ಕ್ಷಿಪ್ರಗತಿ ಚಿಪ್ ಮೆಮ್ರಿಸ್ಟೋರ್!

7

ಕ್ಷಿಪ್ರಗತಿ ಚಿಪ್ ಮೆಮ್ರಿಸ್ಟೋರ್!

Published:
Updated:
ಕ್ಷಿಪ್ರಗತಿ ಚಿಪ್ ಮೆಮ್ರಿಸ್ಟೋರ್!

ಲಂಡನ್ ಮೂಲದ ವಿಜ್ಞಾನಿಗಳು ಗರಿಷ್ಠ ವೇಗ ಮತ್ತು ಕ್ಷಿಪ್ರಗತಿ ಕಾರ್ಯನಿರ್ವಹಣಾ ಸಾಮರ್ಥ್ಯ ಹೊಂದಿರುವ ಕಂಪ್ಯೂಟರ್ ಚಿಪ್ ಅಭಿವೃದ್ಧಿಪಡಿಸಿದ್ದಾರೆ. `ಮೆಮ್ರಿಸ್ಟೋರ್~ ಎಂದು ಹೆಸರಿಸಲಾಗಿರುವ ಈ ಚಿಪ್ ಸಾಂಪ್ರದಾಯಿಕ ಗಣಕಯಂತ್ರಗಳ ಮೆಮೊರಿ ಚಿಪ್(ಸ್ಮರಣ ಕೋಶ)ಗಳಿಗಿಂತಲೂ 100 ಪಟ್ಟು ಹೆಚ್ಚಿನ ವೇಗದ್ದಾಗಿದೆ.ವಿಶೇಷವೆಂದರೆ ಇದನ್ನು ಈಗಿನ `ಸೆಮಿಕಂಡಕ್ಟರ್~ ತಾಂತ್ರಿಕತೆ ಬಳಸಿಯೇ ನಿರ್ಮಿಸಲಾಗಿದೆ. ಅತ್ಯಂತ ಅಗ್ಗದ ದರದಲ್ಲಿ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕುರಿತೂ ಅಧ್ಯಯನಗಳು ನಡೆಯುತ್ತಿವೆ.ತನ್ನ ಮೂಲಕ ಹರಿಯುವ ವಿದ್ಯುತ್ ಪ್ರವಾಹ ಆಧರಿಸಿ ಈ ಚಿಪ್‌ನ ಪ್ರತಿರೋಧಕ ಶಕ್ತಿಯಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ಆದ್ದರಿಂದ ಇದ      ಕ್ಕಿದ್ದಂತೆ ವಿದ್ಯುತ್ ಸಂಪರ್ಕ ಕಡಿತಗೊಂಡರೂ, ಕಂಪ್ಯೂಟರ್‌ನ ಸ್ಮರಣ ಶಕ್ತಿ ಜಾಗೃತವಾಗಿರುತ್ತದೆ. ಎಲ್ಲಾ ದತ್ತಾಂಶವನ್ನೂ `ಮೆಮ್ರಿಸ್ಟೋರ್~ ನೆನಪಿನಲ್ಲಿ ಇಟ್ಟುಕೊಂಡಿರುತ್ತದೆ.`ಸಂಗ್ರಹಣ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ಲಾಶ್ ಮೆಮೊರಿ ಬಳಕೆಯ ಗರಿಷ್ಠ ಮಿತಿಯನ್ನು ಈಗಾಗಲೇ ತಲುಪಲಾಗಿದೆ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ದುಬಾರಿ ಹಣ ಖರ್ಚುಮಾಡಬೇಕಾಗುತ್ತದೆ~ ಎನ್ನುತ್ತಾರೆ ಈ ಸಂಶೋಧನೆಯಲ್ಲಿ ಮುಖ್ಯ ಪಾತ್ರ ವಹಿಸಿರುವ ಲಂಡನ್ ವಿಶ್ವವಿದ್ಯಾಲಯ ಕಾಲೇಜಿನ ಗಣಕಯಂತ್ರ ವಿಜ್ಞಾನಿ ಆಂಥೊನಿ ನಿಯೋನ್. ಇನ್ನೂ ಪ್ರಯೋಗಾಲಯದಲ್ಲಿರುವ ಈ ಚಿಪ್ ಹಲವು ಅಧ್ಯಯನಗಳ ನಂತರ ಎಲೆಕ್ಟ್ರಾನಿಕ್ ಮಾರುಕಟ್ಟೆಗೆ ಬರಲಿದೆ.ಹ್ಯೂಲೆಟ್ ಪಕಾರ್ಡ್‌ನ (ಎಚ್‌ಪಿ) ಎಂಜಿನಿಯರ್‌ಗಳು ಈಗಾಗಲೇ `ಮೆಮ್ರಿಸ್ಟೋರ್~ನ  ಪ್ರಾತ್ಯಕ್ಷಿಕೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿಪ್ ಆಧರಿಸಿದ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಕುರಿತೂ `ಎಚ್‌ಪಿ~ ಚಿಂತನೆ ನಡೆಸುತ್ತಿದೆ. ಈಗಿರುವ ಸೆಮಿಕಂಡಕ್ಟರ್ ದರದಲ್ಲೇ ಅದಕ್ಕೆ ಪ್ರತಿಸ್ಪರ್ಧಿಯಾಗಿ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಇರುವ ಇತರೆ ಸವಾಲುಗಳ ಕುರಿತೂ ಸಂಶೋಧಕರು ಹೆಚ್ಚಿನ ಗಮನ ಹರಿಸುತ್ತಿದ್ದಾರೆ.  2010ರಲ್ಲಿ ವಿಜ್ಞಾನಿಗಳು ಇಂತಹದೇ ಚಿಪ್ ಒಂದನ್ನು ಅಭಿವೃದ್ಧಿಪಡಿಸಿದ್ದರು.ತುಂಬಾ ಸೂಕ್ಷ್ಮಗ್ರಾಹಿಯಾಗಿದ್ದ ಅದು ನಿರ್ವಾತ ವಾತಾವರಣದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಹಾಗಾಗಿ ವಾಣಿಜ್ಯ ಬಳಕೆ ಪ್ರಯತ್ನ ವಿಫಲವಾಗಿತ್ತು.

