ಕ್ವಾರ್ಟರ್ ಫೈನಲ್‌ಗೆ ಅಂಕಿತಾ ರೈನಾ

7

ಕ್ವಾರ್ಟರ್ ಫೈನಲ್‌ಗೆ ಅಂಕಿತಾ ರೈನಾ

Published:
Updated:

ಬೀದರ್: ಭಾರತದ ಅಂಕಿತಾ ರೈನಾ ಅವರು ಇಲ್ಲಿ ನಡೆಯುತ್ತಿರುವ ಐಟಿಎಫ್ ಬೀದರ್ ಓಪನ್ ಟೆನಿಸ್ ಟೂರ್ನಿಯ  ಬುಧವಾರದ ಪಂದ್ಯದಲ್ಲಿ ಭಾರತದವರೇ ಆದ ಸ್ಫೂರ್ತಿ ಶಿವಲಿಂಗಯ್ಯ ವಿರುದ್ಧ 6-1, 2-6, 6-2ರಿಂದ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.ಇನ್ನೊಂದು ಪಂದ್ಯದಲ್ಲಿ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ ಪ್ರಾರ್ಥನಾ ತೋಂಬ್ರೆ ಅವರು ಉತ್ತಮ ಆಟ ಪ್ರದರ್ಶಿಸಿದ್ದು, ತೈಪೆಯ  ಚಿಯಾ ಸಿನ್ ವಿರುದ್ಧ ಸುಲಭ ಜಯಗಳಿಸಿದರು. ಪಂದ್ಯದ ಲ್ಲಿ ಮೇಲುಗೈ ಸಾಧಿಸಿದ್ದ ಪ್ರಾರ್ಥನಾ ಮೊದಲ ಸೆಟ್ ಅನ್ನು 6-3 ರಿಂದ ಗೆದ್ದರೆ, ಎರಡನೇ ಸೆಟ್ ಅನ್ನು ನಿರಾಯಾಸವಾಗಿ 6-1ರಿಂದ ಗೆದ್ದುಕೊಂಡರು. ಇನ್ನೊಂದು ಪಂದ್ಯದಲ್ಲಿ ಕೊರಿಯಾದ ಜು ಯುನ್ ಕಿಮ್ 6-3, 2-6, 6-3 ರಿಂದ ಚೀನಾದ ಜೀ ಯಾಂಗ್ ವಿರುದ್ಧ ಗೆದ್ದರು. ಈಚೆಗೆ ಗುಲ್ಬರ್ಗ ಮುಕ್ತ ಐಟಿಎಫ್‌ನ ಅಂತಿಮ ಸುತ್ತು ಪ್ರವೇಶಿಸಿದ್ದ ಜೀ ಯಾಂಗ್ ಇಲ್ಲಿ ಆಘಾತ ಅನುಭವಿಸಿದರು.ಬುಧವಾರದ ಇತರ ಪಂದ್ಯಗಳಲ್ಲಿ  ತೈಪೆಯ ವರುಣ್ಯಾ ವಾಂಗ್‌ಟೀನ್ ಚಾಯ್ ಅವರು 6-3, 6-4ರಿಂದ ಉಕ್ರೇನ್‌ನ ಅಲೆಕ್ಸಾಂಡ್ರಾ ಕೊರಾಶಿವಿಲಿ ವಿರುದ್ಧ ಗೆದ್ದರೆ,  ತೈಪೆಯ ನಂಗ್‌ನದ್ದಾ ವಾನ್ನಾಸುಕ್ ಅವರು ಭಾರತದ ಅನುಷ್ಕಾ ಭಾರ್ಗವ ವಿರುದ್ಧ 6-1, 6-1 ರಿಂದ ಗೆದ್ದರು. ಜಪಾನ್‌ನ ಯುಮಿ ಮಿಯಾಜಾಕಿ ಅವರಿಗೆ ಹಾಂಗ್‌ಕಾಂಗ್‌ನ ಹೂ ಚಿಂಗ್ ವೂ ವಿರುದ್ಧ 6-0, 4-6, 6-2 ಗೆಲ್ಲಲು ಸಾಕಷ್ಟು ಬೆವರು ಹರಿಸಬೇಕಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry