ಗುರುವಾರ , ಫೆಬ್ರವರಿ 2, 2023
27 °C

ಕ್ವಾರ್ಟರ್ ಫೈನಲ್‌ಗೆ ಫೆಡರರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ವಾರ್ಟರ್ ಫೈನಲ್‌ಗೆ ಫೆಡರರ್

ಮೆಲ್ಬರ್ನ್ (ಡಿಪಿಎ): ಸ್ವಿಟ್ಜರ್‌ಲೆಂಡ್‌ನ ಎರಡನೇ ಶ್ರೇಯಾಂಕಿತ ಆಟಗಾರ ರೋಜರ್ ಫೆಡರರ್ ಅವರು ಇಲ್ಲಿ ನಡೆಯುತ್ತಿರುವ ವರ್ಷದ ಮೊದಲ ಗ್ರ್ಯಾಂಡ್‌ಸ್ಲಾಮ್ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.ಭಾನುವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫೆಡರರ್ 6-3, 3-6, 6-3, 6-2ರಲ್ಲಿ ಸ್ಪೇನ್‌ನ ಟಾಮಿ ರಾಬ್ರೆಡೊ ವಿರುದ್ಧ ಸುಲಭ ಗೆಲುವು ಪಡೆದರು. ಮೊದಲ ಸೆಟ್‌ನಲ್ಲಿ ಸುಲಭ ಗೆಲುವು ಪಡೆದ ಫೆಡರರ್,ಎರಡನೇ ಸೆಟ್‌ನಲ್ಲಿ ಸೋಲು ಅನುಭವಿಸಿದರು. ಆದರೆ ಮುಂದಿನ ಎರಡು ಸೆಟ್‌ಗಳಲ್ಲಿ ಲಯ ಕಂಡುಕೊಂಡು ಗೆಲುವಿನ ನಗು ಬೀರಿದರು.ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಸರ್ಬಿಯಾದ ನೊವಾಕ್ ಜೊಕೋವಿಕ್ 6-3, 6-4, 6-0ರಲ್ಲಿ ಸ್ಪೇನ್‌ನ ನಿಕೊಲಸ್ ಅಲ್ಮಾಗ್ರೊ ಮೇಲೂ, ಸ್ವಿಟ್ಜರ್‌ಲೆಂಡ್‌ನ ಸ್ಟ್ಯಾನಿ ಸ್ಲಿಸ್ ವಾವ್ರಿಂಕಾ 6-3, 6-4, 6-4ರಲ್ಲಿ ಅಮೆರಿಕದ ಆ್ಯಂಡಿ ರಾಡಿಕ್ ವಿರು ದ್ಧವೂ ಗೆಲುವು ಪಡೆದರು.ಶರ್ಪೋವಾಗೆ ನಿರಾಸೆ: ರಷ್ಯಾದ ಮರಿಯಾ ಶರ್ಪೋವಾ ಮಹಿಳೆಯರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ 2-6, 3-6ರಲ್ಲಿ ಜರ್ಮ ನಿಯ ಆ್ಯಂಡ್ರೋ ಪೆಟ್ಕೋವಿಕ್ ಎದುರು ಸೋಲು ಅನುಭವಿಸಿದರು.ಇದೇ ವಿಭಾಗದ ಇತರ ಪಂದ್ಯದಲ್ಲಿ ಡೆನ್ಮಾರ್ಕ್‌ನ ಆಗ್ರ ಶ್ರೇಯಾಂಕದ ಆಟಗಾರ್ತಿ ಕ್ಯಾರೊಲಿನ್ ವೊಜ್‌ನಿಯಾಕಿ 6-3, 6-4ರಲ್ಲಿ ಅನಸ್ತಾಸಿಜಾ ಸೆವೊಸ್ತೋವಾ ಮೇಲೆ ಗೆಲುವು ಪಡೆದರು.ಅಗ್ರ ಶ್ರೇಯಾಂಕದ ಜೋಡಿಗೆ ಜಯ: ಅಮೆರಿಕದ ಅಗ್ರ ಶ್ರೇಯಾಂಕದ ಬಾಬ್ ಮತ್ತು ಮೈಕ್ ಬ್ರಯನ್ ಜೋಡಿ ಪುರುಷರ ಡಬಲ್ಸ್ ವಿಭಾಗ ದಲ್ಲಿ ನಾಲ್ಕನೇ ಸುತ್ತಿಗೆ ಪ್ರವೇಶ ಪಡೆಯಿತು. ಈ ಜೋಡಿ ಮೂರನೇ ಸುತ್ತಿನ ಪಂದ್ಯದಲ್ಲಿ 7-5, 6-2ರಲ್ಲಿ ಜರ್ಮನಿಯ ಬೆಂಜಮಿನ್ ಬೆಕರ್ ಹಾಗೂ ಮೈಕಲ್ ಕೋಲ್‌ಮನ್ ಜೋಡಿಯನ್ನು ಮಣಿಸಿತು.ಬೋಪಣ್ಣ-ಜಿ ಯಾನ್‌ಗೆ ಸೋಲು: ಭಾರತದ ರೋಹನ್ ಬೋಪಣ್ಣ ಹಾಗೂ ಚೀನಾದ ಜಿ ಯಾನ್ ಜೋಡಿ ಮಿಶ್ರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲು ಅನುಭವಿಸಿತು.ಈ ಜೋಡಿ 6-7, 1-6ರಲ್ಲಿ ಮೂರನೇ ಶ್ರೇಯಾಂ ಕಿತ ರಷ್ಯಾದ ಮರಿಯಾ ಕಿರಿಲೆಂಕೊ ಹಾಗೂ ಸರ್ಬಿಯಾದ ನೆನಾದ್ ಜಿಮೊಂಜಿಕ್ ಎದುರು ಸೋಲು ಕಂಡಿತು.ಜೂನಿಯರ್ ಬಾಲಕಿಯರ ವಿಭಾಗದ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ರಿಷಿಕಾ ಸುಂಕಾರ ಅವರು 5-7, 4-6ರಲ್ಲಿ ಜಪಾನ್‌ನ ಇಮಾಯಿ ಮುಟುಗೋಚಿ ವಿರುದ್ಧ ಸೋತರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.