ಆಂಥೊನಿ ಮತ್ತವರ ತಂಡ  `ಎಲ್‌ಇಡಿ~ಗೆ ಸಂಬಂಧಿಸಿದ ಸಿಲಿಕಾನ್ ಡಿವೈಸ್ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು. ಅನಿರೀಕ್ಷಿತವಾಗಿ `ಎಲ್‌ಇಡಿ~ ಡಿವೈಸ್ ಗಾಳಿ ಮತ್ತು ಬೆಳಕಿನ ಸಂಪರ್ಕಕ್ಕೆ ಬಂದಾಗ ಅದರ ಮೇಲೆ ಸಿಲಿಕಾನ್ ಆಕ್ಸೈಡ್‌ನ ತೆಳು ಪೊರೆಸೃಷ್ಟಿಯಾಯಿತು.ಇದೇ `ಮೆಮ್ರಿಸ್ಟೋರ್~ನ ಮೂಲ ಎನ್ನುತ್ತಾರೆ ಸಂಶೋಧಕರು. ಈ ಸಂಶೋಧನೆ ಕುರಿತ ಸಮಗ್ರ ಮಾಹಿತಿ ಅನ್ವಯಿಕ ಭೌತಶಾಸ್ತ್ರ ನಿಯತಕಾಲಿಕದಲ್ಲಿ ಇತ್ತೀಚೆಗೆ ಪ್ರಕಟವಾಗಿದೆ. ಯೂರೋಪಿಯನ್ ಮೆಟಿರಿಯಲ್ಸ್ ರೀಸರ್ಚ್ ಸೊಸೈಟಿ ಸಭೆಯಲ್ಲೂ ಈ ಕುರಿತು ಸುಧೀರ್ಘ ಚರ್ಚೆ ನಡೆದಿದೆ.`ಮೆಮ್ರಿಸ್ಟೋರ್~ ಚಿಪ್ ಈಗಿನ `ಸಾಲಿಡ್-ಸ್ಟೇಟ್  ಪ್ಲಾಶ್~ ಮೆಮೊರಿಗಿಂತಲೂ ಗರಿಷ್ಠ ಕಾರ್ಯದಕ್ಷತೆ ಹೊಂದಿದೆ. ಉದಾಹರಣೆಗೆ ಪ್ಲಾಶ್ ಮೆಮೊರಿ ಜಾಗೃತವಾಗಲು 10 ಸಾವಿರ ನ್ಯಾನೊ ಸೆಕೆಂಡ್ ಸಾಕು. ಆದರೆ, `ಮೆಮ್ರಿಸ್ಟೋರ್~ ಚಿಪ್ ಎಷ್ಟು ವೇಗವೆಂದರೆ ಇದು ತೆಗೆದುಕೊಳ್ಳುವ ಸಮಯವನ್ನು ಲೆಕ್ಕ ಹಾಕಲು ಸಹ ಸಾಧ್ಯವಿಲ್ಲ ಎನ್ನುತ್ತಾರೆ ಆಂಥೊನಿ.ಗರಿಷ್ಠ ಎಂದರೆ 90 ನ್ಯಾನೊ ಸೆಕೆಂಡ್‌ಗಿಂತ ಹೆಚ್ಚಿನ ಸಮಯ ಇದಕ್ಕೆ ತಗುಲುವುದಿಲ್ಲ ಎನ್ನುವ ಅವರು, ಇದನ್ನು ವಾಣಿಜ್ಯ ಬಳಕೆಗೆ ಮುಕ್ತಗೊಳಿಸಲು ಹಲವು ಕಂಪ್ಯೂಟರ್ ತಯಾರಿಕಾ ಕಂಪೆನಿಗಳ ಜತೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. 

        

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry