`ಕ್ವಾರ್ಟರ್ ಫೈನಲ್ ಪ್ರವೇಶಿಸುವ ವಿಶ್ವಾಸವಿದೆ'

7

`ಕ್ವಾರ್ಟರ್ ಫೈನಲ್ ಪ್ರವೇಶಿಸುವ ವಿಶ್ವಾಸವಿದೆ'

Published:
Updated:

ಬೆಂಗಳೂರು: `ಈ ಸಲದ ರಣಜಿಯಲ್ಲಿ ಕೆಟ್ಟ ಆರಂಭ ಪಡೆದರೂ ಈಗ ಮೊದಲ ಗೆಲುವು ಪಡೆದಿದ್ದೇವೆ. ಮುಂದಿನ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ವಿಶ್ವಾಸವಿದೆ. ಮುಂದಿನ ಪಂದ್ಯಗಳ ಗೆಲುವಿಗೆ ದೆಹಲಿ ವಿರುದ್ಧದ ಈ ಜಯ ಸ್ಫೂರ್ತಿ ತುಂಬಿದೆ' ಎಂದು ಕರ್ನಾಟಕ ತಂಡದ ನಾಯಕ ಆರ್. ವಿನಯ್ ಕುಮಾರ್ ಹೇಳಿದ್ದಾರೆ.`ಈ ಗೆಲುವಿನಲ್ಲಿ ಬೌಲರ್‌ಗಳ ಪಾತ್ರ ಮಹತ್ವದ್ದಾಗಿತ್ತು. ಉತ್ತಮ ಬೌಲಿಂಗ್ ನೆರವಿನಿಂದಲೇ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಮೇಲಕ್ಕೇರಲು ಸಾಧ್ಯವಾಯಿತು. ಈ ಪಿಚ್ ಆರಂಭದಲ್ಲಿ ಬೌಲರ್‌ಗಳಿಗೆ ನೆರವು ನೀಡಿತು. ಆದರೆ, ಭೋಜನ ವಿರಾಮದ ನಂತರ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.ಆರನೇ ವಿಕೆಟ್ ಜೊತೆಯಾಟ ಉತ್ತಮವಾಗಿ ಸಾಗಿದ್ದಾಗ ಡ್ರಾ ಆಗುವ ಆತಂಕ ಮೂಡಿತ್ತು' ಎಂದು ವಿನಯ್ ನುಡಿದರು. ವೇಗಿ ಎಚ್.ಎಸ್. ಶರತ್ ಬೌಲಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ `ದಾವಣೆಗೆರೆ ಎಕ್ಸ್‌ಪ್ರೆಸ್' `ರಣಜಿಗೆ ಪದಾರ್ಪಣೆ ಮಾಡಿದ ಟೂರ್ನಿಯಲ್ಲಿಯೇ ಶರತ್ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಉತ್ತಮ ಎತ್ತರ ಹೊಂದಿರುವುದರಿಂದ ಅವರು ಅತ್ಯುತ್ತಮ ಲೇನ್ ಹಾಗೂ ಲೆನ್ತ್ ಹಾಕುತ್ತಾರೆ ಎಂದು ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry