ಕ್ವಾರ್ಟರ್ ಫೈನಲ್‌ಗೆ ಸಿಂಧು

7
ಬ್ಯಾಡ್ಮಿಂಟನ್: ಸಯಾಲಿ ಗೋಖಲೆಗೆ ನಿರಾಸೆ

ಕ್ವಾರ್ಟರ್ ಫೈನಲ್‌ಗೆ ಸಿಂಧು

Published:
Updated:

 


ಲಖನೌ (ಪಿಟಿಐ): ಯುವ ಆಟಗಾರ್ತಿ ಪಿ.ವಿ. ಸಿಂಧು ಹಾಗೂ ಆರ್‌ಎಂವಿ ಗುರುಸಾಯಿದತ್ ಇಲ್ಲಿ ನಡೆಯುತ್ತಿರುವ ಸಯ್ಯದ್ ಮೋದಿ ಇಂಡಿಯಾ ಓಪನ್ ಗ್ರ್ಯಾನ್ ಪ್ರಿ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

 

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು 21-9, 21-9 ರಲ್ಲಿ ಆಸ್ಟ್ರೇಲಿಯದ ವಿಕ್ಟೋರಿಯಾ ನಾ ವಿರುದ್ಧ ಸುಲಭ ಗೆಲುವು ಪಡೆದರು. ಆದರೆ ರಾಷ್ಟ್ರೀಯ ಚಾಂಪಿಯನ್ ಸಯಾಲಿ ಗೋಖಲೆ ಸೋತು ಹೊರಬಿದ್ದರು. ಅವರು 15-21, 11-21 ರಲ್ಲಿ ಇಂಡೊನೇಷ್ಯದ ಅಪ್ರಿಲಾ ಯುಸ್ವಂದರಿ ಎದುರು ಪರಾಭವಗೊಂಡರು.

 

ಗುರುಸಾಯಿದತ್ ಪುರುಷರ ಸಿಂಗಲ್ಸ್ ವಿಭಾಗದ 16ರ ಘಟ್ಟದ ಪಂದ್ಯದಲ್ಲಿ 21-10, 21-16 ರಲ್ಲಿ ಮಲೇಷ್ಯದ ಮೊಹಮ್ಮದ್ ಆರಿಫ್ ಅಬ್ದುಲ್ ಲತೀಫ್ ವಿರುದ್ಧ ಅಚ್ಚರಿಯ ಜಯ ಸಾಧಿಸಿದರು. ಇಲ್ಲಿ ಏಳನೇ ಶ್ರೇಯಾಂಕ ಹೊಂದಿದ್ದ ಆಟಗಾರನನ್ನು ಮಣಿಸಲು ಗುರುಸಾಯಿದತ್ 41 ನಿಮಿಷಗಳನ್ನು ತೆಗೆದುಕೊಂಡರು.

 

ಮೂರನೇ ಶ್ರೇಯಾಂಕದ ಆಟಗಾರ ಇಂಡೊನೇಷ್ಯದ ಟಾಮಿ ಸುಗಿಯಾರ್ತೊ 12-21, 21-12, 21-16 ರಲ್ಲಿ ಭಾರತದ ಬಿ. ಸಾಯಿ ಪ್ರಣೀತ್ ಎದುರು ಪ್ರಯಾಸದ ಜಯ ಸಾಧಿಸಿದರು. 

 

ಮಿಶ್ರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದ ಪ್ರಣವ್ ಚೋಪ್ರಾ- ಸಿಕ್ಕಿ ರೆಡ್ಡಿ 9-21, 14-21 ರಲ್ಲಿ ಇಂಡೊನೇಷ್ಯದ  ಫ್ರಾನ್ ಕುರಿಯನ್‌ವಾನ್- ಶೆಂಡಿ ಪುಷ್ಪಾ ಎದುರು ಸೋಲು ಅನುಭವಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry