ಕ್ಷಿಪ್ರ ಕಾರ್ಯ ಪಡೆಯಿಂದ ಪಥ ಸಂಚಲನ

7

ಕ್ಷಿಪ್ರ ಕಾರ್ಯ ಪಡೆಯಿಂದ ಪಥ ಸಂಚಲನ

Published:
Updated:

ಹಿರೇಕೆರೂರ: ಪಟ್ಟಣದಲ್ಲಿ ಶುಕ್ರವಾರ ಕೇಂದ್ರ ಕ್ಷಿಪ್ರ ಕಾರ್ಯಾಚರಣೆ ಪಡೆ ಯೋಧರ ತಂಡದಿಂದ ಪಥ ಸಂಚಲನ ಜರುಗಿತು.

ತಂಡದ ಮುಖ್ಯಸ್ಥ ಇನ್ಸ್‌ಪೆಕ್ಟರ್ ಸಿಆರ್‌ಪಿ ಹನುಮಂತ ಮಾತನಾಡಿ, ಪಡೆಯಲ್ಲಿ 225 ಯೋಧರು ದಿನದ 24 ತಾಸು ಸನ್ನದ್ಧರಾಗಿರುತ್ತಾರೆ.

ಇಂತಹ 4 ತಂಡಗಳನ್ನು ಹೈದರಾಬಾದಿನಲ್ಲಿ ಕಾಯ್ದಿರಿಸಲಾಗಿದೆ. ಹೈದರಾಬಾದ್ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು 400 ಕಿ.ಮಿ. ವ್ಯಾಪ್ತಿಯಲ್ಲಿರುವ ಕರ್ನಾಟಕ, ಓಡಿಸ್ಸಾ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಯಾವುದೇ ಭಾಗಗಳಲ್ಲಿ ಕೋಮು ಗಲಭೆ, ಸಾರ್ವಜನಿಕ ಆಸ್ತಿ ಹಾನಿ, ತೀವ್ರ ಗಲಭೆಗಳು ನಡೆದ ಸಂದರ್ಭದಲ್ಲಿ ಆಯಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳ ಕರೆ ಮೇರೆಗೆ ಸ್ಥಳಕ್ಕೆ ಆಗಮಿಸಿ ಗಲಭೆ ನಿಯಂತ್ರಣಕ್ಕೆ ಕ್ಷಿಪ್ರ ಕಾರ್ಯಪಡೆ ಶ್ರಮಿಸುತ್ತದೆ. ಉದ್ನಿಗ್ನ ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.ಪಟ್ಟಣದಲ್ಲಿ ಸೌಹಾರ್ದ ಮೂಡಿಸುವ ಸಲುವಾಗಿ ಶಾಂತಿಸಭೆ ಮುಖಂಡರೊಂದಿಗೆ ಚರ್ಚಿಸಿ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳ ಸ್ಥಳಕ್ಕೆ ಭೇಟಿ ನೀಡಿ ವರದಿ ತಯಾರಿಸಲಾಗಿದೆ. ವರದಿಯನ್ನು ಕೇಂದ್ರ ಕಛೇರಿಗೆ ಕಳಿಸಲಾಗುವುದು ಎಂದು ತಿಳಿಸಿದರು.

ಓಡಿಸ್ಸಾ ಮೂಲದ ಸಬ್‌ಇನ್ಸ್‌ಪೆಕ್ಟರ್ ಅನುಪಮ ನಾಯಕ, ಬಿಹಾರ ಮೂಲದ ಸಬ್‌ಇನ್ಸ್‌ಪೆಕ್ಟರ್ ಶಕಿ ಚಂದ್ರಮ, ಪಟ್ಟಣದ ಪಿಎಸ್‌ಐ ಜಿ.ಟಿ.ಶ್ರೀಶೈಲಮೂರ್ತಿ, ಎಎಸ್‌ಐ ಬಿ.ಎಂ.ಜುಮ್ಮಣ್ಣನವರ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry