ಬುಧವಾರ, ನವೆಂಬರ್ 13, 2019
23 °C

ಕ್ವಾರ್ಟರ್ ಫೈನಲ್‌ಗೆ ಪೇಸ್-ಮೆಲ್ಜರ್

Published:
Updated:

ಮಾಂಟೆ ಕಾರ್ಲೋ (ಪಿಟಿಐ): ಭಾರತದ ಲಿಯಾಂಡರ್ ಪೇಸ್ ಮತ್ತು ಆಸ್ಟ್ರಿಯಾದ ಜರ್ಗನ್ ಮೆಲ್ಜರ್ `ಮಾಂಟೆ ಕಾರ್ಲೋ ಮಾಸ್ಟರ್ಸ್ ಟೆನಿಸ್ ಟೂರ್ನಿ'ಯ ಪುರುಷರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.ಪೇಸ್-ಮೆಲ್ಜರ್ ಜೋಡಿ 6-2, 6-3ರಿಂದ ಭಾರತದ ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಅವರನ್ನು ಸೋಲಿಸಿತು. ಪೇಸ್-ಮೆಲ್ಜರ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕದ ಬಾಬ್ ಮತ್ತು ಮೈಕ್ ಬ್ರಯಾನ್ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಪ್ರತಿಕ್ರಿಯಿಸಿ (+)