ಕ್ವಾರ್ಟರ್ ಫೈನಲ್‌ಗೆ ಶಿವ ಥಾಪಾ

ಸೋಮವಾರ, ಜೂಲೈ 22, 2019
24 °C
ಏಷ್ಯನ್ ಬಾಕ್ಸಿಂಗ್

ಕ್ವಾರ್ಟರ್ ಫೈನಲ್‌ಗೆ ಶಿವ ಥಾಪಾ

Published:
Updated:

ನವದೆಹಲಿ (ಪಿಟಿಐ): ಬಾಂಟಮ್‌ವೇಟ್ ಬಾಕ್ಸರ್ ಭಾರತದ ಶಿವ ಥಾಪಾ ಜೋರ್ಡಾನ್‌ನ ಅಮ್ಮನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಎಂಟರ ಘಟ್ಟ ಪ್ರವೇಶಿಸಿದ್ದಾರೆ.ಥಾಪಾ (56. ಕೆ.ಜಿ.) ಚೈನಿಸ್ ತೈಪೆದ ಲಿ ಲಿನ್ ಯೆನ್ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್‌ನಲ್ಲಿ   ಸ್ಥಾನ ಭದ್ರಪಡಿಸಿಕೊಂಡರು. ಶುಕ್ರವಾರದ ಪಂದ್ಯದಲ್ಲಿ `ಬೈ'    ಪಡೆದ ಭಾರತದ ಎಲ್   ದೇವೇಂದ್ರೊ ಸಿಂಗ್ (49 ಕೆ.ಜಿ.) ಅನಾಯಾಸವಾಗಿ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟರು.ಕೆಲವು ತೀಕ್ಷ್ಣ ಹೊಡೆತಗಳಿಂದ ಜಯ ದಾಖಲಿಸಿರುವ ಥಾಪಾ ಮುಂದಿನ ಸುತ್ತಿನಲ್ಲಿ ಕಜಸ್ತಾನ ರಾಷ್ಟ್ರೀಯ ಚಾಂಪಿಯನ್ ಕೈರತ್ ಯೆರಾಲಿಯೆವ್ ವಿರುದ್ಧ ಪೈಪೋಟಿ ನಡೆಸಲಿದ್ದಾರೆ. ದೇವೇಂದ್ರೊ ಉಜ್ಬೇಕಿಸ್ತಾನದ ನೊದಿರ್ಜೊನ್ ಮಿರ್ಜಾಖ್‌ಮೆಡೊವ್ ವಿರುದ್ಧ ಸೆಣಸಲಿದ್ದಾರೆ.ಭಾರತದ ಮನೋಜ್ ಕುಮಾರ್ (64 ಕೆ.ಜಿ), ಮನ್‌ದೀಪ್ ಜಾಂಗ್ರಾ (69 ಕೆ.ಜಿ.) ಹಾಗೂ  ಸುಖ್‌ದೀಪ್ ಸಿಂಗ್ (75 ಕೆ.ಜಿ.) ಗುರುವಾರವೇ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry