ಕ್ಷೀಣಿಸಿದ ಮುಂಗಾರು

7

ಕ್ಷೀಣಿಸಿದ ಮುಂಗಾರು

Published:
Updated:

ಬೆಂಗಳೂರು: ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಒಳನಾಡಿನಲ್ಲಿ ನೈರುತ್ಯ ಮುಂಗಾರು ಕ್ಷೀಣಿಸಿದೆ. ಕರಾವಳಿಯ ಹಲವೆಡೆ ಮತ್ತು ಒಳನಾಡಿನ ಕೆಲವೆಡೆ ಮಳೆಯಾಗಿದೆ.ಭಟ್ಕಳದಲ್ಲಿ 9 ಸೆಂ.ಮೀ. ಮಳೆಯಾಗಿದೆ. ಅಂಕೋಲಾ 6, ಶಿರಾಲಿ 5, ಗೋಕರ್ಣ  4, ಗೇರುಸೊಪ್ಪ, ಶಿರಸಿ, ಹೊನ್ನಾವರ 3, ಕುಮಟಾ, ಕದ್ರಾ, ಸಿದ್ದಾಪುರ (ಉ.ಕ), ಕಾರವಾರ, ಲಿಂಗನಮಕ್ಕಿ 2, ಬನವಾಸಿ, ಮಂಚಿಕೇರಿ, ಯಲ್ಲಾಪುರ, ಕ್ಯಾಸಲ್‌ರಾಕ್‌, ಜೋಯಿಡಾ, ತಾಳಗುಪ್ಪ, ಹೊಸನಗರ ದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿಯ ಜಿಲ್ಲೆಗಳು, ದಕ್ಷಿಣ ಒಳನಾಡಿನ ಘಟ್ಟ ಪ್ರದೇಶಗಳಲ್ಲಿ  ಭಾರಿ ಮಳೆಯಾಗುವ ಸಂಭವವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry