ಶುಕ್ರವಾರ, ಜನವರಿ 24, 2020
28 °C

ಕ್ವೀನ್ಸ್...ಚಿತ್ರಕಲಾ ಪ್ರದರ್ಶನ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ವಿಜಾಪುರದ ದ್ರಾಕ್ಷಾಯಣಿ ಇಮಾನದ, ಅನುಪಮಾ ಪಾಟೀಲ, ಗಿರಿಜಾ ಬಿರಾದಾರ ಮತ್ತು ರಾಜೇಶ್ವರಿ ಜೋಶಿ ಚಿತ್ರ ಕಲಾವಿದೆಯರು (ಕ್ವೀನ್ಸ್ ಆಫ್ ಬಿಜಾಪುರ) ಚಿತ್ರಿಸಿರುವ ಬಹುಮನಿ ಸುಲ್ತಾನರ ಆಳ್ವಿಕೆ ಕಾಲಮಾನದ ಜನಪದ ಜೀವನ ಬಿಂಬಿಸುವ ವಿವಿಧ ಪೇಂಟಿಂಗ್ಸ್ ಮೂರು ದಿನದ ಪ್ರದರ್ಶನವನ್ನು ಖ್ಯಾತ ಕಲಾವಿದ ಡಾ. ವಿ.ಜಿ. ಅಂದಾನಿ ಅವರು ಸೋಮವಾರ ಇಲ್ಲಿನ ಆರ್ಟ್ ಗ್ಯಾಲರಿಯಲ್ಲಿ ಉದ್ಘಾಟಿಸಿದರು.ನಂತರ ಮಾತನಾಡಿದ ಅಂದಾನಿ, `ಕಲೆ ಎಂಬುದು ಮನಸ್ಸಿನ ವಿಚಾರಧಾರೆ. ಈ ವಿಚಾರಧಾರೆಗಳು ಬೇರೆಬೇರೆ ಮಾಧ್ಯಮಗಳ ಮೂಲಕ ವ್ಯಕ್ತವಾಗುತ್ತವೆ. ಎಲ್ಲರಂತೆಯೆ ಕಲಾವಿದರಲ್ಲಿರುವ ಸೂಕ್ಷ್ಮ ಸಂವೇದನೆಗಳು ಚಿತ್ರಗಳ ರೂಪದಲ್ಲಿ ಹೊರಬರುತ್ತವೆ~ ಎಂದರು.ಕಲಾವಿದರಲ್ಲಿ ಮುಖ್ಯವಾಗಿ ಧೈರ್ಯವೂ ಇರಬೇಕು. ಅಧೈರ್ಯದಿಂದ, ಕಾಟಾಚಾರಕ್ಕೆ ಪ್ರದರ್ಶನ ಏರ್ಪಡಿಸದೆ ಶ್ರದ್ಧೆ ಮತ್ತು ಶಿಸ್ತಿನಿಂದ ಕಲಾಕೃತಿಗಳನ್ನು ಪ್ರದರ್ಶಿಸಿದರೆ ಉತ್ತಮ ಫಲಿತಾಂಶ  ದೊರೆಯುತ್ತದೆ.`ಕ್ವೀನ್ಸ್ ಆಫ್ ಬಿಜಾಪುರ~ ಚಿತ್ರಕಲೆಗಳು ಅತ್ಯುತ್ತಮವಾಗಿ ಮೂಡಿಬಂದಿವೆ.  ಈ ಕಲಾವಿದೆಯರು ಆಯೋಜಿಸಿರುವ ಪ್ರದರ್ಶನ ಯಶಸ್ವಿಯಾಗಲಿ ಎಂದು   ಹಾರೈಸಿದರು.ಸಾರ್ವಜನಿಕ ಉದ್ಯಾನ ಹತ್ತಿರದ ಆರ್ಟ್ ಗ್ಯಾಲರಿಯಲ್ಲಿ ಚಿತ್ರಪ್ರದರ್ಶನ ಏರ್ಪಡಿಸಲಾಗಿದೆ.  ಜ. 11ರ ವರೆಗೂ ಮುಂದುವರಿಯುತ್ತದೆ. ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ವೀಕ್ಷಿಸಲು     ಅವಕಾಶವಿದೆ.

 

ಪ್ರತಿಕ್ರಿಯಿಸಿ (+)