ಮಂಗಳವಾರ, ಜೂನ್ 15, 2021
27 °C
ಟೆನಿಸ್‌: ನಾಲ್ಕನೇ ಸುತ್ತಿಗೆ ಜೊಕೊವಿಚ್‌

ಕ್ವಾರ್ಟರ್‌ ಫೈನಲ್‌ಗೆ ಲೀ ನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌ (ರಾಯಿಟರ್ಸ್‌): ಚೀನಾದ ಲೀ ನಾ ಇಲ್ಲಿ ನಡೆಯುತ್ತಿ ರುವ ಬಿಎನ್‌ಪಿ ಪಾರಿಬಾಸ್‌ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಅಗ್ರ ಶ್ರೇಯಾಂಕದ ಲೀ ನಾ 6–1, 6–4ರಲ್ಲಿ ಕೆನಡಾದ ಅಲೆಕ್ಸಾಂಡ್ರಾ ವಾಜ್ನಿಯಾಕ್‌ ಎದುರು ಗೆಲುವು ಸಾಧಿಸಿದರು. ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ಲೀ ಎರಡೂ ಸೆಟ್‌ ಗಳಲ್ಲಿ ಸೊಗಸಾದ ಆಟದ ಮೂಲಕ ಎದುರಾಳಿ ಮೇಲೆ ಒತ್ತಡ ಹೇರಿದರು.\

ಅವರು ಎಂಟರ ಘಟ್ಟದ ಹೋರಾ ಟದಲ್ಲಿ ಸ್ಲೊವಾಕಿಯಾದ ಡೊಮಿನಿಕಾ ಸಿಬುಲ್ಕೊವಾ ಎದುರು ಪೈಪೋಟಿ ನಡೆಸಲಿದ್ದಾರೆ. ಈ ಆಟಗಾರ್ತಿ ಎದುರು ಲೀ ನಾ ಆಸ್ಟ್ರೇಲಿಯಾ ಓಪನ್‌ ಫೈನಲ್‌ನಲ್ಲಿ ಗೆದ್ದಿದ್ದರು. ಸಿಬುಲ್ಕೊವಾ 6–3, 6–2ರಲ್ಲಿ ಪೆಟ್ರಾ ಕ್ವಿಟೋವಾ ಎದುರು ಗೆದ್ದು ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.

ಸರ್ಬಿಯಾದ ಜೆಲೆನಾ ಜಾಂಕೋವಿಕ್‌ 6–3, 6–1ರಲ್ಲಿ ಡೆನ್ಮಾರ್ಕ್‌ನ ಕರೊಲಿನಾ ವಾಜ್ನಿಯಾಕಿ ಎದುರು ಗೆದ್ದು ಎಂಟರ ಘಟ್ಟ ಪ್ರವೇಶಿ  ಸಿದರು. ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಪೋಲೆಂಡ್‌ನ ಅಗ್ನಿಸ್ಕಾ ರಾಡ್ವಾಂಸ್ಕಾ ಎದುರು ಆಡಲಿದ್ದಾರೆ. ರಾಡ್ವಾಂಸ್ಕಾ 7–5, 6–3ರಲ್ಲಿ ಫ್ರಾನ್ಸ್‌ನ ಅಲಿಜ್‌ ಕಾರ್ನೆಟ್‌ ಎದುರು ಗೆಲುವು ಸಾಧಿಸಿದರು.ಹಾಲಿ ಚಾಂಪಿಯನ್‌ ರಷ್ಯಾದ ಮರಿಯಾ ಶರ್ಪೋವಾಗೆ ಆಘಾತ ನೀಡಿದ್ದ ಇಟಲಿಯ ಕಮಿಲಾ ಜಿಯೊರ್ಜಿ 2–6, 1–6ರಲ್ಲಿ ತಮ್ಮ ದೇಶದವರೇ ಆದ ಫ್ಲೆವಿಯಾ ಪೆನೆಟಾ ಎದುರು ಸೋಲು ಕಂಡರು. ರುಮೇನಿಯಾದ ಸಿಮೊನಾ ಹಾಲೆಪ್‌ 6–2, 1–6, 6–4ರಲ್ಲಿ ಕೆನಡಾದ ಯುಜೆನಿ ಬಚರ್ಡ್‌ ಎದುರು ಜಯ ಗಳಿಸಿದರು. ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಕ್ಯಾಸಿ ಡೆಲಕ್ವಾ ಎದುರು ಆಡಲಿದ್ದಾರೆ.ಪುರುಷರ ಸಿಂಗಲ್ಸ್‌ನಲ್ಲಿ ಸರ್ಬಿ ಯಾದ ನೊವಾಕ್‌ ಜೊಕೊವಿಚ್‌ ನಾಲ್ಕನೇ ಸುತ್ತು ತಲುಪಿದ್ದಾರೆ. ಅವರು 6–1, 3–6, 6–1ರಲ್ಲಿ ಕೊಲಂಬಿ ಯಾದ ಅಲೆಜಾಂಡ್ರೊ ಗೊನ್ಜಲೆಜ್‌ ಎದುರು ಗೆಲುವು ಸಾಧಿಸಿದರು. ಜೊಕೊವಿಚ್‌ ತಮ್ಮ ಮುಂದಿನ ಪಂದ್ಯದಲ್ಲಿ ಕ್ರೊವೇಷ್ಯಾದ ಮರಿನ್ ಸಿಲಿಕ್‌ ಎದುರು ಪೈಪೋಟಿ ನಡೆಸ­ಲಿದ್ದಾರೆ. ಸಿಲಿಕ್‌ 6–4,        6–3 ರಲ್ಲಿ ಸ್ಪೇನ್‌ನ ಟಾಮಿ ರಾಬ್ರೆಡೊ ಎದುರು ಜಯ ಗಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.