ಕ್ವಾರ್ಟರ್ ಫೈನಲ್‌ಗೆ ಮನುದೇವ್, ಭಾಸ್ಕರ್

7

ಕ್ವಾರ್ಟರ್ ಫೈನಲ್‌ಗೆ ಮನುದೇವ್, ಭಾಸ್ಕರ್

Published:
Updated:

ಬೆಂಗಳೂರು: ಕರ್ನಾಟಕದ ಐಎಚ್ ಮನುದೇವ್ ಮತ್ತು ಬಿ. ಭಾಸ್ಕರ್ ಇಲ್ಲಿ ನಡೆಯುತ್ತಿರುವ ಇಂಡಿಯನ್ ಓಪನ್ ಸ್ನೂಕರ್ ಅರ್ಹತಾ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.ಕೆಎಸ್‌ಬಿಎ ಹಾಲ್‌ನಲ್ಲಿ ಸೋಮವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಮನುದೇವ್ 73-40, 73-39, 48-4, 53-13 ರಲ್ಲಿ ಎಂ. ಪ್ರಭಾಕರ್ ವಿರುದ್ಧ ಗೆಲುವು ಪಡೆದರು. ಭಾಸ್ಕರ್ 63-27, 62-20, 69-10, 48-53, 70-45 ರಲ್ಲಿ ಎಂ. ರೋಹನ್ ಅವರನ್ನು ಮಣಿಸಿದರು.ಕಮಲ್ ಚಾವ್ಲಾ 76-22, 66-48, 56-22, 60-23 ರಲ್ಲಿ ಆಂಧ್ರ ಪ್ರದೇಶದ ಜಿ. ಶ್ರೀಧರ್ ಅವರನ್ನು ಮಣಿಸಿದರೆ, ಸೌರವ್ ಕೊಠಾರಿ 70-08, 46-68, 61-31, 54-62, 85-09, 80-40 ರಲ್ಲಿ ಅರವಿಂದ್ ಸವೂರ್ ವಿರುದ್ಧ ಗೆದ್ದರು.ಹಿರಿಯ ಆಟಗಾರ ಸವೂರ್ ಎರಡನೇ ಸುತ್ತಿನ ಪಂದ್ಯದಲ್ಲಿ  71-14 71-70 39-59 31-91 67-28 42-57 67-33 ರಲ್ಲಿ ಸುಫಿಯಾನ್ ಅಹ್ಮದ್ ಅವರನ್ನು ಮಣಿಸಿದ್ದರು. ಆದರೆ ಸೌರವ್ ವಿರುದ್ಧ ಅವರಿಗೆ ಗೆಲುವು ಒಲಿಯಲಿಲ್ಲ.ಇತರ ಪಂದ್ಯಗಳಲ್ಲಿ ರಫತ್ ಹಬೀಬಿ  28-61, 65-20, 57-17, 57-36, 58-33 ರಲ್ಲಿ ಶೀತಲ್ ಕುಮಾರ್ ಎದುರೂ, ಪ್ರೇಮ್ ಕುಮಾರ್ 73-38, 59-41, 75-30, 58-35 ಫ್ರೇಮ್‌ಗಳಿಂದ ಎಲ್. ನಾಗರಾಜ್ ಮೇಲೂ,  ಜಯ ಸಾಧಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry