ಮಂಗಳವಾರ, ಮೇ 11, 2021
24 °C

ಕ್ವಾರ್ಟರ್ ಫೈನಲ್‌ಗೆ ಪಂಕಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋವಾ (ಪಿಟಿಐ): ನಾಲ್ಕು ಬಾರಿಯ ಚಾಂಪಿಯನ್ ಪಂಕಜ್ ಅಡ್ವಾಣಿ ಇಲ್ಲಿ ನಡೆಯುತ್ತಿರುವ 11ನೇ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಪಂಕಜ್ 101-86, 100-31, 100-85, 100-12 ರಲ್ಲಿ ಥಾಯ್ಲೆಂಡ್‌ನ ಸೂರ್ಯ ಸುವನ್ನಸಿನ್ಹ ವಿರುದ್ಧ ಸುಲಭ ಗೆಲುವು ಪಡೆದರು. ಬೆಂಗಳೂರಿನ ಪಂಕಜ್ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲೂ ನೇರ ಫ್ರೇಮ್‌ಗಳ ಜಯ ಸಾಧಿಸಿದ್ದರು.ಕಳೆದ ಬಾರಿಯ ಚಾಂಪಿಯನ್ ಅಲೋಕ್ ಕುಮಾರ್ ಮತ್ತು ದೇವೇಂದ್ರ ಜೋಶಿ ಅವರೂ ಎಂಟರಘಟ್ಟದಲ್ಲಿ ಸ್ಥಾನ ಖಚಿತಪಡಿಸಿಕೊಂಡರು. ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಅಲೋಕ್ 101-85, 72-100, 101-2, 101-0, 101-89 ಫ್ರೇಮ್‌ಗಳಿಂದ ವಿಯೆಟ್ನಾಂನ ನುಯೆನ್ ತಾನ್ ಬಿನ್ ಅವರನ್ನು ಮಣಿಸಿದರು.

 

ದೇವೇಂದ್ರ ಜೋಶಿ 101-45, 100-0, 102-31, 101-2 ರಲ್ಲಿ ಶ್ರೀಲಂಕಾದ ಎ. ಜಯರತ್ನೆ ವಿರುದ್ಧ ಜಯ ಗಳಿಸಿದರು. ಇತರ ಪಂದ್ಯಗಳಲ್ಲಿ ಥಾಯ್ಲೆಂಡ್‌ನ ಪ್ರಪುತ್ ಚೈತನಸುಕಾನ್ 100-0, 100-8, 100-9, 100-5 ರಲ್ಲಿ ಇರಾನ್‌ನ ಸಸಾನ್ ಲಷ್ಕರಿ ಎದುರೂ ಗೆದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.