ್ರೇನ್‌ನ ಕೀವ್‌ನಲ್ಲಿ ನಡೆಯುತ್ತಿರುವ ಎಐಬಿಎ ಜೂನಿಯರ್‌ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.ಆದರೆ ಭಾರತದ ಇನ್ನೊಬ್ಬ ಬಾಕ್ಸರ್‌ ವಿಷ್ಣು ದಯಾನಂದ್‌ ಚಾಯಲ್‌ (57 ಕೆ.ಜಿ. ವಿಭಾಗ) ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಅನುಭವಿಸಿದರು.

ಆದಿತ್ಯ ಮೊದಲ ಸುತ್ತಿನಲ್ಲಿ ಹಂಗ­ರಿಯ ಲಾಜ್ಲೊ ಕೊಜಾಕ್‌ ಅವರನ್ನು ಮಣಿಸಿದರೆ, ಪ್ರೀ ಕ್ವಾರ್ಟರ್‌ ಫೈನಲ್‌­ನಲ್ಲಿ ಅಮೆರಿಕದ ಜೇವಿಯರ್‌ ಎಸ್ಟ್ರಾಡಾ ವಿರುದ್ಧ ಗೆಲುವು ಪಡೆದರು.

ಎಂಟರ­ಘಟ್ಟದ ಹೋರಾಟದಲ್ಲಿ ಅವರು ಬ್ರೆಜಿ­ಲ್‌ನ ಕ್ಯಾಸಿಯೊ ಒಲಿವೆರಾ ಸಂಟೋಸ್‌ ವಿರುದ್ಧ ಪೈಪೋಟಿ ನಡೆಸುವರು. ಲೈಟ್‌ ವೆಲ್ಟರ್‌ವೇಟ್‌ ವಿಭಾಗದಲ್ಲಿ ಆಶೀಶ್‌ ಮೊದಲ ಹಣಾಹಣಿಯಲ್ಲಿ ಆಸ್ಟ್ರಿಯದ ಮಾರ್ಸೆಲ್‌ ರಂಪ್ಲೆರ್‌ ಅವರನ್ನು ಮಣಿಸಿದರೆ, 16ರ ಘಟ್ಟದಲ್ಲಿ ಲಾಟ್ವಿಯದ ಜೆಗರ್ಸ್‌ ಅರ್ಜೊಮೊವ್ಸ್‌ ವಿರುದ್ಧ ಗೆದ್ದರು.ಫೆದರ್‌ವೇಟ್‌ ವಿಭಾಗದಲ್ಲಿ ಕಣಕ್ಕಿ­ಳಿದ ವಿಷ್ಣು ಇಂಗ್ಲೆಂಡ್‌ನ ಡಾಲ್ಟನ್ ಸ್ಮಿತ್‌ ಎದುರು ಪರಾಭವಗೊಂಡರು. ವಿಷ್ಣು ಪ್ರಸಕ್ತ ವರ್ಷ ನಡೆದ ಏಷ್ಯನ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿದ್ದರು. ಲೈಟ್‌ವೇಟ್‌ ವಿಭಾಗದಲ್ಲಿ ಪ್ರಯಾಗ್‌ ಚೌಹಾಣ್‌ ಮೊದಲ ಸುತ್ತಿನಲ್ಲಿ ಉಜ್ಬೆಕಿಸ್ತಾನದ ರಶಿದೋವ್‌ ಕೈಯಲ್ಲಿ ಸೋಲು ಅನುಭವಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry